ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಲೇಡಿ ಬಾಂಬರ್ ಬಿಡಿ, ಇಲ್ಲಾ ಹತ್ಯೆ ಮಾಡ್ತೇವೆ ನೋಡಿ!

By ವಿಕಾಸ್ ನಂಜಪ್ಪ
|
Google Oneindia Kannada News

ನವದೆಹಲಿ, ಜ, 29: ಒತ್ತೆಯಾಳುಗಳನ್ನು ಇಟ್ಟುಕೊಂಡು ಸೆರೆಸಿಕ್ಕಿರುವವರನ್ನು ಬಿಡಬೇಕು ಎಂಬ ವರಸೆಯನ್ನು ಉಗ್ರರು ಮತ್ತೆ ಆರಂಭಿಸಿದ್ದಾರೆ. ಬೋರ್ಡಾನ್ ಸೈನಿಕರಿಗೆ 2005ರಲ್ಲಿ ಸೆರೆಸಿಕ್ಕಿರುವ ಸಜಿದಾ ಆಲ್ ರಿಸ್ವಾಯಿ ಯನ್ನು ಕೂಡಲೇ ಬಿಡುಗಡೆ ಮಾಡದಿದ್ದರೆ ಒತ್ತೆಯಾಳುಗಳ ಹತ್ಯೆ ಮಾಡುತ್ತೇವೆ ಎಂದು ಇಸಿಸ್ ಉಗ್ರಗಾಮಿಗಳು ಸಂದೇಶ ರವಾನಿಸಿದ್ದಾರೆ.

ನಮಗೆ ಹಣ ಬೇಡ, ನಮ್ಮ ಸಹೋದರಿ ಬೇಕು, ಆಕೆಯನ್ನು ಬಿಡುಗಡೆ ಮಾಡದಿದ್ದರೆ ಇವರಿಗೆ ಮೃತ್ಯು ಕಲ್ಪಿಸುತ್ತೇವೆ ಎಂಬುದು ಸಂಘಟನೆ ಬಿಡುಗಡೆ ಮಾಡಿರುವ ವೀಡಿಯೋ ಕ್ಲಿಪ್ಪಿಂಗ್ ಸಾರಾಂಶ. ಜೋರ್ಡಾನ್ ನ ಪೈಲೆಟ್ ಮುಆತ್-ಆಲ್ ಮತ್ತು ಜಪಾನಿನ ಪತ್ರಕರ್ತೆ ಕೆಂಜಿ ಗೋಟೋ ಉಗ್ರರ ಕೈ ಗೆ ಸಿಕ್ಕಿ ಬಿದ್ದಿದ್ದು ಇದೀಗ ಪ್ರಾಣಾಪಾಯ ಎದುರಿಸುತ್ತಿದ್ದಾರೆ.[ಶ್ವೇತಭವನಕ್ಕೆ ನುಗ್ಗಿ ಒಬಾಮಾ ರುಂಡ ಚೆಂಡಾಡುತ್ತೇವೆ: ಐಎಸ್ಐಎಸ್]

pakistan

ಸಾಜಿದಾ ಆಲ್ ರಿಸ್ವಾಯಿ ಯಾರು?
ಆತ್ಮಾಹುತಿ ಬಾಂಬರ್ ಸಾಜಿದಾ ಆಲ್ ರಿಸ್ವಾಯಿ ತನ್ನ ಗಂಡನ ಜತೆಗೂಡಿ 2005ರಲ್ಲಿ ಜೋರ್ಡನ್ ರಾಡಿಸನ್ ಹೋಟೆಲ್ ಮೇಲೆ ದಾಳಿ ಮಾಡಿದ್ದಳು. ಇಬ್ಬರು ಆಲ್-ಖೈದಾ ಸಂಘಟನೆಗೆ ಸೇರಿದ್ದು ಸೊಂಟಕ್ಕೆ ಬಾಂಬ್ ಕಟ್ಟಿಕೊಂಡು ದಾಳಿ ಮಾಡಿದ್ದರು.

ಗಂಡ ಆತ್ಮಾಹುತಿ ಮಾಡಿಕೊಂಡಿದ್ದು ರಿಸ್ವಾಯಿ ಸುತ್ತುವರಿದ್ದ ಬಾಂಬ್ ಗಳು ಸ್ಫೋಟವಾಗಲಿಲ್ಲ. ನಂತರ ಆಕೆಯನ್ನು ಬಂಧಿಸಲಾಗಿತ್ತು. ವಿಚಾರಣೆ ನಡೆಸಿದ ನ್ಯಾಯಾಲಯ ಆಕೆಗೆ ಮರಣದಂಡನೆ ವಿಧಿಸಿತ್ತು.[ಒಬಾಮಾ ಭೇಟಿ : ಬಾಂಬ್ ಬೆದರಿಕೆ ಒಡ್ಡಿದ್ದು ಯಾರು?]

ಇಸಿಸ್ ಗೆ ಸಹೋದರಿ?
ಲೇಡಿ ಬಾಂಬರ್ ರಿಸ್ವಾಯಿಯನ್ನು ಐಸಿಸ್ ಸಹೋದರಿ ಎಂದು ಕರೆದಿದೆ. ಆಕೆ ಆಲ್ ಖೈದಾಕ್ಕೆ ಸೇರಿದವಳು ಎಂಬುದನ್ನು ಮರೆತ ಉಗ್ರಗಾಮಿಗಳು ಸಹೊದರಿಯನ್ನು ಬಿಡಿ ಎಂದು ಕೋರಿದ್ದಾರೆ. ಇಷ್ಟಕ್ಕೂ ಜೋರ್ಡಾನ್ ದಾಳಿ ವೇಳೆ ಅಂದರೆ 2005ರಲ್ಲಿ ಇಸಿಸ್ ಸರಿಯಾಗಿ ಜನ್ಮವೇ ತಾಳಿರಲಿಲ್ಲ!

ತನಿಖಾಧಿಕಾರಿಗಳು ಹೇಳುವಂತೆ ರಿಸ್ವಾಯಿ ಇಸಿಸ್ ಉಗ್ರ ಸಂಘಟನೆ ಹುಟ್ಟಿಗೆ ಕಾರಣರಾದ ಅಬು-ಮುಸಾಬ್- ಅಲ್-ಜರ್ಕ್ವಿ ಸಹೋದರಿ. ಹಾಗಾಗಿಯೇ ಉಗ್ರರು ಈಕೆಯನ್ನು ಬಿಡುವಂತೆ ಒತ್ತಾಯ ಮಾಡಿದ್ದಾರೆ ಎನ್ನಲಾಗಿದೆ.

ಡಿಢೀರ್ ಒತ್ತಾಯವೇಕೆ?
ಜೋರ್ಡಾನ್ ನಲ್ಲಿ ಮರಣ ದಂಡನೆಗೆ ಚಿಂತನೆ ನಡೆಸಲಾಗಿದ್ದು ರಿಸ್ವಾಯಿ ಶಿಕ್ಷೆ ಹಿನ್ನೆಲೆಯಲ್ಲಿ ವಿಳಂಬವಾಗುತ್ತಿದೆ. ಜೋರ್ಡಾನ್ ಸರ್ಕಾರ ರಿಸ್ವಾಯಿಯನ್ನು ಮರೆತಿರಬಹುದು ಆದರೆ ಉಗ್ರರು ಮರೆತಿಲ್ಲ. ಈಕೆಯ ಬಿಡುಗಡೆಯಾದರೆ ಮರಣದಂಡನೆಗೆ ನಿಷೇಧ ಬೀಳಲಿದ್ದು ಉಳಿದ ಕೈದಿಗಳ ಶಿಕ್ಷೆಯೂ ತಪ್ಪುತ್ತದೆ. ಆದರೆ ಉಗ್ರರನ್ನು ಖಂಡಿತವಾಗಿ ಕ್ಷಮಿಸಲ್ಲ ಎಂದು ಜೋರ್ಡಾನ್ ಸರ್ಕಾರ ಸ್ಪಷ್ಟಪಡಿಸಿದೆ.

ಲೇಡಿ ಬಾಂಬರ್ ಗಳಿಗೆ ಬಲು ಬೇಡಿಕೆ!
ಲೇಡಿ ಬಾಂಬರ್ ಗಳು ಪರಿಸರಕ್ಕೆ ಹೊಂದಿಕೊಂಡು ಯಾರಿಗೂ ಅನುಮಾನ ಬಾರದಂತೆ ದಾಳಿ ನಡೆಸಬಲ್ಲರು. ಅಲ್ಲದೇ ಜನರು ಸಹ ಮಹಿಳೆಯರ ಮೇಲೆ ಶಂಕೆ ವ್ಯಕ್ತಪಡಿಸುವುದಿಲ್ಲ.

ಹಿಂದೆ ಉಗ್ರರು ಒತ್ತೆಯಾಳಾಗಿರಿಸಿಕೊಂಡಿದ್ದ ಅಮೆರಿಕದ ಪತ್ರಕರ್ತನೊಬ್ಬನನ್ನು ಬಿಟ್ಟು ಸಫಿಯಾ ಸಿದ್ದಿಕ್ವಿ ಎಂಬ ಲೇಡಿ ಬಾಂಬರ್ ನ್ನು ಬಿಡುಗಡೆ ಮಾಡಿಸಿಕೊಂಡಿದ್ದರು. ಈಗ ಉಗ್ರರು ಮತ್ತೆ ಅದೇ ರೀತಿಯ ತಂತ್ರ ಹಣೆದಿದ್ದು ಒತ್ತೆಯಾಳುಗಳ ಮೂಲಕ ಒತ್ತಡ ತರುವ ಯತ್ನ ಮುಂದುವರಿಸಿದ್ದಾರೆ.

English summary
The ISIS has made it clear that it will kill two hostages if Sajida al Rishwai is not released. They no longer want money, but want their sister back is what one of the hostages had said in a video that was released by the ISIS.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X