ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮತ್ತೊಮ್ಮೆ ವಿಶ್ವವನ್ನು ಬೆಚ್ಚಿಬೀಳಿಸಿದ ಸೈಬರ್ ದಾಳಿಕೋರರು

|
Google Oneindia Kannada News

ನವದೆಹಲಿ, ಜೂನ್ 28 : ಇತ್ತೀಚೆಗಷ್ಟೇ 'ವಾನ್ನಾಕ್ರೈ' ಸೈಬರ್ ದಾಳಿ ಮೂಲಕ ಜಗತ್ತನ್ನೇ ಬೆಚ್ಚಿಬೀಳಿಸಿದ್ದ ಸೈಬರ್ ದಾಳಿಕೋರರು, ಇದೀಗ ಅದೇ ಮಾದರಿಯಲ್ಲಿ ಮಂಗಳವಾರ ಜಗತ್ತಿನಾದ್ಯಂತ ದಾಳಿ ಮಾಡಿದ್ದಾರೆ.

ವಾನ್ನಾಕ್ರೈ ಮಾದರಿಯಲ್ಲಿ ಯೂರೋಪಿಯನ್ ದೇಶಗಳ ಮೇಲೆ ದಾಳಿಯಾಗಿದೆ ಎಂದು ಹೇಳಲಾಗುತ್ತಿದೆ. ಉಕ್ರೇನ್ ನ ವಿಮಾನಯಾನ, ಬ್ಯಾಂಕ್‌, ಸರ್ಕಾರಿ ಕಚೇರಿಗಳ ಕಂಪ್ಯೂಟರ್ ಗಳ ಮೇಲೆ ಭಾರೀ ಪ್ರಮಾಣದಲ್ಲಿ ಸೈಬರ್ ದಾಳಿ ನಡೆಸಲಾಗಿದ್ದು, ಇದರ ಬೆನ್ನಲ್ಲೇ ಫ್ರಾನ್ಸ್‌ನ ಕಂಪ್ಯೂಟರ್‌ ವ್ಯವಸ್ಥೆಗಳ ಮೇಲೂ ದಾಳಿ ನಡೆದಿದೆ.

Massive cyberattack cripples businesses worldwide

ಇನ್ನು ಸೈಬರ್ ದಾಳಿ ಬಗ್ಗೆ ಉಕ್ರೇನ್ ಪ್ರಧಾನಿ ಸ್ಪಷ್ಟನೆ ನೀಡಿದ್ದು, ಸರ್ಕಾರಿ ಮಹತ್ವದ ಕಡತಗಳಿರುವ ಕಂಪ್ಯೂಟರ್ ಗಳ ಮೇಲೆ ದಾಳಿಯಾಗಿಲ್ಲ ಎಂದಿದ್ದಾರೆ.

ಭೀಕರ ಸೈಬರ್ ದಾಳಿ ಬಗ್ಗೆ ಎಚ್ಚರಿಸಿದ್ದ ಭಾರತೀಯ ಮೂಲದ ವೈದ್ಯಭೀಕರ ಸೈಬರ್ ದಾಳಿ ಬಗ್ಗೆ ಎಚ್ಚರಿಸಿದ್ದ ಭಾರತೀಯ ಮೂಲದ ವೈದ್ಯ

ಉಕ್ರೇನ್, ರಷ್ಯಾ ಸೇರಿದಂತೆ ಕೆಲ ದೇಶಗಳ ಪ್ರಮುಖ ಮೂಲಭೂತ ಸೌಕರ್ಯ ವ್ಯವಸ್ಥೆಯ ಮೇಲೆ ದಾಳಿ ನಡೆದಿದೆ. ರಷ್ಯಾದ ಪ್ರಮುಖ ಇಂಧನ ಸಂಸ್ಥೆ ರಾಸ್ ನೆಫ್ಟ್ ಮೇಲೂ ದಾಳಿಯಾಗಿದ್ದು, ಸಂಸ್ಥೆಯ ಸೈಬರ್ ಭದ್ರತಾ ಸಿಬ್ಬಂದಿಗಳು ದೊಡ್ಡ ಪ್ರಮಾಣದ ನಷ್ಟವನ್ನು ತಡೆದಿದ್ದಾರೆ ಎಂದು ಹೇಳಲಾಗುತ್ತಿದೆ.

ಇನ್ನು ಡ್ಯಾನಿಷ್‌ ಶಿಪ್ಪಿಂಗ್ ಕಂಪೆನಿ ಮಯೇಸ್ಕ್ ರ್ ಮತ್ತು ಬ್ರಿಟಿಷ್‌ ಜಾಹೀರಾತು ಕಂಪನಿ ಡಬ್ಲ್ಯೂಪಿಪಿಯಂತಹ ಬೃಹತ್‌ ಕಂಪನಿಗಳೂ ದಾಳಿಗೊಳಗಾಗಿವೆ.

English summary
Hackers launched blistering ransomware attacks Tuesday against companies and agencies across the world, particularly targeting Ukranian businesses.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X