ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಸ್ಕ್‌, ಸಾಮಾಜಿಕ ಅಂತರವಿಲ್ಲದೆ ವುಹಾನ್‌ ನಗರದಲ್ಲಿ ನಡೆಯಿತು ಗ್ರಾಜುಯೇಷನ್ ಡೇ

|
Google Oneindia Kannada News

ಬೀಜಿಂಗ್, ಜೂನ್ 15: ವಿಶ್ವದಲ್ಲೇ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿದ್ದ ಚೀನಾದ ವುಹಾನ್ ನಗರದಲ್ಲಿ ಈ ಬಾರಿ ಮಾಸ್ಕ್ ಇಲ್ಲದೆ, ಸಾಮಾಜಿಕ ಅಂತರವಿಲ್ಲದೆ ಗ್ರಾಜುಯೇಷನ್‌ ಡೇ ನಡೆದಿದೆ.

ಕೋವಿಡ್ ಸೋಂಕಿನ ನಿರ್ಬಂಧಗಳ ನಡುವೆ ಕಳೆದ ವರ್ಷದ ಗ್ರಾಜುಯೇಷನ್ ಡೇನಲ್ಲಿ ಭಾಗವಹಿಸಲು ಸಾಧ್ಯವಾಗದ 2200 ವಿದ್ಯಾರ್ಥಿಗಳಿಗೆ, ಭಾನುವಾರದಂದು ನಡೆದ ಈ ಕಾರ್ಯಕ್ರಮದಲ್ಲಿ ಪದವಿ ಪ್ರಧಾನ ಮಾಡಲಾಯಿತು.

 ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಸೋರಿಕೆ: ಬ್ರಿಟನ್ ಚೀನಾದ ಪ್ರಯೋಗಾಲಯದಿಂದಲೇ ಕೊರೊನಾ ವೈರಸ್ ಸೋರಿಕೆ: ಬ್ರಿಟನ್

ಕಾರ್ಯಕ್ರಮದಲ್ಲಿ ಸುಮಾರು 11000ಕ್ಕೂ ಅಧಿಕ ವಿದ್ಯಾರ್ಥಿಗಳ ಸ್ವಾಗತಕ್ಕಾಗಿ ಸಿದ್ಧತೆ ಮಾಡಲಾಗಿತ್ತು. ಕಾರ್ಯಕ್ರಮ 2020ರ ಪಧವೀಧರರಿಗೆ ಸ್ವಾಗತ ಬಯಸುತ್ತೇವೆ , ನಿಮ್ಮೆಲ್ಲರಿಗೂ ಉತ್ತಮ ಭವಿಷ್ಯ ದೊರೆಯಲಿ ಎಂದು ಸ್ವಾಗತ ಫಲಕ ಹಾಕಲಾಗಿತ್ತು.

Masks Off, Gowns On: Wuhan Sheds Covid For Mass Graduation

2019ರ ಅಂತ್ಯದಲ್ಲಿ ವುಹಾನ್‌ ನಗರದಲ್ಲಿ ಮೊದಲ ಬಾರಿಗೆ ಕೊರೊನಾ ಸೋಂಕು ಕಾಣಿಸಿಕೊಂಡಿತ್ತು. ನಂತರ ಬೀಜಿಂಗ್ ಸೇರಿದಂತೆ ವಿವಿಧ ನಗರಗಳಲ್ಲಿ ಕಟ್ಟುನಿಟ್ಟಿನ ಲಾಕ್‌ಡೌನ್ ಜಾರಿಮಾಡಲಾಗಿತ್ತು.

76 ದಿನಗಳ ಬಳಿಕ ಲಾಕ್‌ಡೌನ್ ತೆರವಾದ ನಂತರ, ಏಪ್ರಿಲ್‌ನಲ್ಲಿ ಮತ್ತೆ ಚಟುವಟಿಕೆ ಆರಂಭವಾಯಿತು. ಆದರೆ ಶಾಲಾ-ಕಾಲೇಜುಗಳಿಗೆ ಮಾತ್ರ ಲಾಕ್‌ಡೌನ್‌ನಿಂದ ವಿನಾಯಿತಿ ನೀಡಿರಲಿಲ್ಲ. ಈ ನಡುವೆ ಕಳೆದ ವರ್ಷ ಜೂನ್ ತಿಂಗಳಲ್ಲಿ ವುಹಾನ್ ವಿಶ್ವ ವಿದ್ಯಾಲಯದವರು ಆನ್‌ಲೈನ್‌ ಮೂಲಕ ಕೆಲವೊಂದು ನಿರ್ಭಂಧಗಳೊಂದಿಗೆ ಗ್ರಾಜುಯೇಷನ್ ಡೇ ಕಾರ್ಯಕ್ರಮಗಳನ್ನು ನಡೆಸಿದರು.

ಈ ಆಚರಣೆಗಳ ನಡುವೆ ಚೀನಾದಲ್ಲಿ ಮಂಗಳವಾರ 20 ಹೊಸ ಸೋಂಕಿತ ಪ್ರಕರಣಗಳು ದಾಖಲಾಗಿವೆ. ಇದರಲ್ಲಿ 18 ಪ್ರಕರಣಗಳು ವಿದೇಶದಿಂದ ಬಂದ ಪ್ರಯಾಣಿಕರಲ್ಲಿ ಪತ್ತೆಯಾಗಿದೆ.

ಕಳೆದ ವರ್ಷ ವುಹಾನ್‌ ವಿಶ್ವವಿದ್ಯಾಲಯದವರು ಆನ್‌ಲೈನ್ ಮೂಲಕ ಕೆಲವೊಂದು ನಿರ್ಬಂಧಗಳೊಂದಿಗೆ ಗ್ರಾಜುಯೇಷನ್ ಡೇ ನಡೆಸಿದ್ದರು.

ನೀಲಿ ಬಣ್ಣದ ನಿಲುವಂಗಿ ಗೌನ್ ಮತ್ತು ತಲೆಗೆ ವಿಶಿಷ್ಟ ಟೋಪಿ ತೊಟ್ಟ ವಿದ್ಯಾರ್ಥಿಗಳು ಯಾವುದೇ ವ್ಯಕ್ತಿಗಳ ಅಂತರ ಕಾಯ್ದುಕೊಳ್ಳದೆ ಸಾಮಾನ್ಯವಾಗಿದ್ದರು.

English summary
A huge red banner welcomed more than 11,000 students in Wuhan for a massive graduation ceremony over a year after the city was battered by the first global outbreak of Covid-19.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X