ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಝೂಮ್ ಕರೆ ಮೂಲಕವೇ ಅಪರಾಧಿಗೆ ಗಲ್ಲು ಶಿಕ್ಷೆ ಪ್ರಕಟ!

|
Google Oneindia Kannada News

ಸಿಂಗಾಪುರ, ಮೇ 20 : ಕೊರೊನಾ ಹರಡದಂತೆ ತಡೆಯಲು ಲಾಕ್ ಡೌನ್ ಘೋಷಣೆ ಮಾಡಿದ ಬಳಿಕ ಝೂಮ್ ಅಪ್ಲಿಕೇಶನ್ ಬಳಕೆ ಹೆಚ್ಚಾಗಿದೆ. ಮಾದಕ ವಸ್ತು ಕಳ್ಳ ಸಾಗಣೆಗೆ ಸಹಾಯ ಮಾಡಿದ ಆರೋಪಿಗೆ ಝೂಮ್ ವಿಡಿಯೋ ಕರೆ ಮೂಲಕವೇ ಗಲ್ಲು ಶಿಕ್ಷೆ ಜಾರಿಗೆ ಆದೇಶ ನೀಡಲಾಗಿದೆ.

ಮಲೇಷ್ಯಾ ಮೂಲದ 37 ವರ್ಷದ ವ್ಯಕ್ತಿಗೆ ಸಿಂಗಾಪುರದಲ್ಲಿ ಗಲ್ಲು ಶಿಕ್ಷೆ ಘೋಷಣೆ ಮಾಡಲಾಗಿದೆ. ಮಾದಕ ವಸ್ತು ಕಳ್ಳ ಸಾಗಣೆಯಲ್ಲಿ ವ್ಯಕ್ತಿಯ ಪಾತ್ರ ಇರುವುದು ಖಚಿತವಾದ ಮೇಲೆ ಶಿಕ್ಷೆ ವಿಧಿಸಲಾಗಿದ್ದು, ಸಿಂಗಾಪುರದಲ್ಲಿ ಹೀಗೆ ಗಲ್ಲು ಶಿಕ್ಷೆ ಘೋಷಣೆ ಮಾಡಿದ್ದು ಇದೇ ಮೊದಲು.

ಬೆಂಗಳೂರಿನಿಂದ ಝೂಮ್ ಕಾರು ಕದ್ದಿದ್ದು ಆಂಧ್ರದ ಟೆಕ್ಕಿ!ಬೆಂಗಳೂರಿನಿಂದ ಝೂಮ್ ಕಾರು ಕದ್ದಿದ್ದು ಆಂಧ್ರದ ಟೆಕ್ಕಿ!

ಕೊರೊನಾ ಸಂದರ್ಭದಲ್ಲಿ ಸುರಕ್ಷಿತವಾಗಿಲು ಸಿಂಗಾಪುರ ಸುಪ್ರೀಂಕೋರ್ಟ್ ಕಲಾಪಗಳನ್ನು ಝೂಮ್ ವಿಡಿಯೋ ಕಾಲಿಂಗ್ ಮೂಲಕ ನಡೆಸಲಾಗುತ್ತಿದೆ. ಮಾದಕ ವಸ್ತು ಕಳ್ಳ ಸಾಗಣೆ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಾಲಯ ಅಪರಾಧಿಗೆ ಗಲ್ಲು ಶಿಕ್ಷೆ ಜಾರಿಗೊಳಿಸಿ ಎಂದು ಆದೇಶ ನೀಡಿದೆ.

ವೈರಲ್ ವಿಡಿಯೋ: ಕರುಳಿನ ಕೂಗು ಬದುಕಿಸಿತು ಕೋತಿಯ ಜೀವ!ವೈರಲ್ ವಿಡಿಯೋ: ಕರುಳಿನ ಕೂಗು ಬದುಕಿಸಿತು ಕೋತಿಯ ಜೀವ!

Man Sentenced Death Via Zoom Call

ಕೆಲವು ದಿನಗಳ ಹಿಂದೆ ಪ್ರಕರಣದ ವಿಚಾರಣೆ ನಡೆದಾಗ ಆರೋಪಿ ಝೂಮ್ ಕರೆಯ ಮೂಲಕವೇ ವಿಚಾರಣೆ ನಡೆಸಿದ್ದ. ತೀರ್ಪು ಪ್ರಕಟಿಸುವ ದಿನ ಆರೋಪಿಗೆ ನ್ಯಾಯಾಧೀಶರ ಆದೇಶವನ್ನು ಮಾತ್ರ ಕೇಳಲು ಅವಕಾಶ ನೀಡಲಾಗಿತ್ತು.

ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಪ್ರಮುಖ ಅಂಶಗಳು ಪ್ರಧಾನಿ ನರೇಂದ್ರ ಮೋದಿ ವಿಡಿಯೋ ಕಾನ್ಫರೆನ್ಸ್ ಪ್ರಮುಖ ಅಂಶಗಳು

ಏಪ್ರಿಲ್ ಮೊದಲ ವಾರದಿಂದ ಜೂನ್ 1ರ ತನಕ ಸಿಂಗಾಪುರದಲ್ಲಿ ಎಲ್ಲಾ ನ್ಯಾಯಾಲಯಗಳ ಕಲಾಪವನ್ನು ಮುಂದೂಡಲಾಗಿದೆ. ಒಂದು ವೇಳೆ ತುಂಬಾ ಮುಖ್ಯವಾದ ಪ್ರಕರಣವಾದರೆ ಮಾತ್ರ ಝೂಮ್ ಕರೆ ಮೂಲಕ ಅದರ ವಿಚಾರಣೆ ನಡೆಸಲಾಗುತ್ತದೆ.

ಮಾದಕ ವಸ್ತುಗಳ ಕಳ್ಳ ಸಾಗಣೆ ವಿಚಾರದಲ್ಲಿ ಸಿಂಗಾಪುರದಲ್ಲಿ ಕಟ್ಟು ನಿಟ್ಟಿನ ಕ್ರಮವಿದೆ. ಇಂತಹ ಆರೋಪ ಸಾಬೀತಾದ ವಿದೇಶಿಯರು ಸೇರಿದಂತೆ ನೂರಾರು ಜನರನ್ನು ಇದುವರೆಗೂ ಗಲ್ಲಿಗೆ ಹಾಕಲಾಗಿದೆ. ಈಗ ಝೂಮ್ ಕಾಲ್ ಮೂಲಕವೇ ಅಪರಾಧಿಗೆ ಗಲ್ಲು ಶಿಕ್ಷೆ ಪ್ರಕಟವಾಗಿದೆ.

ಕೆಲವು ದಿನಗಳ ಹಿಂದೆ ನೈಜೀರಿಯಾದಲ್ಲಿಯೂ ಝೂಮ್ ಕಾಲ್ ಮೂಲಕ ಮರಣದಂಡನೆ ಶಿಕ್ಷೆ ಪ್ರಕಟ ಮಾಡಲಾಗಿತ್ತು. ಆಗ ಮಾನವ ಹಕ್ಕುಗಳ ಆರೋಗ ಈ ಕುರಿತು ಆಕ್ಷೇಪಣೆಯನ್ನು ಎತ್ತಿತ್ತು.

English summary
Singapore supreme court announced death sentence to man for his role in drug deal. Man sentenced to death via a Zoom video call.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X