ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಫೀಜ್ ಸಯೀದ್ ನ ಭಾವಮೈದುನ ಲಷ್ಕರ್ ಇ ತೈಬಾದ ಹೊಸ ಮುಖ್ಯಸ್ಥ

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಮಾರ್ಚ್ 13: ಅಬ್ದುಲ್ ರೆಹಮಾನ್ ಮಕ್ಕಿ ಲಷ್ಕರ್ ಇ ತಯ್ಬಾ ಹಾಗೂ ಜಮಾತ್ ಉದ್ ದವಾದ ಹೊಸ ಮುಖ್ಯಸ್ಥನಾಗಿ ಆಯ್ಕೆ ಆಗಲಿದ್ದಾನೆ. ಲಷ್ಕರ್ ಇ ತಯ್ಬಾದ ಸ್ಥಾಪಕನೂ ಆದ ಹಫೀಜ್ ಸಯೀದ್ ನ ಭಾವಮೈದುನ ಮಕ್ಕಿ.

ಸಯೀದ್ ನನ್ನು ಯಾವಾಗ ಗೃಹಬಂಧನದಲ್ಲಿ ಇರಿಸಲಾಯಿತೋ ಆಗ ಮಕ್ಕಿಯನ್ನು ಹೊಸ ಮಖ್ಯಸ್ಥನನ್ನಾಗಿ ನೇಮಿಸಲು ನಿರ್ಧರಿಸಲಾಗಿದೆ. ಕಳೆದ 90 ದಿನಗಳಿಂದ ಹಫೀಜ್ ಸಯೀದ್ ನನ್ನು ಗೃಹಬಂಧನದಲ್ಲಿ ಇರಿಸಲಾಗಿದೆ.[ಕಣ್ಣುಬಿಡುವ ಮೊದಲೇ ಉಗ್ರ ಸಂಘಟನೆಯನ್ನು ಮಟಾಶ್ ಗೊಳಿಸಿದ ಎಟಿಎಸ್]

Meet the new chief of the Lashkar-e-Taiba

ಕಾಶ್ಮೀರದಲ್ಲಿ ಕಾರ್ಯಾಚರಣೆ ನಡೆಸಲು ಲಷ್ಕರ್ ಇ ತೈಬಾ ಎಲ್ಲ ತಯಾರಿ ನಡೆಸಿದೆ. ಆ ಹಿನ್ನೆಲೆಯಲ್ಲಿ ಕೂಡ ಈ ಆಯ್ಕೆ ಮಾಡಲು ತೀರ್ಮಾನಿಸಲಾಗಿದೆ. ಝಕಿ ಉರ್ ರೆಹಮಾನ್ ಲಖ್ವಿ ಈ ಉಗ್ರ ಸಂಘಟನೆಯ ಕಾರ್ಯಾಚರಣೆ ಭಾಗವನ್ನು ನೋಡಿಕೊಂಡರೆ, ಆಡಳಿತವನ್ನು ನೋಡಿಕೊಳ್ಳಲು ಒಬ್ಬ ಬೇಕಾಗಿತ್ತು. ಇನ್ನು ಮುಂದೆ ಮಕ್ಕಿ ಆ ಕೆಲಸ ಮಾಡುತ್ತಾನೆ,[ಮುಂಬೈ ದಾಳಿಯಲ್ಲಿ ಪಾಕ್ ಸಂಚು, ಅಧಿಕಾರಿ ಒಪ್ಪಿಕೊಂಡ ಅರ್ಧ ಸತ್ಯ]

ಲಷ್ಕರ್ ಇ ತೈಬಾಗೆ ಜಮಾತ್ ಉದ್ ದವಾ ಎಂಬ ಮುಖ ಬಹಳ ಮುಖ್ಯ. ಉಗ್ರ ಚಟುವಟಿಕೆಗಳಿಗೆ ಹಣ ಹೊಂದಿಸಲು ನೆರವಾಗುವುದೇ ಜೆಯುಡಿ. ಹಫೀಜ್ ಸಯೀದ್ ನ ಗೃಹಬಂಧನದೊಂದಿಗೆ ಜೆಯುಡಿಗೆ ಹಿನ್ನಡೆಯಾಗಿದೆ. ಆದ್ದರಿಂದ ಮಕ್ಕಿಯನ್ನು ಹೊಸ ಮುಖ್ಯಸ್ಥನನ್ನಾಗಿ ಮಾಡಲು ನಿರ್ಧರಿಸಿದೆ. ಅವನ ಹೆಸರು ಕೂಡ ವಿಶ್ವಸಂಸ್ಥೆಯ ಪಟ್ಟಿಯಲ್ಲಿದೆ.

English summary
Abdul Rehman Makki will be the new chief of the Lashkar-e-Tayiba and the Jamaat-ud-Dawa. Makki is the brother in law of Hafiz Saeed, the founder of the two outfits.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X