ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕೊರೊನಾ ಸೋಂಕು: ಮಹಿಳೆಯರಿಗಿಂತ ಪುರುಷರಲ್ಲೇ ಹೆಚ್ಚು ಏಕೆ?

|
Google Oneindia Kannada News

ಬೆಂಗಳೂರು, ಮೇ 11: ಕೊರೊನಾ ಸೋಂಕಿಗೆ ಮಹಿಳೆಯರಿಗಿಂತ ಪುರುಷರು ಯಾಕೆ ಹೆಚ್ಚು ತುತ್ತಾಗುತ್ತಾರೆ ಎಂಬ ಪ್ರಶ್ನೆಗೆ ಕೆಲವು ಅಧ್ಯಯನಗಳು ಉತ್ತರ ನೀಡಿವೆ.

ಮಹಿಳೆಯರ ರಕ್ತದಲ್ಲಿರುವ ಕಿಣ್ವಕ್ಕಿಂತ ಪುರುಷರಲ್ಲಿ ಕೊರೊನಾ ವೈರಸ್‌ ಅನ್ನು ಆಕರ್ಷಿಸುವ ಕಿಣ್ವಗಳಿವೆ ಎಂಬುದು ಪತ್ತೆಯಾಗಿದೆ. ಈ ಕುರಿತು ಯುರೂಪಿಯನ್ ಅಧ್ಯಯನವೊಂದು ಮಾಹಿತಿ ನೀಡಿದೆ.

ಆಂಜಿಯೋಟೆನ್ಸಿನ್ ಕನ್‌ವರ್ಟಿಂಗ್ ಎಂಜೈಮ್ 2(ACE2) ಇದು ಹೃದಯದಲ್ಲಿ, ಮೂತ್ರಕೋಶ ಹಾಗೂ ಇತರೆ ಜೀವಕೋಶಗಳಲ್ಲಿ ಕಂಡು ಬರುತ್ತದೆ. ಪುರುಷರಲ್ಲಿ ಕೊರೊನಾ ವೈರಸ್‌ನಿಂದಾಗುವ ಉಸಿರಾಟ ತೊಂದರೆಗೆ ಇದೂ ಕೂಡ ಕಾರಣವಾಗಬಲ್ಲದು.

9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಕೊರೊನಾ ವೈರಸ್ ಆತಂಕ!9 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಿಗಿಲ್ಲ ಕೊರೊನಾ ವೈರಸ್ ಆತಂಕ!

ರಕ್ತ ಪ್ಲಾಸ್ಮ ಎಂಬ ಜೀವರಸದಿಂದ ಕೂಡಿದ್ದು, ಅದರಲ್ಲಿ ವ್ಯವಸ್ಥಿತ ಪ್ರಮಾಣದಲ್ಲಿ ಕೆಂಪು ರಕ್ತಕಣಗಳು ಬಿಳಿರಕ್ತಕಣಗಳು, ಮತ್ತು ಪ್ಲೇಟ್ ಲೆಟ್ ಎಂಬಜೀವಕೋಶಗಳು ತೇಲುತ್ತಿರುತ್ತವೆ.ಪ್ಲಾಸ್ಮ ಶೇ. 91-92% ರಷ್ಟು ನೀರಿನಿಂದಾಗಿದ್ದು, ಉಳಿದ ಭಾಗ ಘನವಸ್ತುಗಳಿಂದಾಗಿದೆ. ಸಸಾರಜನಕ, ಯೂರಿಯ, ಆಸಿಡ್, ಕ್ರಿಯಾಟಿನಿನ್, ಅಮೋನಿಯಾ, ಅಮೈನೋ ಆಸಿಡ್, ಗ್ಜಾಂಥಿನ್, ಪದಾರ್ಥಗಳು, ಶೇಕಡ 7.5% ರಷ್ಟು.

ರಕ್ತದಲ್ಲಿರುವ ಅಂಶಗಳೇನೇನು?

ರಕ್ತದಲ್ಲಿರುವ ಅಂಶಗಳೇನೇನು?

ಇನ್ನುಳಿದದ್ದು, ಸೋಡಿಯಮ್, ಪೊಟ್ಯಾಸಿಯಮ್, ಕ್ಯಾಲ್ಸಿಯಮ್, ಮೆಗ್ನೀಶಿಯಮ್, ಫಾಸ್ಫರಸ್, ಮೊದಲಾದ, ನಿರವಯವ ಪದಾರ್ಥಗಳು. ಪಿಷ್ಟ, ಅಂದರೆ ಮುಖ್ಯವಾಗಿ ಗ್ಲೂಕೋಸ್, ಕೊಬ್ಬು, ಅಂದರೆ, ಕೊಲೆಸ್ಟರಾಲ್, ಟ್ರೈಗ್ಲಿಸರೈಡ್, ನಾನಾ ತರಹದ ಹಾರ್ಮೋನ್‍ಗಳು, ಕಿಣ್ವಗಳು, ಪ್ರತಿರೋಧಕಗಳು, ಗ್ಜಾಂಥೋಫಿಲಿನ್, ಕೆರೋಟಿನ್ ಮುಂತಾದ ಬಣ್ಣಬರಿಸುವ ಪದಾರ್ಥಗಳು. ಸೋಡಿಯಮ್ ಪೊಟ್ಯಾಸಿಯಮ್ ಲವಣಾಂಶಗಳು ನಿಖರ ಪ್ರಮಾಣದಲ್ಲಿಲ್ಲದಿದ್ದರೆ ಕಾಯಿಲೆ ಖಂಡಿತ. ರಕ್ತದ ವಿಶಿಷ್ಟ ಗುರುತ್ವಾಕರ್ಷಣೆ, 1.048ರಿಂದ, 1.066 ಇರುತ್ತದೆ. ದೇಹದ ನೀರಿನ ಅಂಶ ಕಡಿಮೆಯದಂತೆ ಇದರ ಪ್ರಮಾಣ ಕಡಿಮೆಯಾಗುತ್ತದೆ.

ACE2ಎಂದರೇನು ಅದರ ಕಾರ್ಯವೇನು?

ACE2ಎಂದರೇನು ಅದರ ಕಾರ್ಯವೇನು?

ಕಿಣ್ವ ಎಂದರೆ ರಕ್ತಕ್ಕೆ ಬಣ್ಣ ಭರಿಸುವ ಪದಾರ್ಥಗಳಲ್ಲಿ ಒಂದಾಗಿದೆ. ಆಂಜಿಯೋಟೆನ್ಸಿನ್-ಪರಿವರ್ತಿಸುವ ಕಿಣ್ವ 2 (ಎಸಿಇ 2) ಹೃದಯ, ಮೂತ್ರಪಿಂಡಗಳು ಮತ್ತು ಇತರ ಅಂಗಗಳಲ್ಲಿ ಕಂಡುಬರುತ್ತದೆ. ಕೊರೊನಾವೈರಸ್ ನಿಂದ ಉಂಟಾಗುವ ಉಸಿರಾಟದ ಕಾಯಿಲೆಯಾದ COVID-19 ನಲ್ಲಿ, ಸೋಂಕು ಶ್ವಾಸಕೋಶಕ್ಕೆ ಮುಂದುವರೆಯಲು ಈ ಕಿಣ್ವದ ಪಾತ್ರ ಹೆಚ್ಚಿದೆ.


ಎಸಿಇ ಹಾಗೂ ಎಆರ್‌ಬಿಸಿಯನ್ನು ಹೃದಯಘಾತ, ಮಧುಮೇಹ, ಮೂತ್ರಕೋಶಕ್ಕೆ ಸಂಬಂಧಿಸಿದ ಕಾಯಿಲೆ ಹೊಂದಿದವರಿಗೆ ನೀಡಲಾಗುತ್ತದೆ. ಆದರೆ ಇದು ಕೊವಿಡ್ 19 ರೋಗವನ್ನು ಗುಣಪಡಿಸುವುದಿಲ್ಲ ಎಂದು ಕೂಡ ವರದಿ ತಿಳಿಸಿದೆ.

ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು

ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿಗೆ ಕೊರೊನಾ ಸೋಂಕು

ಕೊವಿಡ್ 19 ರೋಗವು ವಿಶ್ವದಾದ್ಯಂತ 40 ಲಕ್ಷಕ್ಕೂ ಹೆಚ್ಚು ಮಂದಿಗೆ ಹರಡಿದೆ. ಹಾಗೆಯೇ 2 ಲಕ್ಷ 77 ಸಾವಿರ ಮಂದಿ ಮೃತಪಟ್ಟಿದ್ದಾರೆ.
11 ಯುರೋಪಿಯನ್ ದೇಶಗಳಲ್ಲಿ ಹೃದಯಾಘಾತಕ್ಕೊಳಗಾದ 3500ಕ್ಕೂ ಹೆಚ್ಚು ಪುರುಷ ಹಾಗೂ ಮಹಿಳೆಯ ರಕ್ತದ ಮಾದರಿಯನ್ನು ಪಡೆದುಕೊಳ್ಳಲಾಗಿದೆ. ಆದರೆ ಈ ಎಸಿಇ2 ಮಹಿಳೆಯರಿಗಿಂತ ಪುರುಷರ ಮೇಲೆ ಹೆಚ್ಚು ಪರಿಣಾಮ ಬೀರಿದೆ ಎಂದು ತಿಳಿದುಬಂದಿದೆ. ಎಸಿಇ2 ಹೃದಯ ಕ್ರಿಯೆಯ ನಿಯಂತ್ರಕವಾಗಿದೆ.

ACE2 ವೈರಸ್‌ನ್ನು ಬಂಧಿಸಿ ಶ್ವಾಸಕೋಶಕ್ಕೆ ಹೋಗುವಂತೆ ಮಾಡುತ್ತದೆ

ACE2 ವೈರಸ್‌ನ್ನು ಬಂಧಿಸಿ ಶ್ವಾಸಕೋಶಕ್ಕೆ ಹೋಗುವಂತೆ ಮಾಡುತ್ತದೆ

ಎಸಿಇ 2 ಜೀವಕೋಶಗಳ ಮೇಲ್ಮೈಯಲ್ಲಿರುವ ಗ್ರಾಹಕವಾಗಿದ್ದು ಅದು ಹೊಸ ಕರೋನವೈರಸ್‌ಗೆ ಬಂಧಿಸುತ್ತದೆ ಮತ್ತು ಕೋಶಗಳನ್ನು ಪ್ರವೇಶಿಸಲು ಮತ್ತು ಸೋಂಕು ತಗಲುವಂತೆ ಮಾಡುತ್ತದೆ. ಎಸಿಇ 2 ಹೃದಯ, ಮೂತ್ರಪಿಂಡಗಳು, ರಕ್ತನಾಳಗಳನ್ನು ಒಳಗೊಳ್ಳುವ ಅಂಗಾಂಶಗಳಲ್ಲಿ ಮತ್ತು ನಿರ್ದಿಷ್ಟವಾಗಿ ವೃಷಣಗಳಲ್ಲಿ ಕಂಡುಬರುತ್ತದೆ.

English summary
Men’s blood has higher levels than women’s of a key enzyme used by the new coronavirus to infect cells, the results of a big European study showed on Monday.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X