ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಂಡೋನೇಷ್ಯಾ ದ್ವೀಪದ ಮೇಲೆ ಮತ್ತೆ ಅಪ್ಪಳಿಸಿದ ಪ್ರಬಲ ಭೂಕಂಪ

By Prasad
|
Google Oneindia Kannada News

ಲೊಂಬೊಕ್ (ಇಂಡೋನೇಷ್ಯಾ), ಆಗಸ್ಟ್ 19 : 460 ಜನರನ್ನು ಬಲಿ ತೆಗೆದುಕೊಂಡಿದ್ದ ಪ್ರಬಲ ಭೂಕಂಪ, ಎರಡೇ ವಾರಗಳಲ್ಲಿ ಇಂಡೋನೇಷ್ಯಾ ದ್ವೀಪದ ಮೇಲೆ ಭಾನುವಾರ ಮತ್ತೆ ಅಪ್ಪಳಿಸಿದೆ.

ಈ ಬಾರಿ 6.3 ಪ್ರಮಾಣದ ಭೂಕಂಪ ಲೊಂಬೊಕ್ ಎಂಬಲ್ಲಿ ಸಂಭವಿಸಿದ್ದು, ಜನರನ್ನು ಮತ್ತೆ ಭಯದ ಮಡುವಿಗೆ ತಳ್ಳಿದೆ. ಭೂಕಂಪ ಸಂಭವಿಸುತ್ತಿದ್ದಂತೆ ಜನರೆಲ್ಲ ಬೀದಿಗೆ ಓಡಿ ಬಂದಿದ್ದಾರೆ. ಸಾವು-ನೋವಿನ ಬಗ್ಗೆ ಇನ್ನೂ ವರದಿ ಬಂದಿಲ್ಲ.

ಲೊಂಬೊಕ್ ಪೂರ್ವದಲ್ಲಿರುವ ಬೆಲಾಂಟಿಂಗ್ ಎಂಬ ಪ್ರದೇಶದ ವಾಯವ್ಯ ಭಾಗದಲ್ಲಿ ಭೂಕಂಪದ ಕೇಂದ್ರಬಿಂದು ಇದ್ದು, 7 ಕಿ.ಮೀ. ಆಳದಲ್ಲಿದೆ.

Massive earthquake rattles Indonesian Island again

ನಾನು ಕಾರನ್ನು ಡ್ರೈವ್ ಮಾಡುತ್ತಿದ್ದಾಗ ವಿದ್ಯುತ್ ಕಂಬಗಳು ಓಲಾಡುತ್ತಿರುವುದನ್ನು ನೋಡಿ ಭೂಕಂಪ ಸಂಭವಿಸಿದ್ದು ಅರಿವಾಯಿತು. ಜನರು ಕಿರುಚುತ್ತ ಬೀದಿಗೆ ಓಡಿ ಬರುತ್ತಿದ್ದರು ಎಂದು ಅಲ್ಲಿಯ ನಿವಾಸಿ ಆಗಸ್ ಸಲೀಂ ಅವರು ಬಣ್ಣಿಸಿದ್ದಾರೆ.

ಹೆಚ್ಚೂಕಡಿಮೆ ಒಂದೇ ಸಮಯದಲ್ಲಿ ಎರಡು ಬಾರಿ ಭೂಮಿ ಕಂಪಿಸಿದೆ. ಮೊದಲ ಬಾರಿ 5.2 ಪ್ರಮಾಣದಲ್ಲಿದ್ದರೆ, ಎರಡನೇ ಬಾರಿ 6.3 ಪ್ರಮಾಣದ ಪ್ರಬಲ ಭೂಕಂಪ ಸಂಭವಿಸಿದೆ. ನೆರೆಹೊರೆಯ ಬಾಲಿಯಲ್ಲಿಯೂ ಕಂಪನದ ಅನುಭವವಾಗಿದೆ.

ಕೆಲವು ವರದಿಗಳ ಪ್ರಕಾರ ಇಂದು ಸಂಭವಿಸಿದ ಭೂಕಂಪದ ಪ್ರಮಾಣ 6.9ರಷ್ಟಿದೆ. ಸತತವಾಗಿ ಸಂಭವಿಸುತ್ತಿರುವ ಭೂಕಂಪನದಿಂದ ಅಲ್ಲಿನ ಜನರು ಭಯದಿಂದಲೇ ದಿನ ಕಳೆಯಬೇಕಾದ ಪರಿಸ್ಥಿತಿ ಎದುರಾಗಿದೆ.

ಆಗಸ್ಟ್ 5ರಂದು ಸಂಭವಿಸಿದ್ದ ಭೂಕಂಪದಲ್ಲಿ ಸಾವಿರಾರು ಮನೆಗಳು, ಮಸೀದಿಗಳು, ಇತರ ಕಟ್ಟಡಗಳು ನೆಲಸಮವಾಗಿದ್ದವು. 2004ರಲ್ಲಿ ಸಂಭವಿಸಿದ್ದ 9.3 ಪ್ರಮಾಣದ ಭೂಕಂಪದಲ್ಲಿ 2.2 ಲಕ್ಷಕ್ಕೂ ಹೆಚ್ಚು ಜನರು ಬಲಿಯಾಗಿದ್ದರು.

English summary
Massive earthquake of 6.3 magnitude has rattled Indonesian Island, two weeks after it devastated the quake prone country.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X