ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹೊತ್ತಿ ಉರಿಯುತ್ತಿದೆ ಅಮೇಜಾನ್ ಕಾಡು: ಭಾರಿ ಕಾಳ್ಗಿಚ್ಚು

|
Google Oneindia Kannada News

ನವದೆಹಲಿ, ಆಗಸ್ಟ್ 23: ಜಗತ್ತಿನ ಅತಿ ದೊಡ್ಡ ಹಾಗೂ ವೈವಿಧ್ಯವನ್ನು ಒಳಗೊಂಡಿರುವ ವಿಸ್ಮಯಕಾರಿ ಅಮೇಜಾನ್ ಕಾಡಿನಲ್ಲಿ ಮುಗಿಲು ಮುಟ್ಟುವಂತಹ ಬೆಂಕಿಯ ಜ್ವಾಲೆಗಳು ಏಳುತ್ತಿವೆ. ಅಪಾರ ಹಾಗೂ ಅಪರೂಪದ ಸಸ್ಯ ಮತ್ತು ಪ್ರಾಣಿ ಜಗತ್ತಿಗೆ ಆಶ್ರಯ ನೀಡಿರುವ ಅಮೇಜಾನ್ ಅರಣ್ಯ ಹೊತ್ತಿ ಉರಿಯುತ್ತಿದೆ.

ಬ್ರೆಜಿಲ್, ಪೆರು, ಕೊಲಂಬಿಯಾ, ಫ್ರಾನ್ಸ್, ವೆನೆಜುವೆಲಾ, ಈಕ್ವೆಡಾರ್, ಗಯಾನಾ, ಬೊಲಿವಿಯಾ ಮತ್ತು ಸುರಿನೇಮ್ ದೇಶಗಳಲ್ಲಿ ಹರಡಿಕೊಂಡಿರುವ ಅಮೇಜಾನ್ ಕಾಡಿನಲ್ಲಿ ಉಂಟಾಗಿರುವ ಕಾಳ್ಗಿಚ್ಚು ಭಾರಿ ಪ್ರಮಾಣದ ಅನಾಹುತ ಸೃಷ್ಟಿಸಿದೆ. ಸಾವಿರಾರು ಎಕರೆ ಕಾಡು ಬೆಂಕಿಯ ಜ್ವಾಲೆಗೆ ಸುಟ್ಟು ಭಸ್ಮವಾಗಿವೆ. ಸೋಮವಾರ ಮಧ್ಯಾಹ್ನದ ಬಳಿಕ 1,700 ಮೈಲುವರೆಗೂ ಬೆಂಕಿಯ ಹೊಗೆ ಆವರಿಸಿದೆ.

ಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೈಟೆಕ್ ಕಣ್ಗಾವಲುಬಂಡೀಪುರದ ಹುಲಿ ಸಂರಕ್ಷಿತ ಪ್ರದೇಶಕ್ಕೆ ಹೈಟೆಕ್ ಕಣ್ಗಾವಲು

ಅತ್ಯಂತ ದಟ್ಟ ಕಾಡನ್ನು ಹೊಂದಿರುವ ಭಾಗದಲ್ಲಿ ಬೆಂಕಿ ಹೊತ್ತಿ ಉರಿಯುತ್ತಿದ್ದರೂ ಈ ದೇಶಗಳ ಗಮನಕ್ಕೆ ಬಂದಿಲ್ಲ. ನಾಸಾದ ಸ್ಯಾಟಲೈಟ್ ಬೆಂಕಿಯ ರೋಷಾವೇಷದ ಚಿತ್ರವನ್ನು ಸೆರೆಹಿಡಿದಿವೆ. ಭಾರಿ ಗಾಳಿಯಿಂದಾಗಿ ಬೆಂಕಿ ವ್ಯಾಪಿಸುವ ರಭಸ ಇನ್ನಷ್ಟು ಜೋರಾಗಿದ್ದು, ಕಪ್ಪನೆಯ ದಟ್ಟ ಹೊಗೆ ಆವರಿಸಿಕೊಂಡಿದೆ. ಅದನ್ನು ನಂದಿಸುವುದಕ್ಕೆ ಹರಸಾಹಸ ಪಡಬೇಕಾಗಿದೆ.

Massive Wild Fire In Amazon Rainforest Brazil

ಅಮೇಜಾನ್ ಅರಣ್ಯದ ಅಗ್ನ ಅನಾಹುತವನ್ನು ಅಂತಾರಾಷ್ಟ್ರೀಯ ಬಿಕ್ಕಟ್ಟು ಎಂದು ಫ್ರಾನ್ಸ್‌ನ ಅಧ್ಯಕ್ಷ ಇಮ್ಯಾನುಯೆಲ್ ಮ್ಯಾಕ್ರಾನ್ ಹೇಳಿದ್ದಾರೆ. ಜಿ7ರ ಶೃಂಗಸಭೆಯಲ್ಲಿ ಕಾಳ್ಗಿಚ್ಚಿನ ಸಮಸ್ಯೆಯನ್ನು ಪ್ರಮುಖವಾಗಿ ಚರ್ಚೆಗೆ ತೆಗೆದುಕೊಳ್ಳುವಂತೆ ಆಗ್ರಹಿಸಿದ್ದಾರೆ.

ಈ ತಿಂಗಳ ಆರಂಭದಲ್ಲಿ ಬ್ರೆಜಿಲ್ ಈ ಪ್ರದೇಶದಲ್ಲಿ ಅಗ್ನಿ ಅನಾಹುತಗಳು ಹೆಚ್ಚುತ್ತಿರುವುದರಿಂದ ತುರ್ತು ಪರಿಸ್ಥಿತಿ ಘೋಷಿಸಿತ್ತು. ಇದುವರೆಗೂ 73,000ದಷ್ಟು ಬೆಂಕಿ ಅನಾಹುತಗಳನ್ನು ಬ್ರೆಜಿಲ್‌ನ ಬಾಹ್ಯಾಕಾಶ ಸಂಶೋಧನಾ ಕೇಂದ್ರ ಪತ್ತೆಹಚ್ಚಿದೆ.

ಜಗತ್ತಿನ ಶೇ 20ರಷ್ಟು ಆಮ್ಲಜನಕವನ್ನು ಅಮೇಜಾನ್ ಮಳೆ ಕಾಡು ಉತ್ಪಾದಿಸುತ್ತದೆ. ಜತೆಗೆ ಶೇ 10ರಷ್ಟು ಜೀವವೈವಿಧ್ಯ ಈ ಕಾಡಿನಲ್ಲಿದೆ. ಭೂಗ್ರಹದ ಶ್ವಾಸಕೋಶ ಎಂದೇ ಹೆಸರಾಗಿರುವ ಅಮೇಜಾನ್, ಹವಾಮಾನದ ವೈಪರೀತ್ಯಗಳನ್ನು ನಿಯಂತ್ರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತಿದೆ.

550 ಮಿಲಿಯನ್ ಹೆಕ್ಟೇರ್ ವಿಸ್ತೀರ್ಣದಲ್ಲಿ ಅಮೇಜಾನ್ ಕಾಡು ಹರಡಿಕೊಂಡಿದೆ. ಬೆಂಕಿಯ ರಭಸ ಕಾಡಿನ ಸುತ್ತಮುತ್ತ ವಾಸಿಸುವ ಪ್ರದೇಶಗಳ ಜನರಲ್ಲಿ ಆತಂಕ ಮೂಡಿಸಿದೆ. ಅನೇಕ ಸೆಲೆಬ್ರಿಟಿಗಳು ಅಮೇಜಾನ್‌ಗಾಗಿ ಪ್ರಾರ್ಥಿಸಿ ಎಂದು ಫೇಸ್‌ಬುಕ್, ಇನ್‌ಸ್ಟಾಗ್ರಾಂಗಳಲ್ಲಿ ಪೋಸ್ಟ್ ಮಾಡುತ್ತಿದ್ದಾರೆ.

ಗುರುವಾರದಿಂದ ಸ್ಯಾಟಲೈಟ್ ಚಿತ್ರಗಳು ಸುಮಾರು 9,507 ಹೊಸ ಕಾಳ್ಗಿಚ್ಚುಗಳನ್ನು ಪತ್ತೆಹಚ್ಚಿವೆ. ಇವುಗಳಲ್ಲಿ ಹೆಚ್ಚಿನವು ಅಮೇಜಾನ್ ವಲಯದಲ್ಲಿ ಕಾಣಿಸಿಕೊಂಡಿವೆ.

English summary
Major fire detected in Amazon rainforest. Satellite images spotted 9,507 new forest fires in Brazil.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X