ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪ್ಯಾರಿಸ್ ನಲ್ಲಿ ಪೊಲೀಸ್ ಮೇಲೆ ದಾಳಿ ಮಾಡಿದ ವ್ಯಕ್ತಿಗೆ ಗುಂಡೇಟು

|
Google Oneindia Kannada News

ಪ್ಯಾರಿಸ್, ಜೂನ್ 6: ಪೊಲೀಸ್ ಅಧಿಕಾರಿಯೊಬ್ಬರ ಮೇಲೆ ಸುತ್ತಿಗೆಯಿಂದ ದಾಳಿ ನಡೆಸಿದ ವ್ಯಕ್ತಿ ಮೇಲೆ ಫ್ರೆಂಚ್ ಪೊಲೀಸರು ಗುಂಡು ಹಾರಿಸಿದ್ದು, ಆತನಿಗೆ ಗಾಯವಾಗಿದೆ. ನಾಟರ್ ಡ್ಯಾಮ್ ಕೆಥೆಡ್ರಲ್ ಹೊರಭಾಗದಲ್ಲಿ ಈ ದಾಳಿ ನಡೆದಿದ್ದು, ಪ್ಯಾರಿಸ್ ಅಧಿಕಾರಿಗಳು ವಿಚಾರಣೆಯನ್ನು ಆರಂಭಿಸಿದ್ದಾರೆ.

ಈ ಕೆಥೆಡ್ರಲ್ ಕೇಂದ್ರ ಪ್ಯಾರಿಸ್ ನಲ್ಲಿದ್ದು, ಹತ್ತಾರು ಲಕ್ಷ ಮಂದಿ ಇಲ್ಲಿಗೆ ಭೇಟಿ ನೀಡುತ್ತಾರೆ. ಘಟನೆ ನಡೆದ ವೇಳೆ ಇದನ್ನು ಮುಚ್ಚಲಾಯಿತು. ಸದ್ಯಕ್ಕೆ ಈ ಸ್ಥಳದಲ್ಲಿ ಶಸ್ತ್ರಸಜ್ಜಿತ ಪೊಲೀಸರು ಸುತ್ತುವರಿದಿದ್ದಾರೆ. ದಾಳಿಯ ಉದ್ದೇಶ ತಕ್ಷಣಕ್ಕೆ ಸ್ಪಷ್ಟವಾಗಿಲ್ಲ. ಲಂಡನ್ ನಲ್ಲಿ ಐಎಸ್ ಉಗ್ರರು ದಾಳಿ ನಡೆಸಿದ ಮೂರು ದಿನದ ನಂತರ ಈ ಘಟನೆ ನಡೆದಿದೆ.[ಅಫ್ಘಾನಿಸ್ತಾನದಲ್ಲಿ ಮತ್ತೆ ಅವಳಿ ಬಾಂಬ್ ಸ್ಪೋಟ, 10 ಬಲಿ]

Paris attack

ಸನ್ನಿವೇಶ ಸದ್ಯಕ್ಕೆ ಹತೋಟಿಯಲ್ಲಿದೆ. ಒಬ್ಬ ಪೊಲೀಸರಿಗೆ ಗಾಯವಾಗಿದೆ. ದಾಳಿಕೋರನನ್ನು ಆಸ್ಪತ್ರೆಗೆ ಸ್ಥಳಾಂತರಿಸಲಾಗಿದೆ ಎಂದು ಪೊಲೀಸರು ಟ್ವಿಟ್ಟರ್ ನಲ್ಲಿ ತಿಳಿಸಿದ್ದಾರೆ. ಸುತ್ತಿಗೆಯಿಂದ ಬೆದರಿಸಿದ ವ್ಯಕ್ತಿಯನ್ನು ತಡೆಯುವ ಕಾರಣಕ್ಕೆ ಗುಂಡು ಹಾರಿಸಬೇಕಾಯಿತು ಎಂದು ಪೊಲೀಸರು ಹೇಳಿದ್ದಾರೆ.

ಒಂಬೈನೂರು ಮಂದಿ ಇನ್ನೂ ಕೆಥೆಡ್ರಲ್ ನ ಒಳಗೆ ಇದ್ದಾರೆ. ಆ ಪ್ರದೇಶವನ್ನು ಪೊಲೀಸರು ಸುತ್ತುವರಿದಿದ್ದಾರೆ. ಎರಡು ವರ್ಷದ ಹಿಂದೆ ಫ್ರಾನ್ಸ್ ನಲ್ಲಿ ಉಗ್ರರು ದಾಳಿ ಮಾಡಿ, ನೂರಾರು ಮಂದಿಯನ್ನು ಕೊಂದಿದ್ದರು. ಆಗಿನಿಂದ ಅಲ್ಲಿನ ಪ್ರಮುಖ ಪ್ರವಾಸಿ ತಾಣಗಳಲ್ಲಿ ಸೈನಿಕರು ಪಹರೆಯಲ್ಲಿರುತ್ತಾರೆ.

English summary
French police shot and wounded a man who attacked officers with a hammer outside the Notre Dame cathedral on Tuesday and the Paris prosecutor's office swiftly launched a counter-terrorism investigation.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X