ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತೀಯ ಸಂಜಾತೆ ಮೇಘಾ ರಾಜಗೋಪಾಲನ್‌ಗೆ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿ

|
Google Oneindia Kannada News

ನ್ಯೂಯಾರ್ಕ್, ಜೂನ್ 13: ಭಾರತೀಯ ಸಂಜಾತ ಅಮೆರಿಕಾ ಪತ್ರಕರ್ತೆ ಮೇಘಾ ರಾಜಗೋಪಾಲನ್ ಅಮೆರಿಕಾದ ಪ್ರತಿಷ್ಟಿತ ಪುಲಿಟ್ಜರ್ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಚೀನಾ ಕ್ಸಿನ್‌ಜಿಯಾಂಗ್ ಪ್ರದೇಶದಲ್ಲಿ ಲಕ್ಷಾಂತರ ಮುಸ್ಲಿಮರನ್ನು ಬಂಧಿಸಲು ರಹಸ್ಯವಾಗಿ ನಿರ್ಮಿಸಿದ ಜೈಲುಗಳು ಮತ್ತು ನಿರ್ಬಂಧ ಶಿಬಿರಗಳನ್ನು ಮೇಘಾ ರಾಜಗೋಪಾಲನ್ ಜಗತ್ತಿನ ಮುಂದೆ ಸಾಕ್ಷಿ ಸಹಿತ ಬಹಿರಂಗಪಡಿಸಿದ್ದರು. ಈ ವಿಶೇಷ ತನಿಖಾ ವರದಿಗೆ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಮೇಘಾ ರಾಜಗೋಪಾಲನ್ ಈ ವರದಿಗೆ ಸಾಥ್ ನೀಡಿದ ಇಬ್ಬರು ಕಾನ್ಟ್ರಿಬ್ಯೂಟರ್‌ಗಳೊಂದಿಗೆ ಈ ಪ್ರಶಸ್ತಿಯನ್ನು ಪಡೆದುಕೊಂಡಿದ್ದಾರೆ. 'ಬಜ್ ಫೀಡ್ ನ್ಯೂಸ್' ಮಾಧ್ಯಮದಲ್ಲಿ ಮೇಘಾ ವರದಿಗಾರ್ತಿಯಾಗಿ ಕರ್ತವ್ಯವನ್ನು ನಿರ್ವಹಿಸುತ್ತಿದ್ದರೆ ಆಲಿಸನ್ ಕಿಲ್ಲಿಂಗ್ ಹಾಗೂ ಕ್ರಿಸ್ಟೋ ಬಷೇಕ್ ಕಾಂಟ್ರಿಬ್ಯೂಟರ್ ಆಗಿ ಸಾರ್ಥ ನೀಡಿದ್ದರು.

ಅಮೆರಿಕ ವಿರುದ್ಧ ಪುಟಿನ್ ಗರಂ..! ಟ್ರಂಪ್‌ಗೆ ಫುಲ್ ಮಾರ್ಕ್ಸ್, ಬೈಡನ್‌ಗೆ ವಾರ್ನಿಂಗ್..!ಅಮೆರಿಕ ವಿರುದ್ಧ ಪುಟಿನ್ ಗರಂ..! ಟ್ರಂಪ್‌ಗೆ ಫುಲ್ ಮಾರ್ಕ್ಸ್, ಬೈಡನ್‌ಗೆ ವಾರ್ನಿಂಗ್..!

ಮೇಘಾ ರಾಜಗೋಪಾಲನ್ ಅವರ ಕ್ಸಿಂಜಿಯಾಂಗ್ ಸರಣಿ ಪುಲಿಟ್ಜರ್ ಪ್ರಶಸ್ತಿಯ ಅಂತಾರಾಷ್ಟ್ರೀಯ ವರದಿ ವಿಭಾಗದಲ್ಲಿ ಈ ಪ್ರಶಸ್ತಿಯನ್ನು ಗಿಟ್ಟಿಸಿಕೊಂಡಿದೆ. 2017ರಲ್ಲಿ ಕ್ಸಿಂಜಿಯಾಂಗ್ ಪ್ರದೇಶದಲ್ಲಿ ಚೀನಾ ಸಾವಿರಾರು ಮುಸ್ಮಿಮರನ್ನು ಬಂಧಿಸಿಡಲು ಆರಂಭಿಸಿತ್ತು. ಈ ಸ್ಥಳಕ್ಕೆ ಮೇಘಾ ರಾಜಗೋಪಾಲನ್ ಮೊದಲ ಬಾರಿಗೆ ಭೇಟಿ ನೀಡಿ ಈ ಬಗ್ಗೆ ಸರಣಿ ತನಿಖಾ ವರದಿಯನ್ನು ಪ್ರಕಟಿಸಿದ್ದರು. ಆದರೆ ಆರಂಭದಲ್ಲಿ ಚೀನಾ ಈ ರೀತಿಯ ಪ್ರದೇಶವೇ ನಮ್ಮಲ್ಲಿ ಇಲ್ಲ ಎಂದು ವಾದಿಸಿತ್ತು.

Megha Rajagopalan, an Indian-origin journalist, won Pulitzer Prize 2021

ಇನ್ನು ಇದೇ ಸಂದರ್ಭದಲ್ಲಿ ಜನತ್ತಿನಾದ್ಯಂತ ಜನಾಂಗೀಯ ತಾರತಮ್ಯದ ವಿರುದ್ಧ ಕಿಚ್ಚು ಹತ್ತಲು ಕಾರಣವಾಗಿದ್ದ ಜಾರ್ಜ್ ಫ್ಲ್ಯಾಯ್ಡ್ ಹತ್ಯೆ ಕ್ಷಣದ ವಿಡಿಯೋ ಮಾಡಿದ್ದ ಯುವತಿ ಡಾರ್ನೆಲ್ಲಾ ಫ್ರೇಜಿಯರ್‌ಗೆ ಪುಲಿಟ್ಜರ್ ಪ್ರಶಸ್ತಿ ನೀಡುವ ಸಂಸ್ಥೆ ಪ್ರಶಂಸಾಪತ್ರವನ್ನು ನೀಡಿ ಗೌರವಿಸಿದೆ. ಪೊಲೀಸ್ ಅಧಿಕಾರಿ ಜಾರ್ಜ್ ಫ್ಲಾಯ್ಡ್ ಕುತ್ತಿಗೆಗೆ ಮೊಣಕಾಲೂರಿ ಉಸಿರುಗಟ್ಟಿಸುವ ವೀಡಿಯೋ ಇದಾಗಿದ್ದು ಜಗತ್ತಿನಾದ್ಯಂತ ಜನಾಂಗೀಯ ತಾರತಮ್ಯದ ವಿರುದ್ಧ ಹೋರಾಟಕ್ಕೆ ಪ್ರೇರಣೆ ನೀಡಿತ್ತು.

Recommended Video

ಬಹದ್ದೂರ್ Chethan ಮದುವೆ ಸಮಾರಂಭ | Oneindia Kannada

ಪುಲಿಟ್ಜರ್ ಪ್ರಶಸ್ತಿಯನ್ನು ಪ್ರತಿವರ್ಷವೂ ಅಮೆರಿಕಾದಲ್ಲಿ 21 ವಿಭಾಗಗಳಿಗೆ ನೀಡಲಾಗುತ್ತದೆ. ಪ್ರತಿ ಪ್ರಶಸ್ತಿಯ ವಿಜೇತರು ಕೂಡ ಪ್ರಶಸ್ತಿ ಪತ್ರ ಹಾಗೂ 15,000 ಡಾಲರ್ ನಗದು ಪ್ರಶಸ್ತಿಯನ್ನು ಪಡೆಯುತ್ತಾರೆ. ಸಾರ್ವಜನಿಕ ಸೇವೆ ವಿಭಾಗದಲ್ಲಿ ಪ್ರಶಸ್ತಿ ಪಡೆದವರಿಗೆ ಚಿನ್ನದ ಪದಕವನ್ನು ನೀಡಲಾಗುತ್ತದೆ.

English summary
Megha Rajagopalan, an Indian-origin journalist, won Pulitzer Prize 2021 for exposing China's detention camps.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X