• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿದೇಶದಲ್ಲಿ ಉದ್ಯಮಿ ಮೆಹುಲ್ ಚೋಕ್ಸಿ ಅಪಹರಣಕ್ಕೆ ಸಿಕ್ಕಿತು ಸಾಕ್ಷ್ಯ!?

|
Google Oneindia Kannada News

ನವದೆಹಲಿ, ಜೂನ್ 15: ಭಾರತದಿಂದ ತಲೆ ಮರೆಸಿಕೊಂಡು ಹೋಗಿರುವ ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ಅಂಟಿಗುವಾದಿಂದ ಅಪಹರಿಸಿಕೊಂಡು ಡೊಮಿನಿಕಾಗೆ ಹೋಗಿರುವ ಬಗ್ಗೆ ಇಂಗ್ಲೆಂಡ್ ಮೂಲದ ಕಾನೂನು ಸಂಸ್ಥೆಯೊಂದು ವಿಡಿಯೋ ಮತ್ತು ಭಾವಚಿತ್ರಗಳನ್ನು ಬಿಡುಗಡೆ ಮಾಡಿದೆ.

ಕಳೆದ ಮೇ 23ರಂದು ರಾತ್ರಿ ವೇಳೆ ಭಾರತೀಯ ಮೂಲದ ಪುರುಷರು ಹಾಗೂ ಮಹಿಳೆಯ ಜಬಾರಿಕಾ ಸೇರಿದಂತೆ ಮೆಹುಲ್ ಚೋಕ್ಸಿ ಅಪಹರಣ ಕಾರ್ಯಾಚರಣೆಯಲ್ಲಿ ಭಾಗಿಯಾದವರ ಭಾವಚಿತ್ರ ಮತ್ತು ವಿಡಿಯೋವನ್ನು ಇಂಗ್ಲೆಂಡಿನ ತನಿಖಾ ತಂಡವು ಬಿಡುಗಡೆಗೊಳಿಸಿದೆ.

ಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮ ವಲಸಿಗ ಎಂದ ಡೊಮಿನಿಕಾಉದ್ಯಮಿ ಮೆಹುಲ್ ಚೋಕ್ಸಿ ಅಕ್ರಮ ವಲಸಿಗ ಎಂದ ಡೊಮಿನಿಕಾ

"ಯುವತಿಯನ್ನು ಬಳಸಿಕೊಂಡು ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ವ್ಹೀಲ್ ಚೇರ್ ಹಾಗೂ ಬೋಟ್ ಮೂಲಕ ಅಂಟಿಗುವಾದಿಂದ ಡೊಮಿನಿಕಾಗೆ ಕರೆದುಕೊಂಡು ಹೋಗಲಾಗಿದೆ," ಎಂದು ಯುಕೆ ತನಿಖಾ ತಂಡವು ಹೇಳಿದೆ.

ಭಾರತಕ್ಕೆ ಚೋಕ್ಸಿ ಹಸ್ತಾಂತರಿಸುವುದೇ ಹಿಂದಿನ ಉದ್ದೇಶ

ಭಾರತಕ್ಕೆ ಚೋಕ್ಸಿ ಹಸ್ತಾಂತರಿಸುವುದೇ ಹಿಂದಿನ ಉದ್ದೇಶ

ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್ ಬಿ) ಬಹು ಕೋಟಿ ವಂಚನೆ ಪ್ರಕರಣದ ಪ್ರಮುಖ ಆರೋಪಿ ಮೆಹುಲ್ ಚೋಕ್ಸಿ ಅನ್ನು ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆ ನಡೆಸಲಾಗುತ್ತಿದೆ. "ಈ ನ್ಯಾಯಾಂಗ ಪ್ರಕ್ರಿಯೆಯನ್ನು ಕಡಿಮೆ ಮಾಡುವ ಮೂಲಕ ಸಾಧ್ಯವಾದಷ್ಟು ಬೇಗ ಭಾರತಕ್ಕೆ ಮೆಹುಲ್ ಚೋಕ್ಸಿ ಅನ್ನು ಕರೆಸಿಕೊಳ್ಳುವುದೇ ಈ ಸಂಚಿಕೆ ಹಿಂದಿನ ಮುಖ್ಯ ಉದ್ದೇಶವಾಗಿದೆ. ಈ ಪ್ರಕರಣದಲ್ಲಿ ಸಿಕ್ಕಿರುವ ಸಾಕ್ಷಿಗಳ ಪ್ರಕಾರ, ಚೋಕ್ಸಿ ಅನ್ನು ಆಂಟಿಗುವಾದಿಂದ ಡೊಮಿನಿಕಾಗೆ ಅಪಹರಿಸಲಾಗಿತ್ತು. ಆಂಟಿಗುವಾ ಮತ್ತು ಡೊಮಿನಿಕಾದ ಕಾನೂನು ಪ್ರಕ್ರಿಯೆಗಳನ್ನು ಮೀರಿ ಅವರನ್ನು ಭಾರತಕ್ಕೆ ಸಾಗಿಸುವ ಉದ್ದೇಶವಿದೆ ಎಂದು ನಾವು ನಂಬುತ್ತೇವೆ," ಎಂದು ನ್ಯಾಯಮೂರ್ತಿ ಮೈಕಲ್ ಪೊಲಾಕ್ ಹೇಳಿದ್ದಾರೆ.

ತನಿಖಾ ತಂಜಡ ಬಿಡುಗಡೆಗೊಳಿಸಿದ ಫೋಟೋ?

ತನಿಖಾ ತಂಜಡ ಬಿಡುಗಡೆಗೊಳಿಸಿದ ಫೋಟೋ?

ಇಂಗ್ಲೆಂಡಿನ ತನಿಖಾ ತಂಡವು ಬಿಡುಗಡೆಗೊಳಿಸಿರುವ ಫೋಟೋಗಳ ಪ್ರಕಾರ, ಹಡಗಿನ ಮೇಲು ಅಂತಸ್ತಿನಲ್ಲಿ ಭಾರತೀಯ ಮೂಲದವರಂತೆ ಕಾಣಿಸುವ ಜನರು ಕಂಡು ಬಂದಿದ್ದಾರೆ. ಉದ್ಯಮಿ ಮೆಹುಲ್ ಚೋಕ್ಸಿ ಅನ್ನು ಅಂಟಿಗುವಾದಿಂದ ಡೊಮಿನಿಕಾಗೆ ಸಾಗಿಸುವುದಕ್ಕೆ ಇದೇ ಹಡಗನ್ನು ಬಳಸಲಾಗಿದೆ. ಇದರ ಜೊತೆ ಬಿಡುಗಡೆಗೊಳಿಸಿರುವ ವಿಡಿಯೋದಲ್ಲಿ ಚೋಕ್ಸಿ ಅನ್ನು ಸಾಗಿಸಲಾಗುತ್ತಿತ್ತು ಎಂದು ಊಹಿಸಲಾದ ಹಡಗು ನಿಗದಿತ 8 ಕಿಲೋ ಮೀಟರ್ ವೇಗಕ್ಕಿಂತ ಅತಿಹೆಚ್ಚಿನ ವೇಗದಲ್ಲಿ ಸಂಚರಿಸಿರುವುದು ಗೊತ್ತಾಗುತ್ತದೆ. ಅಂಟಿಗುವಾ ಬಂದರಿನಿಂದ ಸಂಚರಿಸುತ್ತಿದ್ದ ಸಂದರ್ಭದಲ್ಲಿ ಈ ಬೋಟ್ ಮೇಲೆ ಯಾವುದೇ ಬಾವುಟವು ಹಾರಾಡುತ್ತಿರಲಿಲ್ಲ ಎಂಬುದು ಗೋಚರಿಸುತ್ತಿದೆ.

"ಬೋಟ್ ನಿಂದ ಹಡಗಿಗೆ ನನ್ನನ್ನು ಶಿಫ್ಟ್ ಮಾಡಿದರು"

"ನನ್ನನ್ನು ಅಪಹರಿಸಿ, ಕಣ್ಣುಮುಚ್ಚಿ, ಆಂಟಿಗುವಾ ಮತ್ತು ಬಾರ್ಬುಡಾದ ಜಬಾರಿಕಾ ಮನೆಯ ಹಿಂಭಾಗಕ್ಕೆ ಕರೆದೊಯ್ಯಲಾಯಿತು. ಅಲ್ಲಿಂದ "ಬಹಳ ಸಣ್ಣದಾದ ವಾಟರ್ ಕ್ರಾಫ್ಟ್" ನಲ್ಲಿ ಇರಿಸಲಾಗಿದ್ದು, ನಂತರ ಅವರನ್ನು "ದೊಡ್ಡ ಬೋಟ್"ಗೆ ಸ್ಥಳಾಂತರಿಸಲಾಯಿತು. ಅಲ್ಲಿ ಇಬ್ಬರು ಭಾರತೀಯರು ಮತ್ತು ಕೆರಿಬಿಯನ್ ಮೂಲದ ಮೂವರು ವ್ಯಕ್ತಿಗಳಿದ್ದರು. ಕಾನೂನುಬಾಹಿರ ಹಾಗೂ ಕ್ರೂರ ರೀತಿಯಲ್ಲಿ ಬಂಧಿಸುವ ಉದ್ದೇಶದಿಂದ ಅನುಭವಿ ವ್ಯಕ್ತಿಗಳನ್ನು ಗುತ್ತಿಗೆ ಆಧಾರದ ಮೇಲೆ ನೇಮಿಸಲಾಗಿತ್ತು" ಎಂದು ಮೆಹುಲ್ ಚೋಕ್ಸಿ ಹೇಳಿಕೆ ನೀಡಿದ್ದರು.

ಮೆಹುಲ್ ಚೋಕ್ಸಿ ಡೊಮಿನಿಕಾಗೆ ಬಂದಿದ್ದು ಯಾವಾಗ?

ಮೆಹುಲ್ ಚೋಕ್ಸಿ ಡೊಮಿನಿಕಾಗೆ ಬಂದಿದ್ದು ಯಾವಾಗ?

ಕಳೆದ ಮೇ 23ರಂದು ರಾತ್ರಿ 10 ಗಂಟೆ ಸುಮಾರಿಗೆ ಆರ್ಕ್‌ನ ಯಾಚ್ ಕ್ಯಾಲಿಯೋಪ್‌ನಲ್ಲಿ ಚೋಕ್ಸಿಯನ್ನು ಡೊಮಿನಿಕಾಗೆ ಕರೆತರಲಾಯಿತು ಎಂದು ಡೊಮಿನಿಕಾ ವಿರೋಧ ಪಕ್ಷದ ನಾಯಕ ಲೆನಾಕ್ಸ್ ಲಿಂಟನ್ ಹೇಳಿಕೆ ನೀಡಿರುವ ಬಗ್ಗೆ ಅಸೋಸಿಯೇಟ್ಸ್ ಟೈಮ್ಸ್ನ ವರದಿ ಮಾಡಿದೆ. ಮೇ 23 ರಂದು ಸಂಜೆ 5 ಗಂಟೆಯವರೆಗೆ ಅವರು ಆಂಟಿಗಾದಲ್ಲಿದ್ದರು ಎಂದು ಚೋಕ್ಸಿ ಅವರ ಕುಟುಂಬ ಹೇಳಿಕೊಂಡಿದ್ದು, ನಾಲ್ಕರಿಂದ ಐದು ಗಂಟೆಗಳಲ್ಲಿ 120 ಮೈಲಿ ದೂರವನ್ನು ಕ್ರಮಿಸಲು ಅಸಾಧ್ಯವಾಗುತ್ತದೆ. ಅದಕ್ಕೆ ಕನಿಷ್ಠ 12-13 ಗಂಟೆ ಬೇಕಾಗುತ್ತದೆ. ಕಸ್ಟಮ್ಸ್ ದಾಖಲೆಯ ಪ್ರಕಾರ, ದೋಣಿ ಆಂಟಿಗಾದಿಂದ ಬೆಳಿಗ್ಗೆ 10 ಗಂಟೆಗೆ ಹೊರಟಿದೆ ಎಂದು ಹೇಳಿದ ವರದಿಗೆ ಇದು ವಿರುದ್ಧವಾಗಿದೆ. ಲಿಂಟನ್ ಹೇಳಿಕೊಳ್ಳುವ ದೋಣಿಯಲ್ಲಿ ಚೋಕ್ಸಿ ಪ್ರಯಾಣಿಸಲಿಲ್ಲ ಎಂಬುದನ್ನು ಈ ವ್ಯತ್ಯಾಸವೇ ಸೂಚಿಸುತ್ತದೆ.

ಮೆಹುಲ್ ಚೋಕ್ಸಿ ದೇಹದಲ್ಲಿ ಗಾಯದ ಗುರುತು

ಮೆಹುಲ್ ಚೋಕ್ಸಿ ದೇಹದಲ್ಲಿ ಗಾಯದ ಗುರುತು

ಡೊಮಿನಿಕಾ ಚೀನಾ ಸೌಹಾರ್ದತೆ ಆಸ್ಪತ್ರೆಯ ವೈದ್ಯರು ಮೆಹುಲ್ ಚೋಕ್ಸಿಗೆ ಚಿಕಿತ್ಸೆ ನೀಡಿದ್ದಾರೆ. ಚೋಕ್ಸಿ ದೇಹದಲ್ಲಿ ಅಲ್ಲಿಲ್ಲಿ ಗಾಯ ಮತ್ತು ಉಗುರಿನಲ್ಲಿ ಗಾಯಗಳಾಗಿದ್ದು, ತಳ್ಳಾಡುವಿಕೆಯಿಂದಾಗಿ ಮೂಗೇಟು ಬಿದ್ದಿರಬಹುದು ಎಂದು ವಕೀಲರು ಉಲ್ಲೇಖಿಸಿದ್ದಾರೆ. ಕಳೆದ 2018ರಿಂದ ಆಂಟಿಗಾ ಮತ್ತು ಬರ್ಬುಡಾದಲ್ಲಿ ಪ್ರಜೆಯಾಗಿ ವಾಸವಾಗಿದ್ದ ಮೆಹುಲ್ ಚೋಕ್ಸಿ ಕಳೆದ ಮೇ 23ರಂದು ನಿಗೂಢವಾಗಿ ನಾಪತ್ತೆಯಾಗಿದ್ದಾರೆ. ತದನಂತರದಲ್ಲಿ ತಮ್ಮ ಪ್ರೇಯಸಿ ಜೊತೆಗೆ ಪ್ರಣಯ ಪ್ರವಾಸಕ್ಕೆ ತೆರಳಿದ್ದು ಎಂದು ಹೇಳಲಾದ ಚೋಕ್ಸಿ ಅವರನ್ನು ನೆರೆಯ ಡೊಮಿನಿಕಾದಲ್ಲಿ ಪೊಲೀಸರು ವಶಕ್ಕೆ ಪಡೆದುಕೊಳ್ಳುತ್ತಾರೆ. ಜಾಲಿ ಹಾರ್ಬರ್ ಬಳಿ ಅವರನ್ನು ಆಂಟಿಗಾ ಪೊಲೀಸರು ಬಂಧಿಸಿ ಡೊಮಿನಿಕಾಗೆ ಕರೆದುಕೊಂಡು ಹೋಗಿದ್ದಾರೆ ಎಂದು ವಕೀಲು ಆರೋಪಿಸಿದ್ದಾರೆ.

ಪಿಎನ್ ಬಿ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಕೇಸ್?

ಪಿಎನ್ ಬಿ ಬ್ಯಾಂಕಿಗೆ 13,500 ಕೋಟಿ ರೂ. ವಂಚನೆ ಕೇಸ್?

ಭಾರತದ ಪಂಜಾಬ್ ನ್ಯಾಷನಲ್ ಬ್ಯಾಂಕಿಗೆ 13,500 ಕೋಟಿ ರೂಪಾಯಿ ವಂಚನೆ ಆರೋಪ ಎದುರಿಸುತ್ತಿರುವ ಮೆಹುಲ್ ಚೋಕ್ಸಿ ಹಾಗೂ ಆತನ ಸೋದರಳಿಯ ನೀರವ್ ಮೋದಿ 2018ರ ಜನವರಿ ಮೊದಲ ವಾರದಲ್ಲಿ ದೇಶ ಬಿಟ್ಟು ಪರಾರಿಯಾಗಿದ್ದರು. ಭಾರತದಿಂದ ಯುರೋಪಿಗೆ ಓಡಿ ಹೋದ ನೀರವ್ ಮೋದಿ ಅಂತಿಮವಾಗಿ ಇಂಗ್ಲೆಂಡಿನಲ್ಲಿ ಪತ್ತೆಯಾಗಿದ್ದು, ಆತನನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಕಾನೂನು ಪ್ರಕ್ರಿಯೆಗಳು ನಡೆಯುತ್ತಿವೆ. ಇನ್ನೊಂದು ಕಡೆಯಲ್ಲಿ 2017ರಲ್ಲೇ ಆಂಟಿಗಾ ಮತ್ತು ಬರ್ಬುಡಾ ರಾಷ್ಟ್ರಗಳ ನಾಗರಿಕತ್ವ ಪಡೆದುಕೊಂಡ ಮೆಹುಲ್ ಚೋಕ್ಸಿ ಇಲ್ಲಿಯವರೆಗೂ ಅದೇ ದೇಶದಲ್ಲಿ ವಾಸವಾಗಿದ್ದರು.

English summary
Businessman Mehul Choksi Kidnapped From Antigua, Legal Team Released Videos And Photographs.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X