ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅನಿವಾಸಿ ಭಾರತೀಯ ಜೋಡಿಗಳಿಗೆ ಮದುವೆ ನೋಂದಣಿ ಕಡ್ಡಾಯ

By Nayana
|
Google Oneindia Kannada News

ಬೆಂಗಳೂರು, ಜೂನ್ 15: ಮಹಿಳೆಯರ ಹಿತದೃಷ್ಟಿಯಿಂದಾಗಿ ಇನ್ನುಮುಂದೆ ಅನಿವಾಸಿ ಭಾರತೀಯ ಜೋಡಿಗಳಿಗೆ ಮದುವೆ ನೋಂದಣಿ ಕಡ್ಡಾಯವಾಗಲಿದೆ. ಅದರಲ್ಲಿಯೂ ಮದುವೆಯಾಗಿ ಒಂದು ವಾರದೊಳಗೆ ನೋಂದಣಿ ಮಾಡಿಕೊಳ್ಳದಿದ್ದಲ್ಲಿ ಅವರ ಪಾಸ್‌ಪೋರ್ಟ್ ಮತ್ತು ವೀಸಾವನ್ನು ನೀಡಲಾಗುವುದಿಲ್ಲ ಎಂದು ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವಾಲಯ ಹೇಳಿದೆ.

ಕಳೆದ ವಾರವಷ್ಟೇ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಸಚಿವೆ ಮೇನಕಾ ಗಾಂಧಿ ಅವರು ಇನ್ನು ಮುಂದೆ ಎನ್‌ಆರ್‌ಐ ಜೋಡಿಗಳು ಮದುವೆಯಾದ 48 ಗಂಟೆಯೊಳಗೆ ಅದನ್ನು ನೋಂದಣಿ ಮಾಡಿಸಿಕೊಳ್ಳುವುದು ಕಡ್ಡಾಯ ಎಂಬ ಹೇಳಿಕೆ ನೀಡಿದ್ದರು.

ಮದುವೆ ವಿಳಂಬ ದೋಷ ಪರಿಹಾರದ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ವಿಚಾರಗಳುಮದುವೆ ವಿಳಂಬ ದೋಷ ಪರಿಹಾರದ ಬಗ್ಗೆ ನಿಮಗೆ ಗೊತ್ತಿರಲೇ ಬೇಕಾದ ವಿಚಾರಗಳು

ಆದರೆ ಇಂತಹ ಮದುವೆಗಳಲ್ಲಿ ಮಹಿಳೆ ಅನುಭವಿಸುವ ಅನೇಕ ಸಮಸ್ಯೆಗಳ ಕುರಿತು ಬುಧವಾರ ಮೇನಕಾ ಗಾಂಧಿ, ಗೃಹ ಸಚಿವ ರಾಜನಾಥ್‌ ಸಿಂಗ್, ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ಕಾನೂನು ಸಚಿವ ರವಿಶಂಕರ್ ಪ್ರಸಾದ್ ನೇತೃತ್ವದಲ್ಲಿ ನಡೆದ ಉನ್ನತ ಸಭೆಯು ನೋಂದಣಿ ಪ್ರಕ್ರಿಯೆಗೆ ಒಂದು ವಾರದ ಕಾಲಾವಕಾಶ ನೀಡುವ ನಿರ್ಧಾರ ತೆಗೆದುಕೊಂಡಿದೆ.

Marriage registration mandatory for NRIs

ಅನಿವಾಸಿ ಭಾರತೀಯರ ಮದ್ವೆ ನೋಂದಣಿಗೆ ಗಡುವು!ಅನಿವಾಸಿ ಭಾರತೀಯರ ಮದ್ವೆ ನೋಂದಣಿಗೆ ಗಡುವು!

ಇದುವರೆಗೂ ಭಾರತದಲ್ಲಿ ನಡೆಯುವ ಎನ್‌ಆರ್‌ಐ ಮದುವೆಗಳ ನೋಂದಣಿಗೆ ಯಾವುದೇ ಸಮಯಮಿತಿ ಇರಲಿಲ್ಲ. ಕೆಲವು ದಿನಗಳ ಹಿಂದಷ್ಟೇ ಕಾನೂನು ಆಯೋಗವು, ಎನ್‌ಆರ್‌ಐ ಮದುವೆಗಳು 30 ದಿನದೊಳಗೆ ನೋಂದಣಿಯಾಬೇಕು. ಈ ಗಡುವು ದಾಟಿದಲ್ಲಿ ದಿನಕ್ಕೆ 5ರೂ. ದಂಡ ವಿಧಿಸಬೇಕೆಂದು ವರದಿಯಲ್ಲಿ ಶಿಫಾರಸ್ಸು ಮಾಡಲಾಗಿದೆ.

English summary
Union ministry of family welfare has made mandatory for NRIs to register their marriage within a week to ensure their visa and passport confirmation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X