ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಟಲಿಯ ನೂತನ ಪ್ರಧಾನಿಯಾಗಿ ಮಾರಿಯೊ ಡ್ರಘಿ ಪ್ರಮಾಣವಚನ

|
Google Oneindia Kannada News

ರೋಮ್, ಫೆಬ್ರವರಿ 13: ಯುರೋಪಿಯನ್ ಸೆಂಟ್ರಲ್ ಬ್ಯಾಂಕ್‌ನ ಮಾಜಿ ಮುಖ್ಯಸ್ಥ ಮಾರಿಯೊ ಡ್ರಘಿ ಅವರು ಇಟಲಿಯ ನೂತನ ಪ್ರಧಾನಿಯಾಗಿ ಶನಿವಾರ ಅಧಿಕಾರ ಸ್ವೀಕರಿಸಿದರು. ಇಟಲಿಯನ್ನು ತೀವ್ರವಾಗಿ ಕಾಡುತ್ತಿರುವ ಮಾರಕ ಕೊರೊನಾ ವೈರಸ್ ಸಾಂಕ್ರಾಮಿಕ ಮತ್ತು ಆರ್ಥಿಕ ಹಿಂಜರಿತದ ನಡುವೆ ಡ್ರಘಿ ಅವರಿಗೆ ದೇಶ ನಡೆಸುವ ಸವಾಲು ಎದುರಾಗಿದೆ.

ಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆಕೊರೊನಾ ನಿಯಂತ್ರಣದಲ್ಲಿ ವಿಫಲ: ಇಟಲಿ ಪ್ರಧಾನಿ ಗಿಸೆಪ್ಪೆ ಕಾಂಟೆ ರಾಜೀನಾಮೆ

'ಸೂಪರ್ ಮಾರಿಯೊ' ಎಂದೇ ಹೆಸರಾದ 73 ವರ್ಷದ ಮಾರಿಯೊ ಡ್ರಘಿ ಅವರು ಪ್ರಧಾನಿ ಗಿಸೆಪ್ಪೆ ಕಾಂಟೆ ಅವರ ರಾಜೀನಾಮೆಯಿಂದ ತೆರವಾದ ಸ್ಥಾನವನ್ನು ತುಂಬುತ್ತಿದ್ದಾರೆ. ಇಟಲಿಯಲ್ಲಿ ಕೊರೊನಾ ವೈರಸ್ ಸೋಂಕು ಇದುವರೆಗೂ 93,000 ಕ್ಕೂ ಅಧಿಕ ಜನರನ್ನು ಬಲಿತೆಗೆದುಕೊಂಡಿದೆ. ಕೊರೊನಾ ನಿಯಂತ್ರಿಸುವಲ್ಲಿ ವಿಫಲರಾದ ಕಾರಣ ವ್ಯಾಪಕ ಟೀಕೆಗೆ ಒಳಗಾಗಿದ್ದ ಕಾಂಟೆ ಅವರು ಕಳೆದ ತಿಂಗಳು ರಾಜೀನಾಮೆ ನೀಡಿದ್ದರು.

Mario Draghi Sworn In As New Prime Minister Of Italy Amid Coronavirus Challenges

ಅಧ್ಯಕ್ಷರ ಕಚೇರಿಯಲ್ಲಿ ಶನಿವಾರ ನಡೆದ ಸಮಾರಂಭದಲ್ಲಿ ಅಧ್ಯಕ್ಷ ಸರ್ಜಿಯೊ ಮಟರೆಲ್ಲ ಸಮ್ಮುಖದಲ್ಲಿ ಪ್ರಮಾಣವಚನ ಸ್ವೀಕರಿಸಿದ ಡ್ರಘಿ, 'ಗಣರಾಜ್ಯಕ್ಕೆ ನಿಷ್ಠನಾಗಿರುತ್ತೇನೆ ಎಂದು ಮಾತು ನೀಡುತ್ತೇನೆ' ಎಂದರು.

ಡ್ರಘಿ ಅವರ ಹೊಸ ಸಂಪುಟದ ಹಿರಿಯ ಅಧಿಕಾರಿಗಳು, ರಾಜಕಾರಣಿಗಳು, ಹಿಂದಿನ ಸರ್ಕಾರದಲ್ಲಿದ್ದ ಸಚಿವರು ಕೂಡ ಪ್ರಮಾಣವಚನ ಸ್ವೀಕರಿಸಿದರು. ಕಾಂಟೆ ರಾಜೀನಾಮೆ ಬಳಿಕ ಸುಮಾರು 10 ದಿನಗಳ ಕಾಲ ಸಮ್ಮಿಶ್ರ ಸರ್ಕಾರ ರಚನೆಗೆ ಅಗತ್ಯವಾದ ಚಟುವಟಿಕೆಗಳಲ್ಲಿ ತೊಡಗಿದ್ದ ಡ್ರಘಿ, ಮಟರೆಲ್ಲ ಅವರೊಂದಿಗೆ ನಡೆಸಿದ ಸಭೆಯ ನಂತರ ಶುಕ್ರವಾರ ಪ್ರಧಾನಿ ಸ್ಥಾನವನ್ನು ಒಪ್ಪಿಕೊಂಡರು.

English summary
Mario Draghi on Saturday sworn in as new prime minister of Italy after Giuseppe Conte resigned last month.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X