ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕದಿಯದ ಪರ್ಸ್ ಆರೋಪಕ್ಕೆ ಸುಖಾಸುಮ್ಮನೆ 17ವರ್ಷ ಸೆರೆವಾಸ

By Nayana
|
Google Oneindia Kannada News

ಅಮೆರಿಕ, ಸೆಪ್ಟೆಂಬರ್ 3:ಮಹಿಳೆಯ ಪರ್ಸ್ ಕದ್ದ ಆರೋಪದ ಮೇಲೆ ಪೊಲೀಸರು ತಪ್ಪಾಗಿ ವ್ಯಕ್ತಿಯೊಬ್ಬನನ್ನು ಹಿಡಿದು 17 ವರ್ಷ ಜೈಲಿಗಟ್ಟಿರುವುದು ಬೆಳಕಿಗೆ ಬಂದಿದೆ.

ತನ್ನದಲ್ಲದ ತಪ್ಪಿಗೆ ಹದಿನೇಳು ವರ್ಷ ಜೈಲಿನಲ್ಲಿ ಶಿಕ್ಷೆಯನ್ನು ಅಮೆರಿಕಾದ ಪ್ರಜೆಯೊಬ್ಬ ಅನುಭವಿಸಿದ್ದಾನೆ. ಅಮೆರಿಕಾದ ಕ್ಯಾನ್ಸಾಸ್ ನಗರದಲ್ಲಿ ಮಹಿಳೆಯ ಪರ್ಸ್ ನ್ನು ರಿಚರ್ಡ್ ಜೋನ್ಸ್ ಎನ್ನುವ ವ್ಯಕ್ತಿ ಕದ್ದಿದ್ದಾನೆಂದು ಆರೋಪಿಸಿ ಸ್ಥಳೀಯ ಪೊಲೀಸರು ಜೈಲಿಗೆ ಹಾಕಿದ್ದರು.

ಕೇರಳದಲ್ಲಿ ಜೈಲು ಪ್ರವಾಸೋದ್ಯಮ: ಹಣ ತೆತ್ತು ಜೈಲುವಾಸದ ಥ್ರಿಲ್ ಪಡೆಯಿರಿ!ಕೇರಳದಲ್ಲಿ ಜೈಲು ಪ್ರವಾಸೋದ್ಯಮ: ಹಣ ತೆತ್ತು ಜೈಲುವಾಸದ ಥ್ರಿಲ್ ಪಡೆಯಿರಿ!

ಜೋನ್ಸ್ ರೀತಿಯೆ ರಿಕಿ ಆಮಸ್ ಎಂಬ ಇನ್ನೊಬ್ಬ ವ್ಯಕ್ತಿ ಕಳ್ಳತನದ ಹಿನ್ನೆಲೆ ಹೊಂದಿರುವುದು ಈ ಬಂಧನಕ್ಕೆ ಕಾರಣವಾಗಿತ್ತು. ಅಮೆರಿಕಾದಂತಹ ದೇಶದಲ್ಲಿಯೂ ಆರೋಪಿಯ ಹಿನ್ನೆಲೆ ಗಮನಸಿದೆ ಜೈಲಿಗೆ ಹಾಕಲಾಗಿತ್ತು.

mans spends 17 years in prison for investigators mistake

ಜೋನ್ಸ್ ಜೈಲಿನಲ್ಲಿದ್ದ ಸಂದರ್ಭದಲ್ಲಿ ಆತನ ಸಹ ಕೈದಿಗಳು ಇವನಂತೆ ಇರುವ ರಿಕಿ ಆಮೋಸ್ ಬಗ್ಗೆ ಮಾಹಿತಿ ನೀಡಿದ್ದರು. ಇದಾದ ನಂತರ ಪ್ರಕರಣದಕ್ಕೆ ಸಂಬಂಧಿಸಿ ಜೋನ್ಸ್ ಡಿಎನ್ ಎ ಅಥವಾ ಫಿಂಗರ್ ಪ್ರಿಂಟ್ ಕೂಡಾ ಹೊಂದಾಣಿಕೆಯಾಗದಿರುವುದನ್ನು ಕೋರ್ಟ್ ಗಮನಕ್ಕೆ ತರಲಾಯಿತು.

ಪೊಲೀಸ್ ಇಲಾಖೆಯ ಈ ಪ್ರಮಾದದಿಂದ ಅಸಮಧಾನಗೊಂಡಿರುವ ಜೋನ್ಸ್ ಪರಿಹಾರ ನೀಡುವಂತೆ ಕೋರ್ಟ್ ಗೆ ಮೊರೆಹೋಗಿದ್ದಾರೆ. ತನ್ನ ಜೀವನದ ಅಮೂಲ್ಯ ಕ್ಷಣವನ್ನು ಪೊಲೀಸರು ಹಾಳು ಮಾಡಿದ್ದಾರೆ ಎಂದು ಆರೋಪಿಸಿ 1.1ಮಿಲಿಯನ್ ಅಂದರೆ ಸುಮಾರು 7.7ಕೋಟಿ ರೂ. ಪರಿಹಾರ ತುಂಬಿಕೊಡುವಂತೆ ಅರ್ಜಿ ಸಲ್ಲಿಸಿದ್ದಾರೆ.

ಜೋನ್ಸ್ ಜೈಲು ಸೇರುವಾಗ ಪುಟ್ಟ ಕಂದಮ್ಮಗಳಾಗಿದ್ದ ಹೆಣ್ಣು ಮಕ್ಕಳಿಗೆ ಈಗ 24, 11ವರ್ಷಗಳಾಗಿದೆ. ತನ್ನ ಮಕ್ಕಳ ಬಾಲ್ಯವನ್ನೂ ನೋಡಲಾಗಿಲ್ಲ. ಇದನ್ನು ಗಂಭೀರವಾಗಿ ಪರಿಗಣಿಸಿ ಪರಿಹಾರ ನೀಡಬೇಕು ಎಂದು ಮನವಿ ಮಾಡಿದ್ದಾರೆ.

English summary
A US citizen faced jail sentence of 17 years without any crime, US canvas police mistaken the original criminal and send him to jail.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X