ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ನ್ಯೂಜಿಲೆಂಡ್ ಬಳಿ ಭಾರೀ ಪ್ರಮಾಣದ ಭೂಕಂಪ, ಸುನಾಮಿ ಎಚ್ಚರಿಕೆ

|
Google Oneindia Kannada News

ಇದೀಗ ಬಂದಿರುವ ಮಾಹಿತಿಯ ಪ್ರಕಾರ ನ್ಯೂ ಕಲೆಡೋನಿಯಾ ಮತ್ತು ವನುವಾಟು ದ್ವೀಪದ ಬಳಿ ಸುನಾಮಿ ಅಲೆಗಳು ಕಾಣಿಸಿಕೊಂಡಿದ್ದು, ತೀರದ ಬಳಿ ವಾಸಿಸುವ ಜನರನ್ನು ಸ್ಥಳಾಂತರಿಸಲು ಸೂಚನೆ ನೀಡಲಾಗಿದೆ. ತೀರದಿಂದ ಕನಿಷ್ಠ 300 ಮೀಟರ್ ದೂರ ತಲುಪಿ, 12 ಮೀಟರ್ ಗಿಂತಲೂ ಎತ್ತರವಿರುವ ಪ್ರದೇಶದಲ್ಲಿ ಇರುವಂತೆ ಸೂಚಿಸಲಾಗಿದೆ.

ಆಕ್ಲೆಂಡ್, ಡಿಸೆಂಬರ್ 05 : ನ್ಯೂಜಿಲೆಂಡ್ ನ ಉತ್ತರ ಭಾಗದಲ್ಲಿರುವ ಮತ್ತು ಆಸ್ಟ್ರೇಲಿಯಾದ ಪೂರ್ವ ಭಾಗದಲ್ಲಿರುವ ನ್ಯೂ ಕಲೆಡೋನಿಯಾ ಎಂಬ ದ್ವೀಪದ ಬಳಿ ಬುಧವಾರ 7.6 ಪ್ರಮಾಣದ ಭಾರೀ ಭೂಕಂಪ ಸಂಭವಿಸಿದೆ.

ಪೆಸಿಫಿಕ್ ಸಾಗರದಲ್ಲಿ ಈ ಭೂಕಂಪ ಸಂಭವಿಸಿದ್ದು, ಕೇವಲ 10 ಕಿ.ಮೀ. ಭೂಮಿಯ ಆಳದಲ್ಲಿ ಭಾರೀ ಕಂಪನ ಉಂಟಾಗಿದೆ. ಆದರೆ, ನ್ಯೂಜಿಲೆಂಡ್ ಗೆ ಯಾವುದೇ ಸುನಾಮಿಯ ಭೀತಿಯಿಲ್ಲ ಎಂದು ಹೇಳಲಾಗಿದೆ.

ಜಿ 20 ಶೃಂಗಸಭೆ ನಡೆದ ಬ್ಯೂನಸ್ ಐರಿಸ್ ಬಳಿ ಭೂಕಂಪಜಿ 20 ಶೃಂಗಸಭೆ ನಡೆದ ಬ್ಯೂನಸ್ ಐರಿಸ್ ಬಳಿ ಭೂಕಂಪ

ಕಂಪನದ ಕೇಂದ್ರಬಿಂದುವಿನ ಭಾಗದಿಂದ ಸಾವಿರ ಕಿ.ಮೀ. ಒಳಗಿರುವ ಪ್ರದೇಶಗಳಿಗೆ ಸುನಾಮಿಯ ಎಚ್ಚರಿಕೆ ನೀಡಲಾಗಿದೆ. ನ್ಯೂ ಕಲೆಡೋನಿಯಾ ದ್ವೀಪಕ್ಕೂ ಸುನಾಮಿಯ ಎಚ್ಚರಿಕೆ ನೀಡಲಾಗಿದೆ.

Massive earthquake hits North of NewZealand and East of Australia

ಭೂಕಂಪದ ಕೇಂದ್ರಬಿಂದು ಲಾಯಲ್ಟಿ ಐಲ್ಯಾಂಡ್ ನ ಆಗ್ನೇಯ ಭಾಗದಲ್ಲಿದೆ. ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ಗೆ ಸುನಾಮಿ ಎಚ್ಚರಿಕೆಯನ್ನು ಹಿಂತೆಗೆಯಲಾಗಿದ್ದು, ಹತ್ತಿರದಲ್ಲಿರುವ ಸಣ್ಣ ದ್ವೀಪಗಳಾದ ನ್ಯೂ ಕೆಲಡೋನಿಯಾ, ವನುವಾಟು, ಫಿಜಿ ಮುಂದಾದ ದ್ವೀಪಗಳಿಗೆ ಅಪ್ಪಳಿಸುವ ಸಾಧ್ಯತೆ ಇದೆ ಎಂದು ಮುನ್ನೆಚ್ಚರಿಕೆ ನೀಡಲಾಗಿದೆ.

ನ್ಯೂ ಕೆಲಡೋನಿಯಾದಲ್ಲಿ ಸಮುದ್ರ ಮಟ್ಟಕ್ಕಿಂದ 3 ಮೀಟರ್ ಎತ್ತರದಲ್ಲಿ ಅಲೆಗಳು ದಡವನ್ನು ಅಪ್ಪಳಿಸುತ್ತಿವೆ, ಫಿಜಿಯಲ್ಲಿ 1 ಮೀಟರ್ ಎತ್ತರದ ಅಲೆಗಳು ಅಪ್ಪಳಿಸುತ್ತಿವೆ. ಸುನಾಮಿ ಎಚ್ಚರಿಕೆ ನೀಡಲಾಗಿರುವ ದ್ವೀಪದಲ್ಲಿ ನೆಲೆಸಿರುವ ಜನರು ಮುನ್ನೆಚ್ಚರಿಕೆ ವಹಿಸಬೇಕು ಎಂದು ಹೇಳಲಾಗಿದೆ.

ಬೆಚ್ಚಿಬೀಳಿಸುವ ಅಮೆರಿಕ ಭೀಕರ ಭೂಕಂಪದ ವೈರಲ್ ವಿಡಿಯೋಗಳು ಬೆಚ್ಚಿಬೀಳಿಸುವ ಅಮೆರಿಕ ಭೀಕರ ಭೂಕಂಪದ ವೈರಲ್ ವಿಡಿಯೋಗಳು

ಇತ್ತೀಚೆಗಷ್ಟೇ ಡಿಸೆಂಬರ್ 1ರಂದು ಅಮೆರಿಕದ ಅಲಾಸ್ಕಾದಲ್ಲಿ 7.2 ಪ್ರಮಾಣದ ಭೂಕಂಪ ಸಂಭವಿಸಿ ಭಾರೀ ಅನಾಹುತ ಸೃಷ್ಟಿಸಿತ್ತು. ಯಾವುದೇ ಸಾವುನೋವುಗಳ ವರದಿ ಬರದಿದ್ದರೂ, ಹಲವಾರು ರಸ್ತೆಗಳು ಹಾನಿಗೀಡಾಗಿವೆ. ಹಿಮಾಲಯ ಪರ್ವತ ಶ್ರೇಣಿಯಲ್ಲಿಯೂ 8.5 ಪ್ರಮಾಣದ ಭೂಕಂಪ ಸಂಭವಿಸುವ ಸಾಧ್ಯತೆಯಿದೆ ಎಂದು ತಜ್ಞರು ಎಚ್ಚರಿಕೆ ನೀಡಿದ್ದಾರೆ.

English summary
Massive earthquake hits North of NewZealand and East of Australia. Magnitude 7.6 earthquake near Loyalty Islands, no tsunami threat to New Zealand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X