ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಂಜಾನಿಯಾದಲ್ಲಿ ಭೀಕರ ಅಗ್ನಿ ದುರಂತಕ್ಕೆ 44 ಮಂದಿ ಸಾವು

|
Google Oneindia Kannada News

ಡೊಡೊಮಾ(ತಾಂಜಾನಿಯಾ), ಸೆಪ್ಟೆಂಬರ್ 21: ಆಫ್ರಿಕ ಖಂಡದಲ್ಲಿರುವ ತಾಂಜಾನಿಯಾ ದೇಶದ ಲೇಕ್ ವಿಕ್ಟೋರಿಯಾದಲ್ಲಿ ಫೆರ್ರಿ ದುರಂತವೊಂದು ಸಂಭವಿಸಿದ ಪರಿಣಾಮ 44 ಮಂದಿ ಮೃತರಾಗಿದ್ದಾರೆ.

ಲೇಕ್ ವಿಕ್ಟೋರಿಯಾದ ಎರಡು ದ್ವೀಪಗಳ ನಡುವೆ ಫೆರ್ರಿ ಮಗುಚಿಕೊಂಡಿದ್ದು, ಇದರಲ್ಲಿದ್ದ ಸುಮಾರು 500 ಜನರಲ್ಲಿ 44 ಜನ ಮೃತರಾಗಿದ್ದಾರೆ. ತಕ್ಷಣವೇ ನಡೆದ ರಕ್ಷಣಾ ಕಾರ್ಯದಿಂದಾಗಿ ಹಲವರ ಪ್ರಾಣ ರಕ್ಷಿಸಲಾಗಿದೆ. ಗಂಭೀರ ಸ್ಥಿತಿಯಲ್ಲಿರುವ ಹಲವರಿಗೆ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಟ್ಯುನಿಷಿಯಾ: ದೋಣಿ ಮುಳುಗಿ 50ಕ್ಕೂ ಹೆಚ್ಚು ವಲಸಿಗರ ಸಾವುಟ್ಯುನಿಷಿಯಾ: ದೋಣಿ ಮುಳುಗಿ 50ಕ್ಕೂ ಹೆಚ್ಚು ವಲಸಿಗರ ಸಾವು

ಕತ್ತಲಾದ ಕಾರಣ ರಕ್ಷಣಾ ಕಾರ್ಯ ಸ್ಥಗಿತಗೊಳಿಸಲಾಗಿದ್ದು, ಬೆಳಿಗ್ಗೆ ಮತ್ತೆ ಮುಂದುವರಿಸುವುದಾಗಿ ತಿಳಿಸಲಾಗಿದೆ.

Many dead in ferry accident in Tanzania

ಆಫ್ರಿಕಾದಲ್ಲಿ ಹೀಗೆ ಫೆರ್ರಿ ಮಗುಚುವುದು ಹೊಸ ವಿಷಯವಲ್ಲ. ಫೆರ್ರಿಯಲ್ಲಿ ಮಿತಿಗಿಂತ ಹೆಚ್ಚು ಜನರನ್ನು ತುಂಬಿ ಓವರ್ ಲೋಡ್ ಮಾಡುವುದೇ ಇದಕ್ಕೆ ಕಾರಣ ಎನ್ನಲಾಗಿದೆ. 2011 ರಲ್ಲಿ ಜಾಂಜಿಬಾರ್ ಎಂಬ ದ್ವೀಪದಲ್ಲಿ ದೋಣಿ ಮುಳುಗಿದ ಪರಿಣಾಮ 200 ಕ್ಕೂ ಹೆಚ್ಚು ಜನ ಮೃತರಾಗಿದ್ದರು.

ಲಿಬಿಯಾದಲ್ಲಿ ಭೀಕರ ದೋಣಿ ದುರಂತ, 90 ನಿರಾಶ್ರಿತರು ದುರ್ಮರಣಲಿಬಿಯಾದಲ್ಲಿ ಭೀಕರ ದೋಣಿ ದುರಂತ, 90 ನಿರಾಶ್ರಿತರು ದುರ್ಮರಣ

ಕಳೆದ ಜೂನ್ ನಲ್ಲಿ ಮೆಡಿಟರೇನಿಯನ್ ಸಮುದ್ರದಲ್ಲಿ ದೋಣಿಯೊಂದು ಮುಳುಗಿದ ಪರಿಣಾಮ 50 ಕ್ಕೂ ಹೆಚ್ಚು ಜನ ಮೃತರಾಗದ್ದರು.

English summary
At least 44 people were killed after a passenger ferrycarrying hundreds of people capsized on Lake Victoria in Tanzania on Thursday. The ferry overturned between the two islands in Lake Victoria, which is the largest lake in Africa, passing through Tanzania, Kenyaferry carryingand Uganda, CNN reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X