ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೋಲೆಮನಿ ಅಂತ್ಯಸಂಸ್ಕಾರದ ವೇಳೆ ಕಾಲ್ತುಳಿತ: ಕನಿಷ್ಠ 35 ಸಾವು

|
Google Oneindia Kannada News

ಟೆಹರಾನ್, ಜನವರಿ 7: ಅಮೆರಿಕದ ಪಡೆಗಳಿಂದ ಇರಾಕ್‌ನಲ್ಲಿ ಹತ್ಯೆಗೀಡಾದ ಇರಾನ್‌ನ 'ಹೀರೋ' ಖಾಸಿಂ ಸೋಲೆಮನಿಯ ಅಂತ್ಯಸಂಸ್ಕಾರದ ವೇಳೆ ಲಕ್ಷಾಂತರ ಮಂದಿ ಸೇರಿದ್ದ ವೇಳೆ ಉಂಟಾದ ಕಾಲ್ತುಳಿತದಿಂದ ಕನಿಷ್ಠ 35 ಮಂದಿ ಮೃತಪಟ್ಟಿದ್ದಾರೆ.

ಶುಕ್ರವಾರ ಮುಂಜಾನೆ ಹತ್ಯೆಗೀಡಾದ ಸೋಲೆಮನಿ ಪಾರ್ಥಿವ ಶರೀರವನ್ನು ಅವರ ತವರು ಕೆರ್ಮನ್ ಪಟ್ಟಣಕ್ಕೆ ಮಂಗಳವಾರ ತರಲಾಯಿತು. ಈ ವೇಳೆ ಭಾರಿ ಸಂಖ್ಯೆಯಲ್ಲಿ ಜನರು ಮೆರವಣಿಗೆಯಲ್ಲಿ ಪಾಲ್ಗೊಂಡರು. ಆಗ ಉಂಟಾದ ಕಾಲ್ತುಳಿತದಿಂದ ಅಪಾರ ಸಾವು ನೋವು ಸಂಭವಿಸಿದೆ.

ಖಾಸಿಂ ಸೋಲೆಮನಿ ಹತ್ಯೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್ ಮತ್ತು ಇರಾಕ್ಖಾಸಿಂ ಸೋಲೆಮನಿ ಹತ್ಯೆ: ಅಮೆರಿಕಕ್ಕೆ ಸೆಡ್ಡು ಹೊಡೆದ ಇರಾನ್ ಮತ್ತು ಇರಾಕ್

ಖಾಸಿಂ ಸೋಲೆಮನಿ ಅವರ ಹತ್ಯೆಗೆ ಪ್ರತೀಕಾರ ತೀರಿಸಿಕೊಳ್ಳುವುದಾಗಿ ಹೇಳಿರುವ ಇರಾನ್, ಅಮೆರಿಕದ ಪಡೆಗಳನ್ನು 'ಉಗ್ರರು' ಎಂದು ಕರೆಯುವ ನಿರ್ಣಯಕ್ಕೆ ಅವಿರೋಧವಾಗಿ ಮತ ಚಲಾಯಿಸಿದರು. ಮಂಗಳವಾರ ನಡೆದ ಸಂಸತ್ ಅಧಿವೇಶನದಲ್ಲಿ ಈ ನಿರ್ಣಯ ಅಂಗೀಕರಿಸಲಾಯಿತು. ಈ ವೇಳೆ ಜನಪ್ರತಿನಿಧಿಗಳು 'ಅಮೆರಿಕದ ಸಾವು' ಎಂದು ಕೂಗಿದರು.

Many Killed In Stampede At Soleimanis Funeral In Iran

ಅಮೆರಿಕ ವಿರುದ್ಧ ಪ್ರತೀಕಾರಕ್ಕೆ ಇರಾನ್ ಸಜ್ಜು ಅಮೆರಿಕ ವಿರುದ್ಧ ಪ್ರತೀಕಾರಕ್ಕೆ ಇರಾನ್ ಸಜ್ಜು

ಸೋಲೆಮನಿ ತಮ್ಮ ಸಾವಿಗೂ ಮುನ್ನ ನೇತೃತ್ವ ವಹಿಸಿದ್ದ ಖುದ್ಸ್ ಪಡೆಗಳಿಗೆ ಹೆಚ್ಚುವರಿ ಬಜೆಟ್ ಅನುದಾನ ನೀಡಲು ಸಹ ಸಂಸತ್ ಅನುಮೋದನೆ ನೀಡಿದೆ.

ಡೊನಾಲ್ಡ್ ಟ್ರಂಪ್ ತಲೆಗೆ 576 ಕೋಟಿ ರು ಸುಪಾರಿ ಕೊಟ್ಟ ಇರಾನ್ಡೊನಾಲ್ಡ್ ಟ್ರಂಪ್ ತಲೆಗೆ 576 ಕೋಟಿ ರು ಸುಪಾರಿ ಕೊಟ್ಟ ಇರಾನ್

ಸೋಲೆಮನಿ ಹತ್ಯೆಯ ಬಳಿಕ ಅಮೆರಿಕ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗಳ ಬಗ್ಗೆ ಇರಾನ್ ತಲೆಕೆಡಿಸಿಕೊಂಡಿಲ್ಲ. ನಮ್ಮ ಪ್ರದೇಶಗಳಲ್ಲಿ ನಡೆಯುವ ದಾಳಿಗಳನ್ನು ಹಿಮ್ಮಟ್ಟಿಸಿ ನಮ್ಮ ಜನರನ್ನು ರಕ್ಷಿಸಿಕೊಳ್ಳುವ ತಾಕತ್ತು ನಮಗಿದೆ. ಅಮೆರಿಕವು ತನ್ನ ನೆಲದಲ್ಲಿ ಅಮೆರಿಕವನ್ನು ಉಳಿಸಿಕೊಳ್ಳಬಲ್ಲದು. ಆದರೆ ಸಾವಿರಾರು ಮೈಲು ದೂರದಲ್ಲಿರುವ ಪ್ರದೇಶದಲ್ಲಿ ತನ್ನನ್ನು ಸಮರ್ಥಿಸಿಕೊಳ್ಳಲಾರದು ಎಂದು ಇರಾನ್ ವಿದೇಶಾಂಗ ಸಚಿವ ಜಾವೇದ್ ಝಾರಿಫ್ ಹೇಳಿದರು.

English summary
At least 35 killed in stampede at Iran's General Qassem Soleimani's funeral in his hometown Kerman.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X