ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪುಟಿನ್ ನೋಡಿ ಬೆದರಿದರೇ ಮೆಲಾನಿಯಾ ಟ್ರಂಪ್?: ತಮಾಷೆಯ ವೈರಲ್ ವಿಡಿಯೋ

|
Google Oneindia Kannada News

ಹೆಲ್ಸೆನ್ಕಿ, ಜುಲೈ 19: ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಅವರ ಪತ್ನಿ ಮೆಲಾನಿಯಾ ಟ್ರಂಪ್ ಮತ್ತು ರಷ್ಯಾ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರ ಕೆಲವು ದಿನಗಳ ಹಿಂದಿನ ಭೇಟಿಯ ವಿಡಿಯೋ ಈಗ ವೈರಲ್ ಆಗಿದೆ.

ಫಿನ್ಲೆಂಡ್‌ನ ಹೆಲ್ಸಿನ್ಕಿಯಲ್ಲಿ ಸೋಮವಾರ ನಡೆದ ಸಮ್ಮೇಳನವೊಂದರಲ್ಲಿ ಪುಟಿನ್ ಅವರ ಕೈಕುಲುಕಿದ ಮೆಲಾನಿಯಾ ಬಳಿಕ ಭಯಾನಕ ದೃಶ್ಯವೊಂದನ್ನು ಕಂಡು ಬೆಚ್ಚಿಬಿದ್ದಂತೆ ಮುಖಭಾವ ಮಾಡಿದ್ದರು. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ಹರಿದಾಡುತ್ತಿದೆ.

ರಷ್ಯಾದೊಂದಿಗೆ ಸಂಬಂಧ ಸುಧಾರಿಸಲು ಉತ್ತಮ ಆರಂಭವಿದು: ಟ್ರಂಪ್ರಷ್ಯಾದೊಂದಿಗೆ ಸಂಬಂಧ ಸುಧಾರಿಸಲು ಉತ್ತಮ ಆರಂಭವಿದು: ಟ್ರಂಪ್

ಪತಿ ಡೊನಾಕ್ಡ್ ಟ್ರಂಪ್ ಜತೆಗೆ ಪುಟಿನ್ ಅವರ ಕೈ ಕುಲುಕುವ ಸಂದರ್ಭದಲ್ಲಿ ನಗುತ್ತಿದ್ದ ಮೆಲಾನಿಯಾ ಬೇರೆ ದಿಕ್ಕಿನೆಡೆಗೆ ತಿರುಗುತ್ತಿದ್ದಂತೆಯೇ ಭಯಗೊಂಡವರಂತೆ ಮುಖಭಾವ ಮಾಡಿದ್ದಾರೆ.

ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್ಅಮೆರಿಕಕ್ಕೆ ರಾಜತಾಂತ್ರಿಕ ಪೆಟ್ಟು ಕೊಟ್ಟ ವ್ಲಾಡಿಮಿರ್ ಪುಟಿನ್

menalia trump russia putin handshake horrified expression viral video

ಇದನ್ನು ಸಾಮಾಜಿಕ ಮಾಧ್ಯಮಗಳಲ್ಲಿ ನಾನಾ ರೀತಿಯಲ್ಲಿ ತಮಾಷೆಯಾಗಿ ಬಳಸಲಾಗುತ್ತಿದೆ. ಮೆಲಾನಿಯಾ ಮುಖದಲ್ಲಿನ ಭಾವನೆಯ ಬದಲಾವಣೆಯನ್ನು ಒಂದೊಂದು ರೀತಿ ವರ್ಣಿಸಲಾಗುತ್ತಿದೆ.

ಈ ವಿಡಿಯೋವನ್ನು ಇಡೀ ದಿನ ಮತ್ತೆ ಮತ್ತೆ ನೋಡುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬರು ಟ್ವೀಟ್ ಮಾಡಿದ್ದಾರೆ.

ಮೆಲಾನಿಯಾ ದೆವ್ವವೊಂದರ ಕಣ್ಣನ್ನು ದಿಟ್ಟಿಸಿನೋಡಿದಂತೆ ಅನಿಸುತ್ತಿದೆ ಎಂದು ಕೆಲವರು ತಮಾಷೆ ಮಾಡಿದ್ದಾರೆ.

ದೇಹಭಾಷೆ ಪರಿಣತರ ವಿಶ್ಲೇಷಣೆ ಪಡೆದುಕೊಳ್ಳಲು ನಾನು ಬಯಸುತ್ತೇನೆ. ವ್ಯಕ್ತಿಯೊಬ್ಬನ ಕಣ್ಣನ್ನು ದಿಟ್ಟಿಸಿ ನೋಡಿದ ಆಕೆ ಹೆದರಿದಂತೆ ಕಾಣಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ.

ಆಕೆ ಭಯಭೀತಳಾಗಿರುವಂತೆ ಕಾಣಿಸುತ್ತಾರೆ. ಮನೆಯಲ್ಲಿ ಯಾರಾದರೂ ದಂತವೈದ್ಯರು ಇದ್ದಾರೆಯೇ ಎಂದು ತಮಾಷೆಯಾಗಿ ಟ್ವೀಟ್ ಮಾಡಿದ್ದಾರೆ.

ನಿಮ್ಮ ಪತಿ ಪುಟಿನ್ ಕಡೆಗೆ ನೋಡಿದ ಬಗೆಯಂತೆ ನಿಮ್ಮ ಕಡೆಯೂ ನೋಡುವವರನ್ನು ಪತ್ತೆ ಮಾಡಿ ಎಂದಿದ್ದಾರೆ.

ಪುಟಿನ್ ಅವರ ಭೇಟಿಯ ಬಳಿಕ ಮೆಲಾನಿಯಾ ಅವರು ಶಾರ್ಟ್ ಸರ್ಕೀಟ್‌ಗೆ ಒಳಗಾಗಿದ್ದಾರೆ ಎಂದು ಕಾಲೆಳೆದಿದ್ದಾರೆ.

ಪುಟಿನ್ ಅವರ ಭೇಟಿಯ ಬಳಿಕ ಮೆಲಾನಿಯಾ ಅವರು ಶಾರ್ಟ್ ಸರ್ಕೀಟ್‌ಗೆ ಒಳಗಾಗಿದ್ದಾರೆ ಎಂದು ಕಾಲೆಳೆದಿದ್ದಾರೆ.

2017ರ ಜನವರಿಯಲ್ಲಿ ಕಾರ್ಯಕ್ರಮವೊಂದರ ಸಂದರ್ಭದಲ್ಲಿ ಪತಿ ಟ್ರಂಪ್ ಜತೆ ಮಾತನಾಡಿದ್ದ ಮೆಲಾನಿಯಾ, ಅವರ ಮುಖದ ದಿಕ್ಕು ಬದಲಾಗುತ್ತಲೇ ವಿಚಿತ್ರ ಭಾವ ಪ್ರಕಟಿಸಿದ್ದ ವಿಡಿಯೋ ಕೂಡ ಈಗ ಹರಿದಾಡುತ್ತಿದೆ.

English summary
A video goes viral, Melania trump looks horrified after shaking hand with Russia president Vladimir Putin in Helsenki, Finland.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X