ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಫಿಲಿಪೈನ್ಸ್: ಮಹಿಳಾ ಆತ್ಮಾಹುತಿ ದಾಳಿಗೆ 10 ಮಂದಿ ಬಲಿ

|
Google Oneindia Kannada News

ಮನಿಲಾ, ಆ. 24: ದಕ್ಷಿಣ ಫಿಲಿಪೈನ್ಸ್ ನ ಜೊಲೊ ಎಂಬ ಪಟ್ಟಣದಲ್ಲಿ ಸಂಭವಿಸಿದ ಎರಡು ಬಾಂಬ್ ಸ್ಫೋಟದಲ್ಲಿ 10 ಮಂದಿ ಮೃತಪಟ್ಟಿದ್ದು, ಹಲವರಿಗೆ ಗಾಯಗಳಾಗಿವೆ. ಒಂದು ಕಡೆ ಮಹಿಳಾ ಆತ್ಮಾಹುತಿ ಬಾಂಬರ್ ದಾಳಿ ನಡೆದಿರುವುದು ಸ್ಪಷ್ಟವಾಗಿದೆ.

ಸೋಮವಾರ (4.00 GMT) ಮಧ್ಯಾಹ್ನ ಸುಲು ಎಂಬಲ್ಲಿ ಸ್ಫೋಟ ಸಂಭವಿಸಿತು ಎಂದು ರೆಡ್ ಕ್ರಾಸ್ ಮುಖ್ಯಸ್ಥ, ಸೆನೆಟರ್ ರಿಚರ್ಡ್ ಗೊರ್ಡನ್ ಹೇಳಿದ್ದಾರೆ.

ಮೋಟರ್ ಸೈಕಲ್ ಸ್ಫೋಟ:
ಅತ್ಯಾಧುನಿಕ ಸ್ಫೋಟಕ ಸಾಧನಗಳನ್ನು ಹೊಂದಿದ್ದ ಮೋಟರ್ ಸೈಕಲ್ ಸ್ಫೋಟಗೊಳಿಸಲಾಗಿದೆ. ಮೊದಲ ಸ್ಫೋಟದಲ್ಲಿ ಐವರು ಯೋಧರು ಹಾಗೂ ನಾಲ್ವರು ನಾಗರಿಕರು ಮೃತಪಟ್ಟಿದ್ದಾರೆ.

Many killed in Jolo twin bombings, southern Philippines

ಎರಡನೇ ಸ್ಫೋಟವು ಮಹಿಳಾ ಆತ್ಮಾಹುತಿ ಬಾಂಬರ್ ಮೂಲಕ ಸಂಭವಿಸಿದ್ದು, ಓರ್ವ ನಾಗರಿಕ ಮೃತಪಟ್ಟಿದ್ದಾರೆ ಎಂದು ಮೇಜರ್ ಜನರಲ್ ಕೊರ್ಲೆಟೋ ವಿಲುಯಾನ್ ಹೇಳಿದ್ದಾರೆ.

ಎರಡು ಸ್ಫೋಟಗಳಿಂದ ಸುಮಾರು 24 ಮಂದಿ ಗಾಯಗೊಂಡಿದ್ದಾರೆ. 2019ರಲ್ಲಿ 20 ಜನರನ್ನು ಬಲಿ ಪಡೆದಿದ್ದ ಕ್ಯಾಥೋಲಿಕ್ ಚರ್ಚ್ ಸ್ಫೋಟ ಸಂಭವಿಸಿದ ಸ್ಥಳದ ಬಳಿಯಲ್ಲೇ ಇಂದು ಸ್ಫೋಟ ಸಂಭವಿಸಿದೆ.

ಸುಲು ಪ್ರಾಂತ್ಯದಲ್ಲಿ ಐಎಸ್ಐಎಸ್ ಬೆಂಬಲಿತ ಸಶಸ್ತ್ರ ಅಬು ಸಯ್ಯಾಫ್ ಗುಂಪು ಸಕ್ರಿಯವಾಗಿದೆ. ಆದರೆ, ಈ ಸ್ಫೋಟದ ಹೊಣೆಯನ್ನು ಯಾವ ಗುಂಪು ಹೊತ್ತುಕೊಂಡಿಲ್ಲ. ಘಟನೆ ಬಗ್ಗೆ ತನಿಖೆ ಆರಂಭಗೊಂಡಿದೆ ಎಂದು ಫಿಲಿಪೈನ್ ಪೊಲೀಸ್ ಮುಖ್ಯಸ್ಥ ಜನರಲ್ ಆರ್ಚಿ ಫ್ರಾನ್ಸಿಸ್ಕೋ ಗಾಮ್ಬೋವಾ ಹೇಳಿದ್ದಾರೆ.

English summary
At least 10 people have been killed and several others were wounded after two explosions, including one reportedly carried out by a female suicide bomber, struck the southern Philippine town of Jolo, according to authorities.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X