ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಸೂದ್ ಸತ್ತಿದ್ದಾನೆ ಎಂಬ ಸುದ್ದಿ ಸುಳ್ಳು: ಜೈಷ್ ನಿಂದಲೇ ಸ್ಪಷ್ಟನೆ

|
Google Oneindia Kannada News

ಇಸ್ಲಾಮಾಬಾದ್, ಮಾರ್ಚ್ 04: ಜೈಷ್ ಇ ಮೊಹಮ್ಮದ್ ಮುಖ್ಯಸ್ಥ ಮೌಲಾನಾ ಮಸೂಸ್ ಅಝರ್ ಸತ್ತಿದ್ದಾನೆ ಎಂದು ಪಾಕ್ ಮಾಧ್ಯಮ ವರದಿ ಮಾಡಿದ ಕೆಲವೇ ಗಂಟೆಗಳಲ್ಲಿ ಆತ ಸತ್ತಿದ್ದಾನೆ ಎಂಬ ಸುಳ್ಳು ಸುದ್ದಿ ಎಂದು ಸ್ವತಃ ಜೈಷ್ ಉಗ್ರ ಸಂಘಟನೆಯೇ ಸ್ಪಷ್ಟನೆ ನೀಡಿದೆ.

ಕಿಶ್ನಿ ವೈಫಲ್ಯದಿಂದಾಗಿ ರಾವಲ್ಪಿಂಡಿಯ ಮಿಲಿಟರಿ ಆಸ್ಪತ್ರೆಯಲ್ಲಿ ಮಸೂಸ್ ಅಝರ್ ಸತ್ತಿದ್ದಾನೆ ಎಂದು ಪಾಕ್ ಮಾಧ್ಯಮಗಳು ವರದಿ ಮಾಡಿದ್ದವು. ಭಾರತ ಫೆಬ್ರವರಿ 26 ರಂದು ನಡೆಸಿದ್ದ ಉಗ್ರ ನೆಲೆಯ ಮೇಲಿನ ಏರ್ ಸ್ಟ್ರೈಕ್ ನಲ್ಲೇ ಮಸೂದ್ ಹತನಾಗಿದ್ದಾನೆ ಎಂದು ಕೆಲವು ವರದಿಗಳು ಹೇಳಿದ್ದವು.

ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಮೃತಪಟ್ಟಿಲ್ಲ: ಪಾಕ್ ಮಾಧ್ಯಮ ಸ್ಪಷ್ಟನೆಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮಸೂದ್ ಮೃತಪಟ್ಟಿಲ್ಲ: ಪಾಕ್ ಮಾಧ್ಯಮ ಸ್ಪಷ್ಟನೆ

ಇತ್ತೀಚೆಗಷ್ಟೇ ಸಂದರ್ಶನವೊಂದರಲ್ಲಿ ಮಾತನಾಡಿದ್ದ ಪಾಕಿಸ್ತಾನ ವಿದೇಶಾಂಗ ಸಚಿವ ಶಾ ಮಹ್ಮೂಸ್ ಖುರೇಷಿ, 'ಮಸೂದ್ ಅಝರ್ ಪಾಕಿಸ್ತಾನದಲ್ಲೇ ಇದ್ದಾನೆ. ಆದರೆ ಆತ ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿದ್ದಾನೆ. ಆತ ತನ್ನ ಮನೆಯಿಂದ ಹೊರಬರುವುದಕ್ಕೂ ಸಾಧ್ಯವಾಗದಷ್ಟು ಅನಾರೋಗ್ಯ ಪೀಡಿತನಾಗಿದ್ದಾನೆ' ಎಂದಿದ್ದರು.

ಮಸೂದ್ ಅಝರ್ ಸತ್ತಿದ್ದಾನೆ ಮತ್ತು ಸತ್ತಿನಲ್ಲ ಎಂಬೀ ಎರಡು ವರದಿಗಳು ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ಚರ್ಚೆಯಾಗಿವೆ.

ಮಸೂದ್ ಸಾಯುವ ದಿನ ದೂರವಿಲ್ಲ

ಐಎಸ್ ಐ ಉಪಾಯಗಳಿಂದ ನಮ್ಮನ್ನು ಮೂರ್ಖರನ್ನಾಗಿ ಮಾಡಬೇಡಿ. ಆ ಉಗ್ರ ಮಿಲಿಟರಿ ಆಸ್ಪತ್ರೆಯಲ್ಲೇ ಅವಿತು, ಚಿಕಿತ್ಸೆ ಪಡೆಯುತ್ತಿರುತ್ತಾನೆ. ಆದರೆ ನನಗೆ ಗೊತ್ತು, ಏರ್ ಸ್ಟ್ರೈಕ್ ಮೂಲಕ ಆತನನ್ನು ಮುಗಿಸುವ ದಿನ ದೂರವಿಲ್ಲ ಎಂದಿದ್ದಾರೆ ಹಿಮಾಂಶು

Array

ಶಿವರಾತ್ರಿ ಉಡುಗೊರೆ

"ಮಸೂದ್ ಸತ್ತಿದ್ದು ನಿಜವಾದರೆ ಇದು ಶಿವನೇ ಭಾರತಕ್ಕೆ ಶಿವರಾತ್ರಿಯೊಂದು ನೀಡಿದ ಉಡುಗೊರೆ" ಎಂದಿದ್ದಾರೆ ಅಭಿಷೇಕ್ ಶರ್ಮಾ

ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲನಾ ಅಜರ್ ಸಾವು?ಜೈಷ್-ಎ-ಮೊಹಮ್ಮದ್ ಮುಖ್ಯಸ್ಥ ಮೌಲನಾ ಅಜರ್ ಸಾವು?

ಭಾರತ ಎಚ್ಚರಿಕೆಯಿಂದಿರಬೇಕು!

ಪುಲ್ವಾಮಾ ಉಗ್ರದಾಳಿ ಮತ್ತು ನಂತರದ ಘಟನಾವಳಿಗಳನ್ನು ಮುಚ್ಚಿಹಾಕುವ ಸಲುವಾಗಿ ಸುಳ್ಳು ಸುದ್ದಿ ಹಬ್ಬಿಸಿ, ಪಾಕಿಸ್ತಾನ ಬೇಕೆಂದೇ ಮಾಡುತ್ತಿರುವ ಕುತಂತ್ರ ಇದಾಗಿರಬಹುದು. ಯಾವುದಕ್ಕೂ ಭಾರತ ಎಚ್ಚರಿಕೆಯಿಂದಿರಬೇಕು ಎಂದಿದ್ದಾರೆ ಮನಕ್ ಗುಪ್ತಾ.

ಬಾಲಕೋಟ್ ನಲ್ಲೇ ಅಝರ್ ಸತ್ತಿದ್ದಾನೆ!

ಬಹುಶಃ ಬಾಲಕೋಟ್ ಉಗ್ರ ನೆಲೆ ಮೇಲೆ ಭಾರತ ನಡೆಸಿದ ಏರ್ ಸ್ಟ್ರೈಕ್ ಸಂದರ್ಭದಲ್ಲಿ ಅಲ್ಲಿಯೇ ಇದ್ದ ಅಝರ್ ಸತ್ತಿದ್ದಾನೆ. ಆದರೆ ಅದನ್ನು ಒಪ್ಪಿಕೊಳ್ಳಲು ಸಿದ್ಧವಿಲ್ಲದ ಪಾಕಿಸ್ತಾನ ಆತನಿಗೆ ಹುಷಾರಿಲ್ಲ ಎಂಬ ಸುದ್ದಿ ಹಬ್ಬಿಸಿದೆ. ಕೆಲವು ದಿನಗಳ ನಂತರ ಅತನದು ಸಹಜ ಸಾವು ಎಂದು ಅದು ಸುದ್ದಿ ಮಾಡುತ್ತದೆ ಎಂದಿದ್ದಾರೆ ಅಮಿತ್ ನಿಝವಾನ್.

English summary
After Pakistan media reported Maulana Masood Azhar is dead, Jaish e Mohammad terror group released a statement saying that it's chief alive and doing fine.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X