ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಈ ಮಾತ್ರೆ ಕೋವಿಡ್ ಸಾವಿನ ಅಪಾಯವನ್ನು ಅರ್ಧದಷ್ಟು ತಗ್ಗಿಸಬಲ್ಲದು

|
Google Oneindia Kannada News

ಮರ್ಕ್ ಸಂಸ್ಥೆಯು ಸಿದ್ಧಪಡಿಸಿರುವ ಮಾತ್ರೆಯಿಂದ ಕೋವಿಡ್‌ನ ಸಾವಿನ ಅಪಾಯದಿಂದ ಶೇ.50ರಷ್ಟು ಕಡಿಮೆ ಮಾಡಬಹುದು ಎಂದು ಹೇಳಲಾಗಿದೆ.

ಈ ಪ್ರಾಯೋಗಿಕ ಕೊರೊನಾ ಮಾತ್ರೆಯು ಕೊರೊನಾ ಸೋಂಕಿಗೆ ಒಳಗಾದ ಮಂದಿಯಲ್ಲಿ ಆಸ್ಪತ್ರೆಗೆ ದಾಖಲಾಗುವ ಹಾಗೂ ಸಾವಿನ ಸಾಧ್ಯತೆಯನ್ನು ಅರ್ಧದಷ್ಟು ಕಡಿಮೆ ಮಾಡುತ್ತದೆ ಎಂದು ಔಷಧ ತಯಾರಿಕಾ ಕಂಪನಿ ಹೇಳಿದೆ.

ಬ್ರಿಟನ್‌ನ ಕೋವಿಡ್ ಲಸಿಕೆ ಮಾನ್ಯತೆ ನೀತಿಗೆ ಭಾರತದ ತಿರುಗೇಟು

ಒಂದೊಮ್ಮೆ ಈ ಮಾತ್ರೆಗೆ ಅನುಮೋದನೆ ದೊರೆತರೆ ಸಾಂಕ್ರಾಮಿಕ ರೋಗದ ವಿರುದ್ಧ ಹೋರಾಡುವ ಪ್ರಯತ್ನದಲ್ಲಿ ಪ್ರಮುಖ ಮುನ್ನಡೆಯಾಗಲಿದೆ, ಕೋವಿಡ್‌ 19ಗೆ ಚಿಕಿತ್ಸೆ ನೀಡಬಹುದಾದ ಮೊದಲ ಮಾತ್ರ ಇದಾಗಲಿದೆ. ಅಮೆರಿಕದಲ್ಲಿ ಈಗ ಅಧಿಕೃತವಾಗಿರುವ ಎಲ್ಲಾ ಕೋವಿಡ್ 19 ಚಿಕಿತ್ಸೆಗೆ ಬಳಸುವ ಔಷಧಕ್ಕೆ ಐವಿ ಅಥವಾ ಇಂಜೆಕ್ಷನ್ ಅಗತ್ಯವಿದೆ.

Merck Says Experimental Covid Pill Cuts Risk Of Death, Hospitalization By 50 Percent

ಈ ಮಾತ್ರೆಯನ್ನು ಕೋವಿಡ್ ರೋಗಿಗಳ ಬಳಕೆಗೆ ಅಧಿಕೃತಗೊಳಿಸಲು ಅಮೆರಿಕ ಹಾಗೂ ಪ್ರಪಂಚಾದ್ಯಂತ ಇರುವ ಆರೋಗ್ಯ ಅಧಿಕಾರಿಗಳನ್ನು ಸಂಪರ್ಕಿಸುವುದಾಗಿ ಮಾಹಿತಿ ನೀಡಿದೆ.

ಈ ಮಾತ್ರೆಯ ಪ್ರಯೋಗದ ಫಲಿತಾಂಶಗಳು ಪ್ರಬಲವಾಗಿರುವುದರಿಂದ ಸದ್ಯ ಮಾತ್ರೆಯ ಬಳಕೆ ನಿಲ್ಲಿಸುವಂತೆ ವೈದ್ಯಕೀಯ ತಜ್ಞರ ಸ್ವತಂತ್ರ ಗುಂಪು ಶಿಫಾರದು ಮಾಡಿದೆ.
ಮೆರ್ಕ್ ಸಂಸ್ಥೆಯ ವರದಿಯನ್ನು ಸದ್ಯ ಯಾವುದೇ ಉನ್ನತ ವೈದ್ಯಕೀಯ ತಂಡವು ಪರಿಶೀಲನೆ ಮಾಡಿಲ್ಲ. ಭವಿಷ್ಯದ ವೈದ್ಯಕೀಯ ಪರಿಶೀಲನೆಯಲ್ಲಿ ಅದನ್ನು ಪ್ರಸ್ತುತಪಡಿಸಲು ಯೋಜನೆ ರೂಪಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

ಮಾತ್ರೆಗೆ ಅನುಮೋದನೆ ಕುರಿತು ಅಮೆರಿಕದ ಆಹಾರ ಮತ್ತು ಔಷಧ ಆಡಳಿತದೊಂದಿಗೆ ಚರ್ಚಿಸುತ್ತಿದ್ದೇವೆ ಹಾಗೂ ಮುಂಬರುವ ದಿನಗಳಲ್ಲಿ ಡೇಟಾವನ್ನು ಪರಿಶೀಲನೆಗಾಗಿ ಸಲ್ಲಿಸಲು ಮುಂದಾಗಿದ್ದೇವೆ ಎಂದು ತಿಳಿಸಿದ್ದಾರೆ.

ಮೊಲ್ನುಫಿರಾವಿರ್ ಎಂದು ಈ ಮಾತ್ರೆಗೆ ನಾಮಕರಣ ಮಾಡಲಾಗಿದೆ. ಈ ಮಾತ್ರೆಯನ್ನು ಪಡೆದ ರೋಗಿಗಳಲ್ಲಿ ಕೋವಿಡ್ 19 ಲಕ್ಷಣಗಳು ಐದು ದಿನಗಳೊಳಗೆ ಕಡಿಮೆ ಆಗಿದ್ದು, ಅರ್ದದಷ್ಟು ಆಸ್ಪತ್ರೆಗೆ ದಾಖಲಾಗುವ ಮತ್ತು ಸಾವಿನ ಪ್ರಮಾಣ ಕಡಿಮೆಯಾಗಿದೆ ಎಂದು ಹೇಳಿದೆ.

ಮಧುಮೇಹ, ಸ್ಥೂಲಕಾಯ ಅಥವಾ ಹೃದಯ ಸಂಬಂಧಿ ಆರೋಗ್ಯ ಸಮಸ್ಯೆಗಳಿಂದಾಗಿ ಕೊರೊನಾದಿಂದ ಹೆಚ್ಚು ಅಪಾಯವೆಂದು ಪರಿಗಣಿಸಲ್ಪಟ್ಟ ಮಧ್ಯಮ ಪ್ರಮಾಣದ ಕೋವಿಡ್ ಲಕ್ಷಣಗಳನ್ನು ಹೊಂದಿರುವ 775 ವಯಸ್ಕರ ಮೇಲೆ ಅಧ್ಯಯನ ನಡೆಸಲಾಗಿದೆ.

ಈ ಮಾತ್ರೆಯು ಕೊರೊನಾ ಸೋಂಕಿನ ವಿರುದ್ಧ ಹೋರಾಡಲು ಸಮರ್ಥ ಎಂದು ಕಂಡುಬಂದರೆ, ಸದ್ಯಕ್ಕೆ ಲಭ್ಯವಿರುವ ಕೊರೊನಾ ಚಿಕಿತ್ಸೆಗೆ ಮತ್ತೊಂದು ಆಯ್ಕೆಯಾಗಲಿದೆ ಹಾಗೂ ಲಸಿಕೆ ಹೊರತಾಗಿ ಇರುವ ಮತ್ತೊಂದು ಆಯ್ಕೆ ಎನಿಸಲಿದೆ.

ದೇಶದಲ್ಲಿ ಕೊರೊನಾ ಸೋಂಕು ಕಾಣಿಸಿಕೊಂಡು ವರ್ಷ ಕಳೆದರೂ ಜನರಿಗೆ ಚಿಕಿತ್ಸೆಯ ಆಯ್ಕೆಗಳು ಕೆಲವೇ ಕೆಲವು ಇವೆ. ಸದ್ಯಕ್ಕೆ ಗೈಲೀಡ್ ಸೈನ್ಸ್‌ ಇಂಕ್‌ನ ರೆಮ್ಡಿಸಿವಿರ್‌ ಅನ್ನು ಮಾತ್ರ ಬಳಸಲಾಗುತ್ತಿದೆ. ಆಸ್ಪತ್ರೆಗೆ ಸೇರಿದ ರೋಗಿಗಳಿಗೆ ಹೆಚ್ಚುವರಿಯಾಗಿ ಇದನ್ನು ನೀಡಲಾಗುತ್ತಿದೆ.

ಸದ್ಯಕ್ಕೆ ಪ್ರಯೋಗದಲ್ಲಿರುವ ಮಾಲ್ನುಪಿರಾವಿರ್ ಮಾತ್ರೆಯು ಸೋಂಕು ಕಾಣಿಸಿಕೊಂಡ ಆರಂಭಿಕ ಹಂತದಲ್ಲಿ ಉತ್ತಮ ಪರಿಣಾಮ ಬೀರಬಲ್ಲದು ಎಂದು ತಿಳಿದುಬಂದಿದೆ.

ಕೊರೊನಾ 3ನೇ ಅಲೆ ಭೀತಿ ನಡುವೆಯೇ ಶುಕ್ರವಾರ ಬೆಳಿಗ್ಗೆ 8 ಗಂಟೆಗೆ ಕೊನೆಗೊಂಡ 24 ತಾಸುಗಳ ಅವಧಿಯಲ್ಲಿ ದೇಶದಲ್ಲಿ 26,727 ಕೊರೊನಾ ಪ್ರಕರಣಗಳು ದೃಢಪಟ್ಟಿದ್ದು, ಇದೇ ಅವಧಿಯಲ್ಲಿ 277 ಮಂದಿ ಸಾವನ್ನಪ್ಪಿದ್ದಾರೆಂದು ತಿಳಿದುಬಂದಿದೆ.

ಶುಕ್ರವಾರದ ಅಂಕಿ ಸಂಖ್ಯೆಯೊಂದಿಗೆ ದೇಶದಲ್ಲಿ ಒಟ್ಟು ಸೋಂಕಿತರ ಸಂಖ್ಯೆ 3,37,66,707ಕ್ಕೆ ತಲುಪಿದ್ದು, 4,48,339ಕ್ಕೆ ಸಾವಿನ ಸಂಖ್ಯೆ ಏರಿಕೆಯಾಗಿದೆ ಎಂದು ಕೇಂದ್ರ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವಾಲಯ ಮಾಹಿತಿ ನೀಡಿದೆ.

ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ ದೇಶದಲ್ಲಿ ಸೋಂಕಿತರ ಸಂಖ್ಯೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಸಕ್ರಿಯ ಪ್ರಕರಣಗಳ ಸಂಖ್ಯೆ 2,75,224ಕ್ಕೆ ತಲುಪಿದೆ. ಈ ನಡುವೆ ಕಳೆದ 24 ಗಂಟೆಗಳಲ್ಲಿ 28,246 ಮಂದಿ ಗುಣಮುಖರಾಗುವುದರೊಂದಿಗೆ ಈವರೆಗೂ ಚೇತರಿಸಿಕೊಂಡವರ ಸಂಖ್ಯೆ 3,30,43,144ಕ್ಕೆ ತಲುಪಿದೆ.

ಇನ್ನು ಭಾರತದಲ್ಲಿ ಒಂದೇ 15,20,899 ಮಂದಿಯನ್ನು ಕೊರೊನಾ ಪರೀಕ್ಷೆಗೊಳಪಡಿಸಲಾಗಿದ್ದು, 57,04,77,338 ಮಂದಿಯನ್ನು ಪರೀಕ್ಷೆಗೊಳಪಡಿಸಲಾಗಿದೆ ಎಂದು ಐಸಿಎಂಆರ್ ಮಾಹಿತಿ ನೀಡಿದೆ.

English summary
A pill to treat Covid-19 was so successful in reducing the most severe outcomes of the illness, that clinical trials of the medication were stopped early so more people might benefit, drugmaker Merck & Co. announced Friday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X