ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಆಂಟಿಗುವಾದಿಂದ ನಾಪತ್ತೆಯಾದ ಮೆಹುಲ್ ಚೋಕ್ಸಿ, ಕ್ಯೂಬಾಗೆ ಪಲಾಯನ ಶಂಕೆ

|
Google Oneindia Kannada News

ಆಂಟಿಗುವಾ, ಮೇ 25: ಸಾವಿರಾರು ಕೋಟಿ ವಂಚನೆಯ ಆರೋಪವನ್ನು ಹೊತ್ತಿರುವ ಉದ್ಯಮಿ ಮೆಹುಲ್ ಚೋಕ್ಸಿ ಆಂಟಿಗುವಾ ಮತ್ತು ಬಾರ್ಬುಡ ದ್ವೀಪದಿಂದ ನಾಪತ್ತೆಯಾಗಿದ್ದಾರೆ. ಚೋಕ್ಸಿ ಪತ್ತೆಗೆ ಪೊಲೀಸರು ಹುಟುಕಾಟವನ್ನು ನಡೆಸುತ್ತಿದ್ದಾರೆ ಎಂದು ಸ್ಥಳೀಯ ಮಾಧ್ಯಮಗಳು ವರದಿ ಮಾಡಿದೆ. ಕ್ಯೂಬಾದಲ್ಲಿ ತಲೆಮರೆಸಿಕೊಂಡಿರಬಹುದು ಎಂದು ಶಂಕೆಗಳು ವ್ಯಕ್ತವಾಗಿದೆ.

ಸ್ಥಳೀಯ ಮಾಧ್ಯಮಗಳಾದ ಆಂಟಿಗುವಾನ್ಸ್‌ರೂಮ್ ಮಂಗಳವಾರ ಪೊಲೀಸ್ ಆಯುಕ್ತ ಅಟ್ಲೀ ರೊಡ್ನಿ ಅವರ ಹೇಳಿಕೆಯನ್ನು ಉಲ್ಲೇಖಿಸಿ ವರದಿ ಮಾಡಿದೆ. "ಭಾರತೀಯ ಉದ್ಯಮಿ ಮೆಹುಲ್ ಚೋಕ್ಸಿ ನಾಪತ್ತೆಯಾಗಿರುವ ಬಗ್ಗೆ ವದಂತಿಗಳು ಇವೆ. ಅವರು ಇರುವ ಸ್ಥಳವನ್ನು ಪೊಲೀಸರು ಪತ್ತೆಹಚ್ಚುವ ಕಾರ್ಯದಲ್ಲಿ ತೊಡಗಿದ್ದಾರೆ" ಎಂದು ಅಟ್ಲಿ ರೋಡ್ನಿ ಹೇಳಿಕೆ ನೀಡಿದ್ದಾರೆ.

ಕೆರಿಬಿಯನ್ ದ್ವೀಪ ರಾಷ್ಟ್ರವಾಗಿರುವ ಆಂಟಿಗುವಾ ಮತ್ತು ಬಾರ್ಬುಡಾದ ನಾಗರೀಕತ್ವವನ್ನು ಮೆಹುಲ್ ಚೋಕ್ಸಿ ಹೊಂದಿದ್ದು 2018ರಿಂದ ಅಲ್ಲಿ ವಾಸವಿರುವ ಬಗ್ಗೆ ವರದಿಯಾಗಿದೆ. ಕಳೆದ ಭಾನುವಾರ(ಮೇ 23) ದ್ವೀಪದ ದಕ್ಷಿಣ ಭಾಗದಲ್ಲಿ ತಮ್ಮ ಕಾರಿನಲ್ಲಿ ಪ್ರಯಾಣಿಸುತ್ತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಬಳಿಕ ಕಾರು ಪತ್ತೆಯಾಗಿದ್ದು ಮೆಹುಲ್ ಚೋಕ್ಸಿಯ ಬಗ್ಗೆ ಮಾಹಿತಿಗಳು ಲಭ್ಯವಾಗಿಲ್ಲ ಎಂದು ವರದಿಗಳು ಹೇಳುತ್ತಿವೆ.

Mehul Choksi missing from Antigua: May have fled to Cuba

ಪಂಜಾಬ್ ನ್ಯಾಶನಲ್ ಬ್ಯಾಂಕ್‌ಗೆ 13,500 ಕೋಟಿ ವಂಚಿಸಿರುವ ಪ್ರಕರಣದಲ್ಲಿ ಮೆಹುಲ್ ಚೋಕ್ಸಿ ಆರೋಪಿಯಾಗಿದ್ದಾರೆ. ಈ ಬೃಹತ್ ವಂಚನೆ ಪ್ರಕರಣದಲ್ಲಿ ನೀರವ್ ಮೋದಿ ಪ್ರಮುಖ ಆರೋಪಿಯಾಗಿದ್ದು ಸದ್ಯ ಲಂಡನ್ ಜೈಲಿನಲ್ಲಿದ್ದಾರೆ. ಭಾರತಕ್ಕೆ ಹಸ್ತಾಂತರಿಸುವ ಕಾನೂನು ಪ್ರಕ್ರಿಯೆಗಳು ನಡೆಯುತ್ತಿದೆ. 62 ವರ್ಷದ ಮೆಹುಲ್ ಚೋಕ್ಸಿ ನೀರವ್ ಮೋದಿಯ ಸೋದರಳಿಯ.

ಆಂಟಿಗುವ ಪ್ರಧಾನಮಂತ್ರಿ ಗಾಸ್ಟನ್ ಬ್ರೌನ್ ಚೋಕ್ಸಿ ನಾಪತ್ತೆಯಾಗಿರುವುದನ್ನು ಖಚಿತಪಡಿಸಿದ್ದಾರೆ. ನಾಪತ್ತೆ ಪ್ರಕರಣವನ್ನು ಪೊಲೀಸರು ದಾಖಲಿಸಿಕೊಂಡಿದ್ದು ಪತ್ತೆಕಾರ್ಯದಲ್ಲಿ ತೊಡಗಿದ್ದಾರೆ. ಪಕ್ಕದ ರಾಷ್ಟ್ರಗಳಿಂದಲೂ ಪತ್ತೆಗೆ ಸಹಾಯ ಕೇಳಲಾಗುತ್ತದೆ ಎಂದಿದ್ದಾರೆ. ಕ್ಯೂಬಾಗೆ ಹಾರಿರುವ ಬಗ್ಗೆ ವರದಿಯಾಗಿದ್ದರೂ ಈ ಬಗ್ಗೆ ಯಾವುದೇ ಸ್ಪಷ್ಟನೆಯನ್ನು ಅಲ್ಲಿನ ಆಡಳಿತ ನೀಡಿಲ್ಲ.

English summary
Fugitive businessman Mehul Choksi missing from Antigua: May have fled to Cuba.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X