ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನಿಸ್ತಾನದಲ್ಲಿ ಮಹಿಳೆಯರ 'ಹಾರಾಟ'ಕ್ಕೆ ಇವತ್ತೇ ಕೊನೆ ದಿನ!

|
Google Oneindia Kannada News

ಕಾಬೂಲ್, ಮಾರ್ಚ್ 28: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರ ಅಸ್ತಿತ್ವಕ್ಕೆ ಬಂದ ನಂತರ ಇಡೀ ರಾಷ್ಟ್ರದ ಚಿತ್ರಣವೇ ಬದಲಾಗಿದೆ. ಮಹಿಳಾ ವಿರೋಧಿ ಕಾನೂನುಗಳ ನಡುವೆ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಮಹಿಳೆಯೊಬ್ಬರು ಏಕಾಂಗಿಯಾಗಿ ಪ್ರಯಾಣಿಸುವುದಕ್ಕೆ ಮಾರ್ಚ್ 28ರ ಸೋಮವಾರವೇ ಕೊನೆಯ ದಿನವಾಗಿದೆ.

ಶನಿವಾರ ವಿಮಾನಯಾನ ಸಂಸ್ಥೆಗಳಿಗೆ ಸದ್ಗುಣ ಪ್ರಚಾರ ಮತ್ತು ಅನೀತಿ ನಿಯಂತ್ರಣ ಸಚಿವಾಲಯವು ಪತ್ರವೊಂದನ್ನು ರವಾನಿಸಿದ್ದು, ಒಬ್ಬ ಪುರುಷರ ಬೆಂಗಾವಲು ಇಲ್ಲದೇ ಮಹಿಳೆಯರು ಏಕಾಂಗಿಯಾಗಿ ದೇಶೀಯ ಅಥವಾ ಅಂತರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣಿಸುವಂತಿಲ್ಲ ಎಂಬ ನಿಯಮವನ್ನು ಜಾರಿಗೊಳಿಸಲಾಗಿದೆ.

ಮಹಿಳೆಯರೇ ಎಚ್ಚರ: ಈ ದೇಶದಲ್ಲಿ ನೀವು 72 ಕೀ.ಮೀಗಿಂತ ದೂರ ಒಂಟಿಯಾಗಿ ಪ್ರಯಾಣಿಸುವಂತಿಲ್ಲ!ಮಹಿಳೆಯರೇ ಎಚ್ಚರ: ಈ ದೇಶದಲ್ಲಿ ನೀವು 72 ಕೀ.ಮೀಗಿಂತ ದೂರ ಒಂಟಿಯಾಗಿ ಪ್ರಯಾಣಿಸುವಂತಿಲ್ಲ!

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಸರ್ಕಾರವು ಅಸ್ತಿತ್ವಕ್ಕೆ ಬಂದ ನಂತರದಲ್ಲಿ ಮಹಿಳೆಯರ ಮೇಲೆ ಹೆಚ್ಚಿನ ನಿರ್ಬಂಧಗಳನ್ನು ವಿಧಿಸಲಾಗುತ್ತಿದೆ. ಈಗ ಅಂಥದ್ದೇ ನಿಮಯಗಳ ಪಟ್ಟಿಗೆ ಮತ್ತೊಂದು ಸೇರ್ಪಡೆ ಆಗಿದೆ. ಇದರ ಮಧ್ಯೆ ಅಂತಾರಾಷ್ಟ್ರೀಯ ಮತ್ತು ದೇಶೀಯ ವಿಮಾನಗಳಲ್ಲಿ ಮಹಿಳೆಯರು ಒಂಟಿಯಾಗಿ ಪ್ರಯಾಣಿಸುವುದಕ್ಕೆ ಇವತ್ತೇ ಕೊನೆಯ ದಿನವಾಗಿದೆ.

ಭಾನುವಾರ ಮತ್ತು ಸೋಮವಾರವೇ ಕೊನೆಯ ದಿನ

ಭಾನುವಾರ ಮತ್ತು ಸೋಮವಾರವೇ ಕೊನೆಯ ದಿನ

ಅಫ್ಘಾನಿಸ್ತಾನದಲ್ಲಿ ಮೊದಲೇ ವಿಮಾನದ ಟಿಕೆಟ್ ಬುಕ್ಕಿಂಗ್ ಮಾಡಿದ ಮಹಿಳೆಯರಿಗೆ ಮಾತ್ರ ಪ್ರಯಾಣಕ್ಕೆ ಅನುಮತಿ ನೀಡಲಾಗುತ್ತದೆ. ಭಾನುವಾರ ಮತ್ತು ಸೋಮವಾರ ಹೊರಟ ವಿಮಾನದಲ್ಲಿ ಮಾತ್ರ ಪುರುಷರ ಬೆಂಗಾವಲು ಇಲ್ಲದೇ ಮಹಿಳೆಯೊಬ್ಬರು ಪ್ರಯಾಣಿಸುವುದಕ್ಕೆ ಅವಕಾಶ ನೀಡಲಾಗುತ್ತದೆ. ಇಲ್ಲಿಂದ ನಂತರದ ದಿನಗಳಲ್ಲಿ ಏಕಾಂಗಿಯಾಗಿ ಮಹಿಳೆಯರು ಯಾವುದೇ ದೇಶೀಯ ಹಾಗೂ ಅಂತಾರಾಷ್ಟ್ರೀಯ ವಿಮಾನಗಳಲ್ಲಿ ಪ್ರಯಾಣ ಮಾಡುವಂತಿಲ್ಲ ಎಂಬ ನಿಯಮವು ಜಾರಿಗೆ ಬರಲಿದೆ.

ಅಫ್ಘಾನಿಸ್ತಾನದಲ್ಲಿ ಮಹಿಳಾ ಸ್ವಾತಂತ್ರ್ಯದ ಮೇಲೆ ನಿಯಂತ್ರಣ

ಅಫ್ಘಾನಿಸ್ತಾನದಲ್ಲಿ ಮಹಿಳಾ ಸ್ವಾತಂತ್ರ್ಯದ ಮೇಲೆ ನಿಯಂತ್ರಣ

ಕಳೆದ ಆಗಸ್ಟ್ 15ರಂದು ಅಧಿಕಾರಕ್ಕೆ ಏರಿದ ತಾಲಿಬಾನ್ ಸರ್ಕಾರವು ಮಹಿಳಾ ಸ್ವಾತಂತ್ರ್ಯವನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಕಠಿಣ ನಿಯಮಗಳನ್ನು ಜಾರಿಗೊಳಿಸುತ್ತಿದೆ. ಈಗಾಗಲೇ ಮಹಿಳೆಯರ ಮೇಲೆ ಹಲವು ನಿರ್ಬಂಧಗಳನ್ನು ಹೇರುತ್ತಾ ಬಂದಿದೆ. ಮೊದಲು ಸಾರ್ವಜನಿಕ ವಲಯದಲ್ಲಿ ಮಹಿಳೆಯರು ಉದ್ಯೋಗಕ್ಕೆ ಹೋಗುವುದನ್ನು ನಿರ್ಬಂಧಿಸಲಾಗಿದ್ದು, ತದನಂತರದಲ್ಲಿ ಹೈಸ್ಕೂಲ್ ನಂತರದಲ್ಲಿ ಮಹಿಳೆಯರಿಗೆ ಹೆಚ್ಚಿನ ಶಿಕ್ಷಣಕ್ಕೆ ತಡೆ ನೀಡಲಾಯಿತು. ಇದರ ಬೆನ್ನಲ್ಲೇ ಈಗ ಮಹಿಳೆಯರ ದೂರದ ಪ್ರವಾಸಕ್ಕೂ ನಿಯಂತ್ರಣ ವಿಧಿಸಲು ತಾಲಿಬಾನ್ ಸರ್ಕಾರ ಮುಂದಾಗಿದೆ.

ಹುಡುಗಿಯರು ಮತ್ತು ಮಹಿಳೆಯರ ಮೇಲೆ ವಿನಾಶಕಾರಿ ಪರಿಣಾಮ

ಹುಡುಗಿಯರು ಮತ್ತು ಮಹಿಳೆಯರ ಮೇಲೆ ವಿನಾಶಕಾರಿ ಪರಿಣಾಮ

ಅಫ್ಧಾನಿಸ್ತಾನದಲ್ಲಿ ಕಳೆದ ವಾರದ ಮಾಧ್ಯಮಿಕ ಶಾಲಾ ವಿದ್ಯಾರ್ಥಿನಿಯರಿಗೆ ಔಪಚಾರಿಕ ಅಧ್ಯಯನವನ್ನು ಮುಂದುವರಿಸಲು ಅವಕಾಶ ನೀಡುವ ಭರವಸೆಯನ್ನು ತಿರಸ್ಕರಿಸಲಾಗಿದೆ. ಈ ನಿರ್ಧಾರಕ್ಕೆ ಪ್ರತ್ಯುತ್ತರವಾಗಿ ಆ ದೇಶದ ಆರ್ಥಿಕ ಸಮಸ್ಯೆಗಳನ್ನು ನಿವಾರಿಸುವ ನಿಟ್ಟಿನಲ್ಲಿ ತಾಲಿಬಾನ್ ಸರ್ಕಾರದ ಜೊತೆಗೆ ನಡೆಸಲು ನಿರ್ಧರಿಸಲಾಗಿದ್ದ ಸಭೆಗಳನ್ನು ಯುನೈಟೆಡ್ ಸ್ಟೇಟ್ಸ್ ರದ್ದುಗೊಳಿಸಿದೆ. ಇದರ ಮಧ್ಯೆಯೇ ಹ್ಯೂಮನ್ ರೈಟ್ಸ್ ವಾಚ್ ಮತ್ತು ಹ್ಯೂಮನ್ ರೈಟ್ಸ್ ಇನ್‌ಸ್ಟಿಟ್ಯೂಟ್ ಆಫ್ ಸ್ಯಾನ್ ಜೋಸ್ ಸ್ಟೇಟ್ ಯೂನಿವರ್ಸಿಟಿ (ಎಸ್‌ಜೆಎಸ್‌ಯು) ನಡೆಸಿದ ಸಂಶೋಧನೆಯು ತಾಲಿಬಾನ್ ಆಡಳಿತವು "ಅಫ್ಘಾನ್ ಮಹಿಳೆಯರು ಮತ್ತು ಹುಡುಗಿಯರ ಮೇಲೆ ವಿನಾಶಕಾರಿ ಪರಿಣಾಮವನ್ನು ಬೀರಿದೆ" ಎಂದು ಹೇಳಿದೆ.

ಕಳೆದ ಆಗಸ್ಟ್‌ನಲ್ಲಿ ತಾಲಿಬಾನ್ ಅಧಿಕಾರಕ್ಕೆ ಬಂದ ನಂತರ, ಅವರು "ಮಹಿಳೆಯರ ಮತ್ತು ಹುಡುಗಿಯರ ಆರೋಗ್ಯ ಮತ್ತು ಶಿಕ್ಷಣಕ್ಕೆ ಭಾರಿ ಅಡೆತಡೆಗಳನ್ನು ಸೃಷ್ಟಿಸುವ ಹಕ್ಕುಗಳನ್ನು ಉಲ್ಲಂಘಿಸುವ ನೀತಿಗಳನ್ನು ಹೇರಲಾಗಿದೆ.

'ಷರಿಯಾ' ಶಾಪಕ್ಕೆ ಅಫ್ಘಾನ್ ಮಹಿಳೆಯರು ತುತ್ತು

'ಷರಿಯಾ' ಶಾಪಕ್ಕೆ ಅಫ್ಘಾನ್ ಮಹಿಳೆಯರು ತುತ್ತು

ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ ಇದೇ ಷರಿಯಾ ಕಾನೂನುಗಳನ್ನು ಪಾಲನೆ ಮಾಡಲಾಗುತ್ತಿತ್ತು. ಈ ಕಾನೂನುಗಳ ಪ್ರಕಾರ, ಸಾರ್ವಜನಿಕರ ಮರಣ ದಂಡನೆ, ಕೋಲುಗಳಿಂದ ಬಲವಾಗಿ ಹೊಡೆಯುವುದು, ಕೈ-ಕಾಲುಗಳನ್ನು ಛಿದ್ರಗೊಳಿಸುವುದು, ಹೀಗೆ ಒಂದಕ್ಕಿಂತ ಒಂದು ಶಿಕ್ಷೆಯ ವಿಧಾನ ಘೋರವಾಗಿತ್ತು. ಜನರನ್ನು ತಿದ್ದುವುದಕ್ಕಾಗಿ ಇರುವ ಇಸ್ಲಾಮಿಕ್ ಕಾನೂನುಗಳನ್ನು ಉಲ್ಲಂಘಿಸಿ ಅತಿರೇಕದ ಶಿಕ್ಷೆಯನ್ನು ನೀಡಲಾಗುತ್ತಿತ್ತು. ಚಿಕ್ಕದಾಗಿ ಗಡ್ಡ ಬಿಟ್ಟ ಪುರುಷರಿಗೆ ಶಿಕ್ಷೆ ನೀಡುವುದು ಒಂದು ವಿಧಾನವಾಗಿತ್ತು. ಆದರೆ ಮಹಿಳೆಯರಿಗೆ ತೀರಾ ಮುಜುಗರ ಉಂಟು ಮಾಡುವಂತಾ ಶಿಕ್ಷೆಗಳನ್ನು ಈ ಕಾನೂನುಗಳಡಿಯಲ್ಲಿ ನೀಡಲಾಗುತ್ತಿತ್ತು. ಮಹಿಳೆಯರು ಧರಿಸುವ ಬಟ್ಟೆಯಿಂದ ಹಿಡಿದು ನಡವಳಿಕೆವರೆಗೂ ಪ್ರತಿಯೊಂದಕ್ಕೂ ನಿಯಮ ಪಾಲನೆ ಕಡ್ಡಾಯಗೊಳಿಸಲಾಗಿದ್ದು, ಉಲ್ಲಂಘಿಸಿದವರಿಗೆ ಸಾರ್ವಜನಿಕವಾಗಿ ಹಿಂಸೆ ನೀಡಲಾಗುತ್ತಿತ್ತು. ಇದೀಗ ಅಂಥದ್ದೇ ಕಠಿಣ ನಿಯಮಗಳನ್ನು ದೇಶದಲ್ಲಿ ಮತ್ತೊಮ್ಮೆ ಜಾರಿಗೊಳಿಸುವುದಕ್ಕೆ ತಾಲಿಬಾನಿಗಳು ಪ್ರಯತ್ನಿಸುತ್ತಿದ್ದಾರೆ.

English summary
Taliban ban women from taking domestic or international flights without a male escort from March 28.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X