ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಾಕಿಸ್ತಾನದ ಬಾಂಬ್ ಪ್ರೂಫ್ ಮನೆಯಲ್ಲಿದ್ದಾನೆ ಜಾಗತಿಕ ಉಗ್ರ ಮಸೂದ್

|
Google Oneindia Kannada News

Recommended Video

ಭಾರತ ತಂಡದಲ್ಲಿ ಅದೊಂದನ್ನು ಬಿಟ್ಟು ಮಿಕ್ಕ ಎಲ್ಲವೂ ಇದೆ..? | Oneindia Kannada

ಇಸ್ಲಾಮಾಬಾದ್, ಫೆಬ್ರವರಿ 18: ಪಾಕಿಸ್ತಾನದಿಂದ ನಾಪತ್ತೆಯಾಗಿದ್ದಾನೆ ಎನ್ನಲಾದ ಜಾಗತಿಕ ಉಗ್ರ ಮಸೂದ್ ಅಜರ್ ಪಾಕಿಸ್ತಾನದ ಬಹವಾಲ್‌ಪುರದ ಬಾಂಬ್ ಪ್ರೂಫ್ ಮನೆಯಲ್ಲಿದ್ದಾನೆ ಎನ್ನುವ ಮಾಹಿತಿಯನ್ನು ಗುಪ್ತಚರ ಇಲಾಖೆ ನೀಡಿದೆ.

ಜೈಷ್ ಸಂಘಟನೆಯ ಕೇಂದ್ರದಲ್ಲೇ ಆತ ಮತ್ತು ಕುಟುಂಬ ಇದೆ. 2019ರ ಫೆಬ್ರವರಿ 14ರಂದು ನಡೆದ ಪುಲ್ವಾಮಾ ದಾಳಿ ಬಳಿಕ ಭಾರತವು ಮಸೂದ್‌ನನ್ನು ಹುಡುಕುತ್ತಿತ್ತು. ಆತ ಪಾಕಿಸ್ತಾನ ಆತನನ್ನು ಬಂಧಿಸಿ ನಾಟಕವಾಡಿತ್ತು.

ಪಾಕಿಸ್ತಾನದಲ್ಲಿ ಜಾಗತಿಕ ಉಗ್ರ ಮಸೂದ್ ಅಜರ್ ನಾಪತ್ತೆ ಪ್ರಹಸನ ಪಾಕಿಸ್ತಾನದಲ್ಲಿ ಜಾಗತಿಕ ಉಗ್ರ ಮಸೂದ್ ಅಜರ್ ನಾಪತ್ತೆ ಪ್ರಹಸನ

ಬಳಿಕ ಆತ ಪಾಕ್ ಸೇನೆಯಿಂದ ತಪ್ಪಿಸಿಕೊಂಡು ಹೋಗಿದ್ದಾನೆ ಎನ್ನುವ ಸುದ್ದಿ ನೀಡಿತ್ತು. ಅದಕ್ಕೆ ಭಾರತವು ಮಸೂದ್ ಅಜರ್ ಎಲ್ಲಿದ್ದಾನೆ ಎಂದು ನಾವು ಹೇಳುತ್ತೇವೆ ಆತನನ್ನು ಭಾರತಕ್ಕೆ ಒಪ್ಪಿಸುತ್ತೀರೋ ಎಂದು ಕೇಳಿತ್ತು.

ಮಸೂದ್ ಅಜರ್ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್

ಮಸೂದ್ ಅಜರ್ ಪುಲ್ವಾಮಾ ದಾಳಿಯ ಮಾಸ್ಟರ್ ಮೈಂಡ್

2019ರ ಫೆಬ್ರವರಿ 14 ರಂದು ಪುಲ್ವಾಮಾದಲ್ಲಿ ನಡೆದ ಆತ್ಮಾಹುತಿ ಬಾಂಬ್ ಸ್ಫೋಟದ ಪ್ರಮುಖ ರೂವಾರಿ ಮಸೂದ್ ಅಜರ್ ಆಗಿದ್ದಾನೆ. ಅಂದು 40 ಮಂದಿ ಯೋಧರು ಪ್ರಾಣ ಕಳೆದುಕೊಂಡಿದ್ದರು. ಪಾಕಿಸ್ತಾನದಲ್ಲಿ ಕುಳಿತುಕೊಂಡು ದಾಳಿ ನಡೆಸಿರುವ ಬಗ್ಗೆ ಭಾರತೀಯ ಗುಪ್ತಚರ ಸಂಸ್ಥೆಗಳು ಮಾಹಿತಿ ನೀಡಿದ್ದವು. ಈ ಕುರಿತ ತನಿಖಾ ವರದಿಯನ್ನು ಕೂಡ ಪಾಕಿಸ್ತಾನ ಹಾಗೂ ವಿಶ್ವಸಂಸ್ಥೆಗೆ ಭಾರತ ಹಸ್ತಾಂತರಿಸಿತ್ತು.

ಮಸೂದ್ ಇರುವ ಜಾಗ ಪತ್ತೆ ಹಚ್ಚಿದ ಗುಪ್ತಚರ ಇಲಾಖೆ

ಮಸೂದ್ ಇರುವ ಜಾಗ ಪತ್ತೆ ಹಚ್ಚಿದ ಗುಪ್ತಚರ ಇಲಾಖೆ

ಭಾರತ ಈ ಮೊದಲೇ ಹೇಳಿದಂತೆ, ಮಸೂದ್ ಪಾಕಿಸ್ತಾನದಲ್ಲಿಯೇ ಇದ್ದಾನೆ, ಆತನನ್ನು ಹುಡಿಕೊಟ್ಟರೆ ಭಾರತದ ವಶಕ್ಕೆ ಆತನನ್ನು ನೀಡುತ್ತೀರೋ ಎಂದು ಪ್ರಶ್ನಿಸಿದ್ದರು. ಹಾಗೆಯೇ ಆತ ಇರುವ ಜಾಗವನ್ನು ಗುಪ್ತಚರ ಇಲಾಖೆ ಪತ್ತೆ ಮಾಡಿದೆ. ಆತ ಬಾಂಬ್ ಪ್ರೂಫ್ ಮನೆಯಲ್ಲಿದ್ದಾನೆ ಎನ್ನುವ ಮಾಹಿತಿ ನೀಡಿದೆ. ಅಲ್ಲೇ ಸಮೀಪ ಜೈಷ್ ಸಂಘಟನೆಯ ಕೇಂದ್ರವೂ ಕೂಡ ಇದೆ.

ಪ್ಯಾರಿಸ್‌ನಲ್ಲಿ ನಿರ್ಣಾಯಕ ಸಭೆ

ಪ್ಯಾರಿಸ್‌ನಲ್ಲಿ ನಿರ್ಣಾಯಕ ಸಭೆ

ಈ ಸಭೆಯಲ್ಲಿ ಪಾಕಿಸ್ತಾನವನ್ನು ಕಪ್ಪುಪಟ್ಟಿಗೆ ಸೇರಿಸುವುದು ಅಥವಾ ಕಂದು ಬಣ್ಣದ ಪಟ್ಟಿಯಲ್ಲೇ ಮುಂದುವರೆಸುವ ಬಗ್ಗೆ ತೀರ್ಮಾನವಾಗಲಿದೆ. ಮಸೂದ್ ಅಜರ್ ನಾಪತ್ತೆಯನ್ನು ಮುಂದಿಟ್ಟುಕೊಂಡು ಭಾರತವು ಪಾಕಿಸ್ತಾನದ ವಿರುದ್ಧ ವಾದ ಮಂಡಿಸಲು ಮುಂದಾಗಿದೆ.

ಅಜರ್ ಹುಡುಕಾಟ ನಡೆಯುತ್ತಿದೆ ಎಂದು ಸೇನೆ ಹೇಳಿಕೊಂಡಿದ್ದರೂ ಇದು ಪಾಕಿಸ್ತಾನದ ನಾಟಕ ಎಂದು ಖಚಿತವಾಗಿದೆ. ಮುಂದಿನ ವಾರ ಪ್ಯಾರಿಸ್‌ನಲ್ಲಿ ಎಫ್‌ಟಿಎಫ್ ನಿರ್ಣಾಯಕ ಸಭೆ ನಡೆಯುತ್ತಿರುವ ಬೆನ್ನಲ್ಲೇ ಈ ಬೆಳವಣಿಗೆಗಳೂ ನಡೆದಿದೆ.

ಪಾಕಿಸ್ತಾನಕ್ಕೆ ಇದು ಹಿನ್ನಡೆಯೇ?

ಪಾಕಿಸ್ತಾನಕ್ಕೆ ಇದು ಹಿನ್ನಡೆಯೇ?

ಪುಲ್ವಾಮಾ ದಾಳಿ ಸೇರಿ ಭಾರತದಲ್ಲಿನ ಸಾಕಷ್ಟು ವಿಧ್ವಂಸಕ ಚಟುವಟಿಕೆಗಳ ಮಾಸ್ಟರ್ ಮೈಂಡ್ ಆಗಿರುವ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಿಸಿದೆ. ಆ ಬಳಿಕ ಮಸೂದ್ ಅಜರ್ ಪಾಕಿಸ್ತಾನ ಸೇನೆಯ ವಶದಲ್ಲಿದ್ದ. ಆದರೆ ಕೆಲ ದಿನಗಳಿಂದ ಮಸೂದ್ ಅಜರ್ ಹಾಗೂ ಆತನ ಕುಟುಂಬದ ಸದಸ್ಯರು ಸೇನೆಯ ಹಿಡಿತದಿಂದ ತಪ್ಪಿಸಿಕೊಂಡಿದ್ದಾರೆ.

English summary
chief of terror group Jaish-e-Mohammed (JeM), Maulana Masood Azhar, is living inside a bomb-proof house behind Jaish's Bahawalpur headquarters in Pakistan.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X