ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾಂಡಿ ಕ್ರಷ್ ಹುಚ್ಚಾಟಕ್ಕೆ ಹೆಬ್ಬೆರಳೇ ಕ್ರಷ್!

|
Google Oneindia Kannada News

ಲಾಸ್‌ಏಂಜಲೀಸ್‌ ಏ. 21: ಆ ಆಟದಲ್ಲಿ ಅದೇನು ಅಡಗಿದೆಯೋ ಗೊತ್ತಿಲ್ಲ. ಅನೇಕ ದಿನಗಳ ನಂತರ ಎದುರಾದ ಸ್ನೇಹಿತರು ಆರೋಗ್ಯ ಹೇಗಿದೆ ಎಂದು ಉಭಯಕುಶಲೋಪರಿ ವಿಚಾರಿಸದಿದ್ದರೂ ಕ್ಯಾಂಡಿ ಕ್ರಷ್ ನಲ್ಲಿ ನೀನು ಎಷ್ಟನೇ ಹಂತ ತಲುಪಿದ್ದೀಯಾ? ಎಂದು ಕೇಳಿಕೊಳ್ಳುವ ಮಟ್ಟಕ್ಕೆ ಈ ಆಟ ಹುಚ್ಚು ಹಿಡಿಸಿದೆ.

ಇಲ್ಲೊಬ್ಬ ಪುಣ್ಯಾತ್ಮ ಕ್ಯಾಂಡಿ ಕ್ರಷ್ ಆಟದ ಮೋಹಕ್ಕೆ ಸಿಕ್ಕು ತನ್ನ ಹೆಬ್ಬೆರಳಿಗೆ ಘಾಸಿ ಮಾಡಿಕೊಂಡಿದ್ದಾನೆ. ಒಂದು ತಿಂಗಳಿಗೂ ಹೆಚ್ಚು ಸಮಯ ತಡೆ ಇಲ್ಲದೇ ಸ್ಮಾರ್ಟ್‌ಫೋನ್‌ನಲ್ಲಿ ಕ್ಯಾಂಡಿ ಕ್ರಷ್‌ ಆಡಿದ ಕ್ಯಾಲಿಫೋರ್ನಿಯಾದ ವ್ಯಕ್ತಿಯ ಹೆಬ್ಬೆರಳು ಸಂಪೂರ್ಣ ಡ್ಯಾಮೇಜ್ ಆಗಿದೆ ಎಂದು ವೈದ್ಯರು ಸ್ಪಷ್ಟ ಪಡಿಸಿದ್ದಾರೆ.[ಬಿಜೆಪಿಯವರಿಗೆ ಕ್ಯಾಂಡಿ ಕ್ರಶ್ ರಿಕ್ವೆಸ್ಟ್ ಕಳಿಸಿದ್ದು ಕಾಂಗ್ರೆಸಿಗರು!]

game

ಎಡಗೈ ಹೆಬ್ಬೆರಳಲ್ಲಿ ನೋವು ಕಾಣಿಸಿಕೊಂಡ ಹಿನ್ನೆಲೆಯಲ್ಲಿ ವೈದ್ಯರನ್ನು ಭೇಟಿಯಾಗಿದ್ದ. ನೋವಿನಿಂದ ನರಳುತ್ತಿದವನನ್ನು ವಿಚಾರಣೆ ಮಾಡಿದಾಗ ಕ್ಯಾಂಡಿ ಕ್ರಷ್ ಆತನ ಬೆರಳನ್ನುಕ್ರಷ್ ಮಾಡಿದ್ದು ಗೊತ್ತಾಗಿದೆ. ಇದನ್ನು ಸರಿಪಡಿಸಲು ಶಸ್ತ್ರಚಿಕಿತ್ಸೆಯೊಂದೇ ಪರಿಹಾರ ಎಂದು ವೈದ್ಯರು ತಿಳಿಸಿದ್ದಾರೆ.

ಇದೇ ಸಂದರ್ಭದಲ್ಲಿ ಮತ್ತೊಂದು ಸಂಗತಿಯೂ ಬೆಳಕಿಗೆ ಬಂದಿದ್ದು ಕೆಲ ವಿಡಿಯೋ ಗೇಮ್ ಗಳು ನೋವು ನಿವಾರಕ ರೀತಿಯಲ್ಲಿ ಕೆಲಸ ಮಾಡುತ್ತವೆಯಂಥೆ. ಆಟ ಆಡುವ ಸಮಯದಲ್ಲಿ ನೋವು ಗೊತ್ತಾಗುವುದಿಲ್ಲ ಎಂದು ಸಂಶೋಧನೆ ಹೇಳಿದೆ.[ಬಿಪಿ ಹೆಚ್ಚಿಸಲು ನಾಲ್ಕು ಇಮೇಲ್ ಸಾಕು]

ಫೇಸ್ ಬುಕ್ ಕೀಟಲೆ
ಆಟದ ಹುಚ್ಚು ಹಿಡಿಸಿಕೊಂಡವರು ಮುಂದಿನ ಹಂತಕ್ಕೆ ತಲುಪಲು ಹಪಹಪಿ ಮಾಡುತ್ತಿರುತ್ತಾರೆ. ಸಮಯವನ್ನು ಹಾಳು ಮಾಡುವ ಆಟ ನಿಮಗೂ ಕಿರಿಕಿರಿ ತರಬಹುದು. ಫೇಸ್ ಬುಕ್ ಸ್ನೇಹಿತರಿಂದ ಕ್ಯಾಂಡಿ ಕ್ರಷ್ ಆಡಲು ನಿಮಗೆ ಆಹ್ವಾನ ದೊರೆಯುತ್ತದೆ. ಅಪ್ಪಿ ತಪ್ಪಿ ಕ್ಲಿಕ್ ಮಾಡಿದರೆ ನೀವು ಆಟದ ಮೋಹದ ಪಾಶಕ್ಕೆ ಸಿಕ್ಕಿಹಾಕಿಕೊಳ್ಳುತ್ತೀರಿ!

English summary
A man has ruptured a tendon in his thumb by playing Candy Crush Saga, making it one of the first touchscreen-gaming related injuries. The Californian man played the game all day every day for between six and eight weeks using only his left hand, while conducting daily tasks with his right hand.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X