• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

2013ರಲ್ಲೇ ಕೊರೊನಾ ಬರಲಿದೆ ಎಂದಿದ್ದ ಟ್ವೀಟ್ ಪತ್ತೆ

|

ಬೆಂಗಳೂರು, ಮಾರ್ಚ್ 17: ಸಾಂಕ್ರಾಮಿಕ ಪಿಡುಗು ಕೊರೊನಾವೈರಸ್ ಹರಡುತ್ತಿದ್ದು, ಎಲ್ಲೆಡೆ ವೈರಸ್ ಕುರಿತ ಚರ್ಚೆ ನಡೆಯುತ್ತಿದೆ. ಸಾಮಾಜಿಕ ಜಾಲ ತಾಣಗಳಲ್ಲಂತೂ ಜಾಗೃತಿ ಸಂದೇಶದ ಜೊತೆಗೆ ಬೇಕಾದ್ದು, ಬೇಡದ್ದು ಎಲ್ಲವೂ ಸಿಗುತ್ತಿದೆ. ಈ ನಡುವೆ ಕೊರೊನಾ ಬಗ್ಗೆ ಈ ಮೊದಲು ಯಾರೆಲ್ಲ ತಿಳಿಸಿದ್ದರು ಎಂಬುದು ಬಹುದೊಡ್ಡ ಚರ್ಚೆ ವಿಷಯ.

ಆ ಕಾದಂಬರಿಯಲ್ಲಿ ಈ ಬಗ್ಗೆ ಉಲ್ಲೇಖವಿದೆ, ಕನ್ನಡ ಮಾಸ ಪತ್ರಿಕೆಯಲ್ಲಿ ಬಂದಿದೆ. ಕಿಂಗ್ ಕಾದಂಬರಿಯಲ್ಲಿ ಈ ಬಗ್ಗೆ ಹೇಳಿದ್ದ ಎಂದು ಅನೇಕರು ಹಂಚಿಕೊಂಡಿದ್ದಾರೆ. ಇದೇ ರೀತಿ ವ್ಯಕ್ತಿಯೊಬ್ಬ 7 ವರ್ಷ ಮುಂಚೆ ಮಾಡಿದ್ದ ಟ್ವೀಟ್ ಈಗ ಮತ್ತೆ ಧುತ್ತೆಂದು ಎದ್ದು ಬಂದಿದೆ.

1978ರಲ್ಲೇ ಕೊರೊನಾ ವೈರಸ್ ಬಗ್ಗೆ ಸುಳಿವು ನೀಡಿದ್ದ ಕಿಂಗ್

ಮಾರ್ಕೊ(ಮಾರ್ಕೊ ಅಕೊರ್ಟೆಸ್) ಎಂಬಾತ ಜೂನ್ 3, 2013ರಲ್ಲಿ ಟ್ವೀಟ್ ಮಾಡಿ ಕೊರೊನಾ ವೈರಸ್ ಇಟ್ಸ್ ಕಮಿಂಗ್ ಎಂದಿದ್ದ, ಒಮ್ಮೆ ಟ್ವೀಟ್ ಮಾಡಿದ್ದು ಮತ್ತೆ ತಿದ್ದುವುದಕ್ಕೆ ಆಗುವುದಿಲ್ಲ. ಫೋಟೋಶಾಪ್ ಮಾಡಿದರೆ ಮಾತ್ರ ಸಾಧ್ಯ.

ನೆಟಿಜನ್ಸ್ ಈ ಟ್ವೀಟ್ ಬಗ್ಗೆ ಚರ್ಚಿಸುತ್ತಿದ್ದು, ಆತ ಹೇಳಿದ್ದರಲ್ಲಿ ಅಚ್ಚರಿಯೇನಿಲ್ಲ, ಕೊರೊನಾವೈರಸ್ ಫ್ಯಾಮಿಲಿ ಹೊಸದೇನಲ್ಲ. ಈಗ ಚಾಲ್ತಿಯಲ್ಲಿರುವ ಮಾರಣಾಂತಿಕ ವೈರಸ್ ಗೂ ಸಾರ್ಸ್ ಗೂ ಹೋಲಿಕೆಯಿದ್ದು, ನೋವಲ್ ಕೊರೊನಾವೈರಸ್ ಇದಾಗಿದ್ದು, ಇದರಿಂದ ಹರಡುವ ಕಾಯಿಲೆಗೆ ಕೋವಿಡ್19 ಎಂದು ಹೆಸರು, ಆತ ನಿಜವಾಗಲೂ 2019ರ ಕೊವಿಡ್ ಬಗ್ಗೆ ಹೇಳಿದ್ನಾ ಎಂಬುದು ಇನ್ನೂ ಸ್ಪಷ್ಟವಾಗಿಲ್ಲ ಎಂದಿದ್ದಾರೆ.

ಕೊರೊನಾ ವೈರಸ್ ಬಗ್ಗೆ 12 ವರ್ಷದ ಹಿಂದೆಯೇ ಸುಳಿವು ನೀಡಿತ್ತಾ ಆ ಪುಸ್ತಕ?

ಭಾರತದಲ್ಲಿ ಕೊರೊನಾವೈರಸ್ ಭೀತಿ ವ್ಯಾಪಿಸುತ್ತಲೇ ಇದೆ. ಕೇರಳ, ಮಹಾರಾಷ್ಟ್ರದಲ್ಲಿ ತೀವ್ರತೆ ಹೆಚ್ಚಾಗಿದೆ. ಕರ್ನಾಟಕ,ದೆಹಲಿ ಹಾಗೂ ಮಹಾರಾಷ್ಟ್ರದಲ್ಲಿ ಸಾವಿನ ನೋವು ಕಂಡು ಬಂದಿದೆ. ಪ್ರಸ್ತುತ ಕೇರಳದಲ್ಲಿ ಒಟ್ಟು 24 ಜನರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಹೊಸದಾಗಿ ಮೂರು ಪ್ರಕರಣಗಳೊಂದಿಗೆ ದೇಶದಲ್ಲಿ ಒಟ್ಟಾರೆ ಈ ಸೋಂಕು ತಗುಲಿದವರ ಸಂಖ್ಯೆ 130ಕ್ಕೆ ಏರಿಕೆ ಆಗಿದೆ. ಮಾರ್ಚ್ 17ರ ಈ ಸಮಯಕ್ಕೆ ಭಾರತದಲ್ಲಿ ಮೂವರು ಕೊವಿಡ್19ಕ್ಕೆ ಬಲಿಯಾಗಿದ್ದಾರೆ.

English summary
Amid the worldwide outbreak of the COVID-19, several unusual events coming in related to the pandemic disease on the internets. Recently, netizens were surprised to see a a seven years ago post, where a man on Twitter had warned the world about Coronavirus.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Oneindia sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Oneindia website. However, you can change your cookie settings at any time. Learn more
X