• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ಕ್ಯಾಲಿಫೋರ್ನಿಯಾದಲ್ಲಿ ಆಗಂತುಕನಿಂದ ಗುಂಡಿನ ದಾಳಿ, 13 ಜನರ ಹತ್ಯೆ

|

ಕ್ಯಾಲಿಫೋರ್ನಿಯಾ, ನವೆಂಬರ್ 08 : ಇದೀಗ ಬಂದಿರುವ ಸುದ್ದಿಯ ಪ್ರಕಾರ, ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್ ನಗರದ ಮ್ಯೂಸಿಕ್ ಬಾರೊಂದರಲ್ಲಿ ವ್ಯಕ್ತಿಯೊಬ್ಬ ನಡೆಸಿದ ಭೀಕರ ಗುಂಡಿನ ದಾಳಿಯಲ್ಲಿ 13 ಜನರು ಸಾವಿಗೀಡಾಗಿದ್ದಾರೆ.

ಈ ಮೊದಲು 13 ಜನರು ಗಾಯಗೊಂಡಿದ್ದಾರೆ ಎಂದು ಮಾತ್ರ ಹೇಳಲಾಗಿತ್ತು. ಆದರೆ, ಇದೀಗ ಬರುತ್ತಿರುವ ಮಾಹಿತಿ ಪ್ರಕಾರ, ಓರ್ವ ಪೊಲೀಸ್ ಅಧಿಕಾರಿ ಸೇರಿದಂತೆ ಸೇರಿದಂತೆ 13 ಜನರು ಆತನಿಂದ ಹತ್ಯೆಗೀಡಾಗಿದ್ದಾರೆ. ಅದೇ ಸ್ಥಳದಲ್ಲಿ ಆಗಂತುಕನ ಶವವೂ ಸಿಕ್ಕಿದೆ. ಜೊತೆಗೆ ಹನ್ನೆರಡು ಜನರೂ ಗಾಯಗೊಂಡಿದ್ದಾರೆ.

ಮೈನಡುಗಿಸುವಂತಿವೆ ಅಮೆರಿಕಾ ಶಾಲಾ ಹತ್ಯಾಕಾಂಡಗಳು

ಹಿಂದಿನ ಸುದ್ದಿ : ಕ್ಯಾಲಿಫೋರ್ನಿಯಾದ ಥೌಸಂಡ್ ಓಕ್ಸ್ ನಗರದ ಮ್ಯೂಸಿಕ್ ಬಾರ್ ವೊಂದರಲ್ಲಿ ಬಂದೂಕುಧಾರಿಯೊಬ್ಬ ಯದ್ವಾತದ್ವಾ ಗುಂಡಿನ ದಾಳಿ ನಡೆಸಿದ್ದರಿಂದ ಪೊಲೀಸ್ ಅಧಿಕಾರಿ ಸೇರಿದಂತೆ ಡಜನ್ ಗೂ ಹೆಚ್ಚು ಜನರು ಗಾಯಗೊಂಡಿರುವ ಘಟನೆ ಬುಧವಾರ ರಾತ್ರಿ ನಡೆದಿದೆ.

ದೀಪಾವಳಿ ವಿಶೇಷ ಪುರವಣಿ

ಬಾರ್ಡರ್ ಲೈನ್ ಬಾರ್ ಅಂಡ್ ಗ್ರಿಲ್ ನಲ್ಲಿ ಗುಂಡಿನ ದಾಳಿ ನಡೆಸಿದ ನಂತರ ಆಗಂತುಕ ಪರಾರಿಯಾಗಿದ್ದಾನೆ. ವಿದ್ಯಾರ್ಥಿಗಳು ಸಂಭ್ರಮಿಸಲೆಂದು ಮ್ಯೂಸಿಕ್ ಬಾರ್ ನಲ್ಲಿ ಅಲ್ಲಿ ಸೇರಿದ್ದಾಗ ಮೊದಲಿಗೆ ಸ್ಮೋಕ್ ಹ್ಯಾಂಡ್ ಗ್ರೆನೇಡ್ ಬಿಸಾಕಿದ್ದಾನೆ, ನಂತರ ಕನಿಷ್ಠ 30 ಸುತ್ತು ಗುಂಡು ಹಾರಿಸಿದ್ದಾನೆ ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ. ಅದೃಷ್ಟವಶಾತ್ ಯಾವ ಪ್ರಾಣ ಹಾನಿಯೂ ಆಗಿಲ್ಲ.

ಯಹೂದಿಗಳೆಲ್ಲ ಸಾಯಬೇಕು ಎಂದು ಕೂಗುತ್ತಾ ಶೂಟೌಟ್, ಆರೋಪಿ ಬಂಧನ

ಆತ ಗುಂಡಿನ ದಾಳಿ ಆರಂಭಿಸುತ್ತಿದ್ದಂತೆ ಎಲ್ಲೆಂದರಲ್ಲಿ ಓಡಿದ ಜನರು ಬಾರ್ ನಲ್ಲಿದ್ದ ಬಾತ್ ರೂಂ ಮತ್ತು ಅಟ್ಟದಲ್ಲಿರುವ ಕೋಣೆಯೊಂದರಲ್ಲಿ ಅಡಗಿಕೊಂಡರು. ಅಲ್ಲಿಂದ ತಪ್ಪಿಸಿಕೊಂಡವರು ಗ್ಯಾಸ್ ಸ್ಟೇಷನ್ ಗೆ ಓಡಿದ್ದಾರೆ ಮತ್ತು ಗಾಯಗೊಂಡ ಕೆಲವರು ವೈದ್ಯಕೀಯ ಸಹಾಯಕ್ಕೆ ಅಂಗಲಾಚಿದ್ದಾರೆ.

ಬಿಳಿಯರನ್ನು ಬಿಳಿಯರು ಕೊಲ್ಲೋಲ್ಲ ಎಂದು ಗುಂಡು ಹಾರಿಸಿದ ಗನ್ ಮ್ಯಾನ್!

ಸೆಮಿ ಆಟೋಮ್ಯಾಟಿಕ್ ಗನ್ ಹಿಡಿದಿದ್ದ ಆಗಂತುಕ ಬುಧವಾರ ರಾತ್ರಿ ಸುಮಾರು 11.20ರ ಹೊತ್ತಿನಲ್ಲಿ ಗುಂಡಿನ ದಾಳಿ ನಡೆಸಿದ್ದಾನೆ. ಪೊಲೀಸರು ಸ್ಥಳಕ್ಕೆ ಧಾವಿಸಿದ್ದು, ಆತನ ಹುಡುಕಾಟದಲ್ಲಿ ತೊಡಗಿದ್ದಾರೆ. ಹೆಚ್ಚಿನ ವಿವರಗಳನ್ನು ನಿರೀಕ್ಷಿಸಲಾಗಿದೆ.

ಇತ್ತೀಚಿನ ಭೀಕರ ಹತ್ಯಾಕಾಂಡಗಳು

ಫ್ಲೋರಿಡಾದಲ್ಲಿ ನಾಲ್ವರ ಹತ್ಯೆ

ಫ್ಲೋರಿಡಾದಲ್ಲಿ ನಾಲ್ವರ ಹತ್ಯೆ

ಅಮೆರಿಕದ ಫ್ಲೋರಿಡಾದ ಜಾಕ್ಸೋನ್ ವಿಲ್ಲೆ ಎಂಬಲ್ಲಿ ಆಗಸ್ಟ್ ನಲ್ಲಿ ನಡೆದ ಶೂಟೌಟ್ ನಲ್ಲಿ ನಾಲ್ವರು ಮೃತರಾಗಿದ್ದರು. ವಿಡಿಯೋ ಗೇಮ್ಸ್ ಟೂರ್ನಮೆಂಟ್ ನಲ್ಲಿ 24 ವರ್ಷದ ಡೆವಿಡ್ ಕಾಟ್ಜ್ ಎಂಬಾತ ಓತಪ್ರೋತವಾಗಿ ಗುಂಡು ಹಾರಿಸಿದ್ದ.

ಅಮೆರಿಕ: ಫ್ಲೋರಿಡಾದಲ್ಲಿ ಭೀಕರ ಶೂಟೌಟ್ ಗೆ ನಾಲ್ವರು ಬಲಿ

ಸಿನ್ಸಿನ್ನಾಟಿಯಲ್ಲಿ ಮೂವರ ಸಾವು

ಸಿನ್ಸಿನ್ನಾಟಿಯಲ್ಲಿ ಮೂವರ ಸಾವು

ಅಮೆರಿಕದ ಸಿನ್ಸಿನ್ನಾಟಿಯ ಫೌಂಟೇನ್ ಸ್ಕ್ವೇರ್ ನಲ್ಲಿ ಸೆಪ್ಟೆಂಬರ್ ನಲ್ಲಿ ನಡೆದ ಶೂಟೌಟ್ ನಲ್ಲಿ ಮೂವರು ಹತ್ಯೆಗೀಡಾಗಿದ್ದರು. ಯಾವುದೇ ದೇಶದಲ್ಲಿ ಈ ಪರಿಯ ಶೂಟೌಟ್ ನೋಡಲು ಸಾಧ್ಯವಿಲ್ಲ ಎಂದು ಸಿನ್ಸಿನ್ನಾಟಿ ಮೇಯರ್ ಕಳವಳ ವ್ಯಕ್ತಪಡಿಸಿದ್ದರು.

ಸಿನ್ಸಿನಾಟಿ ಶೂಟೌಟ್ ನಲ್ಲಿ ಸಾವಿಗೀಡಾದ ಗುಂಟೂರಿನ ಪೃಥ್ವಿರಾಜ್

ಪಿಟ್ಸ್ ಬರ್ಗ್ ನಲ್ಲಿ 11 ಜನರ ಸಾವು

ಪಿಟ್ಸ್ ಬರ್ಗ್ ನಲ್ಲಿ 11 ಜನರ ಸಾವು

ಅಕ್ಟೋಬರ್ ನಲ್ಲಿ ನಡೆದ ಈ ಭೀಕರ ಹತ್ಯಾಕಾಂಡದಲ್ಲಿ ಪಿಟ್ಸ್ ಬರ್ಗ್ ನಲ್ಲಿ 11 ಜನ ಸತ್ತು, 6 ಜನರು ಗಾಯಗೊಂಡಿದ್ದರು. ಯಹೂದಿಗಳ ಶ್ರದ್ಧಾಕೇಂದ್ರದ ಮೇಲೆ ದಾಳಿ ಮಾಡಲಾಗಿತ್ತು. 46 ವರ್ಷದ ರಾಬರ್ಟ್ ಬೌವರ್ಸ್ ಎಂಬಾತ ಎಲ್ಲ ಯಹೂದಿಗಳು ಸಾಯಬೇಕು ಎಂದು ಘೋಷಣೆ ಮಾಡುತ್ತ ಗುಂಡಿನ ದಾಳಿ ನಡೆಸಿದ್ದ.

ಯಹೂದಿಗಳೆಲ್ಲ ಸಾಯಬೇಕು ಎಂದು ಕೂಗುತ್ತಾ ಶೂಟೌಟ್, ಆರೋಪಿ ಬಂಧನ

ನ್ಯೂಸ್ ರೂಂನಲ್ಲಿ ಐವರ ಬಲಿ

ನ್ಯೂಸ್ ರೂಂನಲ್ಲಿ ಐವರ ಬಲಿ

ಮೇರಿ ಲ್ಯಾಂಡ್ ನ ಅನ್ನಾಪೊಲಿಸ್ ನಲ್ಲಿರುವ 'ಕ್ಯಾಪಿಟಲ್ ಗೆಜೆಟ್' ಎಂಬ ವೃತ್ತಪತ್ರಿಕೆ ಕಚೇರಿ ಮೇಲೆ ಈ ದಾಳಿ ನಡೆಸಿದ್ದ ಗನ್ ಮ್ಯಾನ್, ಕಚೇರಿಯ ಗಾಜಿನ ಬಾಗಿಲಿಗೆ ಗುಂಡು ಹಾರಿಸಿ ಒಳಬಂದು, ಸಿಬ್ಬಂದಿ ಮೇಲೆ ಗುಂಡುಹಾರಿಸಿದ್ದ. ಜೂನ್ ನಲ್ಲಿ ನಡೆದಿದ್ದ ಈ ದಾಳಿಯಲ್ಲಿ ಐವರು ಸಾವಿಗೀಡಾಗಿ, ಹಲವಾರು ಜನರು ಗಾಯಗೊಂಡಿದ್ದರು.

ಅಮೆರಿಕದ ನ್ಯೂಸ್ ರೂಂ ನಲ್ಲಿ ಶೂಟೌಟ್: ಐವರು ಬಲಿ

17 ಜನರ ಭೀಕರ ಹತ್ಯೆ

17 ಜನರ ಭೀಕರ ಹತ್ಯೆ

ಇದು ಬಹುಶಃ ಇತ್ತೀಚಿನ ವರ್ಷಗಳಲ್ಲಿ ಅಮೆರಿಕದಲ್ಲಿ ಕಂಡ ಅತ್ಯಂತ ಹೀನಾಯ ಹತ್ಯಾಕಾಂಡ. ಕಳೆದ ಫ್ರೆಬ್ರವರಿಯಲ್ಲಿ, ಮಿಯಾಮಿಯಿಂದ 80 ಕಿ.ಮೀ. ದೂರದಲ್ಲಿರುವ ಫ್ಲೋರಿಡಾದ ಮರ್ಜರಿ ಸ್ಟೋನ್ ಲ್ಯಾಂಡ್ ಡಗ್ಲಾಸ್ ಹೈಸ್ಕೂಲ್ ನಲ್ಲಿ ಶಾಲೆಯ ಹಳೆಯ ವಿದ್ಯಾರ್ಥಿಯೇ ಮಕ್ಕಳ ಮೇಲೆ ಗುಂಡು ಹಾರಿಸಿದ ಪರಿಣಾಮ ಹಲವಾರು ಮಕ್ಕಳು ಸೇರಿ 17 ಜನರು ಹತ್ಯೆಗೀಡಾಗಿದ್ದರು.

ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

English summary
Unidentified gunman killed 13 people including a police officer as he opened fire at California bar in Thousand Oaks city. The body of shooter is also found at the Borderline Bar and Grill.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more