ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮುಂದಿನ 48 ಗಂಟೆಗಳಲ್ಲಿ ಮೆಹುಲ್ ಚೋಕ್ಸಿ ಭಾರತಕ್ಕೆ ಹಸ್ತಾಂತರ:ಆಂಟಿಗುವಾ ಪ್ರಧಾನಿ

|
Google Oneindia Kannada News

ಪಂಜಾಬ್ ನ್ಯಾಷನಲ್ ಬ್ಯಾಂಕ್ ಬಹುಕೋಟಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಡೊಮೆನಿಕಾದಲ್ಲಿ ಬಂಧಿಸಲಾಗಿರುವ ಉದ್ಯಮಿ ಮೆಹುಲ್ ಚೋಕ್ಸಿಯನ್ನು 48 ಗಂಟೆಗಳಲ್ಲಿ ಭಾರತಕ್ಕೆ ಹಸ್ತಾಂತರಿಸಲಾಗುತ್ತದೆ ಎಂದು ಆಂಟಿಗುವಾ ಪ್ರಧಾನಿ ಗಸ್ಟನ್ ಬ್ರೌನೇ ಹೇಳಿದ್ದಾರೆ.

ಡೊಮೆನಿಕಾದಲ್ಲಿ ಚೋಕ್ಸಿಯನ್ನು ಬಂಧಿಸಲಾಗಿದ್ದು, ಆಂಟಿಗುವಾ ಪೊಲೀಸರು ಕೂಡ ಡೊಮೆನಿಕಾ ಪೊಲೀಸರೊಂದಿಗೆ ಸಂಪರ್ಕದಲ್ಲಿದ್ದಾರೆ, ಶೀಘ್ರದಲ್ಲೇ ಕಾನೂನು ಪ್ರಕ್ರಿಯೆ ಪೂರ್ಣಗೊಳಿಸಿ ಡೊಮೆನಿಕಾದಿಂದಲೇ ನೇರವಾಗಿ ಭಾರತಕ್ಕೆ ಹಸ್ತಾಂತರಿಸುವ ಕಾರ್ಯ ನಡೆಯಲಿದೆ ಎಂದು ಹೇಳಿದ್ದಾರೆ.

ಅತ್ತ ಡೊಮೆನಿಕಾದಲ್ಲಿ ಮೆಹುಲ್ ಚೋಕ್ಸಿ ಬಂಧನವಾಗುತ್ತಿದ್ದಂತೆಯೇ ಇತ್ತ WIONನ ಪ್ರಧಾನ ರಾಜತಾಂತ್ರಿಕ ವರದಿಗಾರ ಸಿಧಾಂತ್ ಸಿಬಲ್ ರೊಂದಿಗೆ ವರ್ಚುವಲ್ ಮೀಟಿಂಗ್ ನಲ್ಲಿ ಪಾಲ್ಗೊಂಡು ಹೇಳಿಕೆ ನೀಡಿರುವ ಪ್ರಧಾನಿ ಗಸ್ಟನ್ ಬ್ರೌನೇ, ಯಾವುದೇ ಕಾನೂನು ತೊಡಕುಗಳಿಲ್ಲದಿದ್ದರೆ ಮುಂದಿನ 48 ಗಂಟೆಗಳಲ್ಲಿ ಚೋಕ್ಸಿಯನ್ನು ಖಾಸಗಿ ಜೆಟ್‌ನಲ್ಲಿ ಭಾರತಕ್ಕೆ ವಾಪಾಸು ಕಳುಹಿಸಲಾಗುದೆ ಎಂದು ಹೇಳಿದ್ದಾರೆ.

Mehul Choksi Could Be In India In 48 Hours, Says Antigua And Barbuda PM

ಇದೇ ವಿಚಾರವಾಗಿ ತಾವು ಡೊಮೆನಿಕಾ ಪ್ರಧಾನಿ ರೂಸ್ವೆಲ್ಟ್ ಸ್ಕೆರ್ರಿಟ್ ರೊಂದಿಗೆ ಚರ್ಚೆ ನಡೆಸಿದ್ದು, ಚೋಕ್ಸಿಯನ್ನು ಆಂಟಿಗುವಾ ಮರಳಿಸದಂತೆ ಮನವಿ ಮಾಡಲಾಗಿದೆ. ಆಂಟಿಗುವಾದಲ್ಲಿ ಮೆಹುಲ್ ಚೋಕ್ಸಿ ಎಲ್ಲ ರೀತಿಯ ನಾಗರಿಕ ಹಕ್ಕುಗಳನ್ನು ಹೊಂದಿದ್ದು, ಅವರನ್ನು ಆಂಟಿಗುವಾಗೆ ಕರೆತಂದರೆ ಭಾರತಕ್ಕೆ ಹಸ್ತಾಂತರಿಸುವ ಪ್ರಕ್ರಿಯೆಗೆ ಅಡ್ಡಿಯಾಗುತ್ತದೆ. ನೇರವಾಗಿ ಅವರನ್ನು ಭಾರತಕ್ಕೆ ರವಾನಿಸಲು ಕೋರಲಾಗಿದೆ ಎಂದು ಹೇಳಿದ್ದಾರೆ.

14,000 ಕೋಟಿ ರೂಪಾಯಿ ವಂಚನೆ ಪ್ರಕರಣದ ತನಿಖೆ ನಡೆಸುತ್ತಿದ್ದ ಭಾರತದ ಕೇಂದ್ರೀಯ ತನಿಖಾ ತಂಡ ಮತ್ತು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಆರೋಪಿಯನ್ನು ಹಸ್ತಾಂತರಿಸುವಂತೆ ಪ್ರಯತ್ನಿಸುತ್ತಿರುವ ನಡುವೆ ಆರೋಪಿ ನಾಪತ್ತೆಯಾಗಲು ಯತ್ನಿಸಿದ್ದಾನೆ ಎಂದು ತಿಳಿದು ಬಂದಿದೆ.

ಬಹುಕೋಟಿ ವಂಚನೆ ಪ್ರಕರಣದ ಆರೋಪಿ ಮೆಹುಲ್ ಚೋಕ್ಸಿ ಬೋಟ್ ಮೂಲಕ ಡೊಮಿನಿಕಾಗೆ ತಲುಪಿದ್ದನು. ಆತನ ವಿರುದ್ಧ ಲುಕ್ ಔಟ್ ನೋಟಿಸ್ ಹೊರಡಿಸಿರುವ ಹಿನ್ನೆಲೆ ಆರೋಪಿಯನ್ನು ಸ್ಥಳೀಯ ಪೊಲೀಸರು ಬಂಧಿಸಿದ್ದು, ಆತನನ್ನು ವಶದಲ್ಲಿ ಇರಿಸಿಕೊಂಡಿದ್ದಾರೆ.

English summary
Prime Minister of Antigua and Barbuda Gaston Browne has said that Mehul Choksi could be sent back to India in the next 48 hours from Dominica where he was found. Choksi, who had gone missing from Antigua, was taken into custody by authorities of Dominica where he was captured trying to flee.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X