ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೆಕ್ ಲೋಕದ ಲಿಂಗ ತಾರತಮ್ಯ ಬಯಲು

By Kiran B Hegde
|
Google Oneindia Kannada News

ಬೆಂಗಳೂರು, ನ. 27: ಕೆಲವು ದಿನಗಳ ಹಿಂದಷ್ಟೇ ಮಹಿಳೆಯರು ಹೆಚ್ಚು ವೇತನಕ್ಕೆ ಆಗ್ರಹಿಸಬಾರದೆಂದು ಮೈಕ್ರೋಸಾಫ್ಟ್ ಸಿಇಓ ಸತ್ಯ ನಾದೆಲ್ಲಾ ನೀಡಿದ್ದ ಸಲಹೆಗೆ ತೀವ್ರ ವಿರೋಧ ವ್ಯಕ್ತವಾಗಿತ್ತು. ಅನಂತರ ಅವರು ಕ್ಷಮೆಯಾಚಿಸಬೇಕಾಯಿತು. ಆದರೆ, ಈ ಪ್ರಕರಣ ಟೆಕ್ಕಿಗಳ ಲೋಕದಲ್ಲೂ ಕಂಡುಬರುತ್ತಿರುವ ಲಿಂಗ ತಾರತಮ್ಯವನ್ನು ಜಗತ್ತಿಗೆ ಬಹಿರಂಗಗೊಳಿಸಿತ್ತು.

ಈ ಸಮಸ್ಯೆ ಅನೇಕ ಕಂಪನಿಗಳಲ್ಲಿದೆ ಎಂಬುದು ಗ್ಲಾಸ್‌ಡೋರ್ ವೆಬ್‌ಸೈಟ್ 25 ಅತ್ಯಂತ ದೊಡ್ಡ ಸಾಫ್ಟ್‌ವೇರ್ ಕಂಪನಿಗಳಲ್ಲಿ ನಡೆಸಿದ ಸಮೀಕ್ಷೆಯಲ್ಲಿ ಬಯಲಾಗಿದೆ. ಅಮೆಜಾನ್, ಫೇಸ್‌ಬುಕ್, ಟ್ವಿಟ್ಟರ್ ಸೇರಿದಂತೆ ವಿವಿಧ ಸಾಫ್ಟ್‌ವೇರ್ ಕಂಪನಿಗಳಲ್ಲಿ ಪುರುಷರು ತಮ್ಮದೇ ಮಟ್ಟದ ಮಹಿಳೆಯರಿಗಿಂತ ಹೆಚ್ಚು ಸಂಬಳ ಪಡೆಯುತ್ತಿದ್ದಾರೆ. [ನೋಕಿಯಾ ಹೆಸರು ಕೈಬಿಟ್ಟ ಮೈಕ್ರೋಸಾಫ್ಟ್]

software

ಮೈಕ್ರೋಸಾಫ್ಟ್ ಕಂಪನಿಯಲ್ಲಿ ಮಹಿಳೆಯರಿಗಿಂತ ಪುರುಷರು ವರ್ಷಕ್ಕೆ 6 ಸಾವಿರ ಡಾಲರ್‌ನಷ್ಟು ಹೆಚ್ಚು ವೇತನ ಪಡೆಯುತ್ತಿದ್ದಾರೆ. 3.2 ವರ್ಷ ಅನುಭವ ಹೊಂದಿರುವ ಮಹಿಳೆಯರು 94,967 ಡಾಲರ್ ವೇತನ ಪಡೆಯುತ್ತಿದ್ದರೆ, 3.3 ವರ್ಷ ಅನುಭವ ಇರುವ ಪುರುಷರು 101,006 ಡಾಲರ್ ವೇತನ ಹೊಂದಿದ್ದಾರೆ. [ಕನ್ನಡ ಎಸ್ಎಂಎಸ್ ಭಾಗ್ಯ]

ಆದರೆ, ಗೂಗಲ್ ಕಂಪನಿಯಲ್ಲಿ ವಿರುದ್ಧ ವಾತಾವರಣ ಕಂಡುಬಂದಿದೆ. 3.5 ವರ್ಷ ಅನುಭವ ಹೊಂದಿರುವ ಮಹಿಳಾ ಅಭಿಯಂತರರು 117,740 ಡಾಲರ್ ವೇತನ ಪಡೆಯುತ್ತಿದ್ದರೆ, 3.9 ವರ್ಷ ಅನುಭವ ಹೊಂದಿರುವ ಪುರುಷ ಅಭಿಯಂತರ 113,548 ಡಾಲರ್ ವೇತನ ಪಡೆಯುತ್ತಿದ್ದಾರೆ. [ಫೇಕ್ ಕಂಪನಿಗಳು]

ಮಹಿಳೆಗೆ ವೃತ್ತಿ ಸಂತೃಪ್ತಿಯೂ ಕಡಿಮೆ: ವೇತನ, ಕೆಲಸ ಸೇರಿದಂತೆ ಇನ್ನಿತರ ಅಂಶಗಳನ್ನು ಪರಿಗಣಿಸಿದಾಗ ವೃತ್ತಿ ಜೀವನದಲ್ಲಿ 25ರಲ್ಲಿ ನಾಲ್ಕು ಕಂಪನಿಗಳಲ್ಲಿ (ಟೆಕ್ಸಾಸ್ ಇನ್‌ಸ್ಟ್ರುಮೆಂಟ್ಸ್, ಎಪಿಕ್ ಸಿಸ್ಟಮ್ಸ್, ಹೆವ್‌ಲೆಟ್ ಪಕಾರ್ಡ್ ಮತ್ತು ಇಂಟೆಲ್) ಮಾತ್ರ ಪುರುಷರಿಗಿಂತ ಮಹಿಳೆಯರು ಹೆಚ್ಚು ಸಂತೃಪ್ತರಾಗಿದ್ದಾರೆ. ಆರು ಕಂಪನಿಗಳಲ್ಲಿ ಪುರುಷರು ಹಾಗೂ ಮಹಿಳೆಯರ ಸಂತೃಪ್ತಿ ಪ್ರಮಾಣ ಒಂದೇ ತೆರನಾಗಿದೆ. ಆದರೆ, ಉಳಿದ ಕಂಪನಿಗಳಲ್ಲಿ ಪುರುಷರೇ ಮಹಿಳೆಯರಿಗಿಂತ ಹೆಚ್ಚು ತೃಪ್ತರು. [ಸಾಫ್ಟ್ ವೇರ್ ಇಂಜಿನಿಯರ್ ದೋಚಿದ ಆಟೋ ಚಾಲಕ]

ಮುಖಂಡತ್ವ, ಸಂಸ್ಕೃತಿ ಮತ್ತು ಗೌರವ, ಭವಿಷ್ಯದ ಅವಕಾಶಗಳು ಮತ್ತು ಕರ್ತವ್ಯ ಸಮಯದ ಹೊಂದಾಣಿಕೆ ವಿಷಯದಲ್ಲಿ ಮಹಿಳೆಯರಿಗಿಂತ ಪುರುಷರ ಸಂತೃಪ್ತಿ ಪ್ರಮಾಣ ಹೆಚ್ಚು ಎಂದು ಗ್ಲಾಸ್‌ಡೋರ್ ವೆಬ್‌ಸೈಟ್ ಹೇಳಿದೆ.

English summary
In software companies men report earning a higher base salary than women for the same role. It is revealed in a survey conducted by American website Glassdoor.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X