ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ನಿಮ್ಮ ಅತ್ಯಾಚಾರಿಯನ್ನು ಮದುವೆಯಾಗಿ': ಕೋಲಾಹಲ ಸೃಷ್ಟಿಸಿದ ಮಸೂದೆ

|
Google Oneindia Kannada News

ಅಂಕಾರಾ, ಜನವರಿ 24: ಟರ್ಕಿ ಸಂಸತ್‌ನಲ್ಲಿ ಮಂಡಿಸಲು ಸಿದ್ಧತೆ ನಡೆಸಲಾಗಿರುವ ವಿವಾದಾತ್ಮಕ ಮಸೂದೆಯೊಂದು ಅಂತಾರಾಷ್ಟ್ರೀಯ ಮಟ್ಟದಲ್ಲಿ ಚರ್ಚೆಗೆ ಒಳಗಾಗಿದೆ. ಪುರುಷರ ದಬ್ಬಾಳಿಕೆ, ಮಹಿಳೆಯರ ಮೇಲಿನ ದೌರ್ಜನ್ಯ, ಅತ್ಯಾಚಾರ ಪ್ರಕರಣಗಳು ಹೆಚ್ಚುತ್ತಾಗುತ್ತಿರುವ ಇಂದಿನ ಕಳವಳಕಾರಿ ಸನ್ನಿವೇಶದಲ್ಲಿ ಟರ್ಕಿಯ ಮಸೂದೆ ಮತ್ತಷ್ಟು ಆತಂಕ ಹುಟ್ಟಿಸಿದೆ.

18 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಾಲಕಿಯರೊಂದಿಗೆ ಲೈಂಗಿಕ ಸಂಪರ್ಕ ಹೊಂದಿದ ಅಥವಾ ಅವರ ಮೇಲೆ ಅತ್ಯಾಚಾರ ಎಸಗಿದ ಪುರುಷರು ಅವರನ್ನು ಮದುವೆಯಾದರೆ ಶಿಕ್ಷೆಯಿಂದ ಪಾರಾಗಬಹುದು ಎಂಬ ಕಾನೂನು ಇದಾಗಿದೆ.

'ಮ್ಯಾರಿ ಯುವರ್ ರೇಪಿಸ್ಟ್' (ನಿಮ್ಮ ಅತ್ಯಾಚಾರಿಯನ್ನು ಮದುವೆಯಾಗಿ) ಎಂಬ ವಿವಾದಾತ್ಮಕ ಮಸೂದೆಯನ್ನು ಟರ್ಕಿಯ ಸಂಸತ್‌ನಲ್ಲಿ ಜನವರಿ ಅಂತ್ಯದಲ್ಲಿ ಚರ್ಚೆಗೆ ಮಂಡಿಸಲು ಸಿದ್ಧತೆ ನಡೆಸಲಾಗಿದೆ.

ಕತ್ತಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಓಲಾ ಚಾಲಕ..!ಕತ್ತಲೆಯಲ್ಲಿ ಮಹಿಳೆಯನ್ನು ಬೆತ್ತಲೆ ಮಾಡಿದ ಓಲಾ ಚಾಲಕ..!

ಈ ಮಸೂದೆಯು ಅತ್ಯಾಚಾರ, ಬಾಲ್ಯವಿವಾಹವನ್ನು ಕಾನೂನುಬದ್ಧಗೊಳಿಸುವ ಮೂಲಕ ಮಕ್ಕಳ ಮೇಲಿನ ದೌರ್ಜನ್ಯ ಹಾಗೂ ಲೈಂಗಿಕ ಕಿರುಕುಳ ಪ್ರಕರಣಗಳಿಗೆ ಉತ್ತೇಜನ ನೀಡುವಂತೆ ಇದೆ ಎಂಬ ಟೀಕೆ ವ್ಯಕ್ತವಾಗಿದೆ.

ಅತ್ಯಾಚಾರಕ್ಕೆ ಮತ್ತಷ್ಟು ಪ್ರಚೋದನೆ

ಅತ್ಯಾಚಾರಕ್ಕೆ ಮತ್ತಷ್ಟು ಪ್ರಚೋದನೆ

ಈ ಮಸೂದೆ ಅಂಗೀಕಾರವಾಗಿ ಕಾಯ್ದೆಯಾದರೆ ಅತ್ಯಾಚಾರಿಗಳಿಗೆ ಮತ್ತಷ್ಟು ಬಲ ಬಂದಂತೆ ಆಗುತ್ತದೆ. ಇದರಿಂದ ಅವರು ಶಿಕ್ಷೆ ಮತ್ತು ಪರಿಣಾಮಗಳ ಭಯವಿಲ್ಲದ ಕಾರಣ ಮತ್ತಷ್ಟು ಅಪರಾಧ ಕೃತ್ಯಗಳಲ್ಲಿ ಭಾಗಿಯಾಗಲು ಉತ್ತೇಜನ ಸಿಗಲಿದೆ ಎಂಬ ಆತಂಕ ವ್ಯಕ್ತವಾಗಿದೆ.

ದೇಶದಾದ್ಯಂತ ವಿರೋಧ

ದೇಶದಾದ್ಯಂತ ವಿರೋಧ

ಈ ಮಸೂದೆಗೆ ಟರ್ಕಿಯ ಪೀಪಲ್ಸ್ ಡೆಮಾಕ್ರಟಿಕ್ ಪಾರ್ಟಿ (ಎಚ್‌ಡಿಪಿ) ಸೇರಿದಂತೆ ವಿವಿಧ ವಿರೋಧಪಕ್ಷಗಳ ಸಂಸದರಿಂದ ವಿರೋಧ ವ್ಯಕ್ತವಾಗಿದೆ. ಈ ಮಸೂದೆಯನ್ನು ಸಂಸತ್‌ನಲ್ಲಿ ಚರ್ಚೆಗೆ ಕೂಡ ತರುವುದು ಬೇಡ ಎಂದು ಸರ್ಕಾರವನ್ನು ಒತ್ತಾಯಿಸಿದ್ದಾರೆ. ಮಹಿಳಾ ಮತ್ತು ಮಕ್ಕಳ ಹಕ್ಕುಗಳ ಪ್ರತಿಪಾದಕರು ಈ ಮಸೂದೆ ವಿರುದ್ಧ ಆಂದೋಲನ ಆರಂಭಿಸಿದ್ದಾರೆ.

ಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 40 ವರ್ಷ ಜೈಲುಅಪ್ರಾಪ್ತೆ ಮೇಲೆ ಅತ್ಯಾಚಾರವೆಸಗಿದ್ದ ಆರೋಪಿಗೆ 40 ವರ್ಷ ಜೈಲು

2016ರಲ್ಲಿಯೂ ಇದೇ ರೀತಿಯ ಮಸೂದೆ

2016ರಲ್ಲಿಯೂ ಇದೇ ರೀತಿಯ ಮಸೂದೆ

ಇದೇ ರೀತಿಯ ಮಸೂದೆಯನ್ನು 2016ರಲ್ಲಿ ಕೂಡ ಟರ್ಕಿ ಸಂಸತ್‌ನಲ್ಲಿ ಮಂಡಿಸಲಾಗಿತ್ತು. 'ಬಲವಂತ, ಬೆದರಿಕೆ ಅಥವಾ ಒಪ್ಪಿಗೆಯ ಮೇಲೆ ಯಾವುದೇ ನಿರ್ಬಂಧಗಳಿಲ್ಲದಂತಹ ಅತ್ಯಾಚಾರ ಪ್ರಕರಣಗಳಲ್ಲಿ ಕೂಡ ಅತ್ಯಾಚಾರಿ ಸಂತ್ರಸ್ತೆಯನ್ನು ಮದುವೆಯಾದರೆ ಆತ ಶಿಕ್ಷೆಯಿಂದ ತಪ್ಪಿಸಿಕೊಳ್ಳಬಹುದು ಎಂದು ಮಸೂದೆ ಹೇಳಿತ್ತು. ಇದಕ್ಕೆ ಕೂಡ ಜಾಗತಿಕ ಮಟ್ಟದಲ್ಲಿ ಭಾರಿ ವಿರೋಧ ವ್ಯಕ್ತವಾಗಿದ್ದರಿಂದ ಎಕೆಪಿ ಸರ್ಕಾರ ಮಸೂದೆಯನ್ನು ಕೈಬಿಟ್ಟಿತ್ತು.

ನಾಲ್ಕು ಲಕ್ಷ ಬಾಲ್ಯ ವಿವಾಹ

ನಾಲ್ಕು ಲಕ್ಷ ಬಾಲ್ಯ ವಿವಾಹ

ಬಾಲ್ಯ ವಿವಾಹ ಅಧಿಕ ಪ್ರಮಾಣದಲ್ಲಿರುವ ಟರ್ಕಿಯಲ್ಲಿ ಅದನ್ನು ತಡೆಯುವ ಸಲುವಾಗಿ ವೈವಾಹಿಕ ಕಾನೂನನ್ನು ಪರಿಚಯಿಸುವ ಚರ್ಚೆಗಳು ನಡೆಯುತ್ತಿವೆ. ಟರ್ಕಿಯಲ್ಲಿ ಮದುವೆಯಾಗಲು ಕನಿಷ್ಠ 18 ವರ್ಷವಾಗಬೇಕೆಂಬ ಕಾನೂನು ಇದ್ದರೂ ಕಳೆದ ಹತ್ತು ವರ್ಷಗಳಲ್ಲಿ ಅಂದಾಜು 4,82,908 ಬಾಲ್ಯ ವಿವಾಹಗಳು ನಡೆದಿವೆ ಎಂದು ಸರ್ಕಾರಿ ದಾಖಲೆಗಳು ಹೇಳುತ್ತವೆ.

ಜಾರಿಯಾಗಿದ್ದ ಕಾನೂನು

ಜಾರಿಯಾಗಿದ್ದ ಕಾನೂನು

2017ರಲ್ಲಿ ವ್ಯಾಪಕ ವಿರೋಧದ ನಡುವೆಯೂ ಮಸೂದೆಯೊಂದನ್ನು ಅಂಗೀಕರಿಸಿ ಕಾನೂನು ಜಾರಿ ಮಾಡಲಾಗಿತ್ತು. ಇದು ಇಸ್ಲಾಮಿಕ್ ಮುಖಂಡರು ಮತ್ತು ವಿದ್ವಾಂಸರು ನಾಗರಿಕ ವಿವಾಹ ಮಹೋತ್ಸವಗಳನ್ನು ನಡೆಸಲು ಅವಕಾಶ ನೀಡಿತ್ತು. ಈ ಕಾನೂನು ದೇಶದ ಜಾತ್ಯತೀಯ ಸಂವಿಧಾನವನ್ನು ಕಡೆಗಣಿಸುತ್ತದೆ ಮತ್ತು ಇನ್ನಷ್ಟು ಬಾಲ್ಯವಿವಾಹಗಳಿಗೆ ಅವಕಾಶ ನೀಡಲಿದೆ ಎಂಬ ಆರೋಪ ಕೇಳಿಬಂದಿತ್ತು.

English summary
A controversial bill 'Marry Your Rapist' is is set to be introduced in the parliament of Turkey has created outrage.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X