ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಕ್ಯಾನ್ಸರ್ ವಿರುದ್ಧ ಸಹೋದರನ ಸವಾಲ್!

By ಐಸಾಕ್ ರಿಚರ್ಡ್, ಮಂಗಳೂರು
|
Google Oneindia Kannada News

ತಂದೆ-ತಾಯಿ, ಸೋದರ-ಸೋದರಿ, ನೆರಮನೆಯವರ ನಡುವನ ಮಾನವೀಯ ಸಂಬಂಧಗಳು ಜಗತ್ತಿನಲ್ಲಿಂದು ಶಿಥಿಲಗೊಳ್ಳುತ್ತಿರುವ ಈ ಕಾಲಘಟ್ಟದಲ್ಲಿ ಸಹೋದರತೆಯ ಘನತೆ ಎತ್ತಿ ಹಿಡಿಯುವ ಕಾರ್ಯವನ್ನು ಆಸ್ಟ್ರಿಯಾದ ತಾಹಿರ್ ಅಬುದ್ (ಅಲಿ) ಮಾಡಿದ್ದಾರೆ.

ಜರ್ಮನಿಯಲ್ಲಿ ವಾಸಿಸುತ್ತಿರುವ ಸೋದರಿ ಝೂಸನ್ ಸ್ತನ ಕ್ಯಾನ್ಸರ್ ನಿಂದ ಬಳಲುತ್ತಿರುವುದಾಗಿ ತಿಳಿದು ಬೇಸತ್ತ 49ರ ಹರೆಯದ ಸೋದರ ತಾಹಿರ್ ಅಬುದ್, ತನ್ನ ಸೋದರಿ ಗುಣಮುಖರಾಗಲು ಕಾಲ್ನಡಿಗೆಯಲ್ಲಿ ಉಮ್ರಾ ಯಾತ್ರೆ (ಮೆಕ್ಕಾ) ಮಾಡುವುದಾಗಿ ದೇವರ ಹೆಸರಲ್ಲಿ ಪ್ರತಿಜ್ಞೆ ಮಾಡಿದ್ದರು.[ಲಾಭದ ಹಂಗಿಲ್ಲದೆ ಹೊಟ್ಟೆ ತುಂಬಿಸುವ ಪಡ್ಡು ಸ್ಟಾಲ್ ಅಜ್ಜಿ!]

12 ದೇಶಗಳನ್ನು ದಾಟಿ, 8,150 ಕಿ.ಮೀ. ಕಾಲ್ನಡಿಗೆಯಲ್ಲಿ ಕ್ರಮಿಸಿ, ಮೆಕ್ಕಾ ಯಾತ್ರೆ ಪೂರ್ಣಗೊಳಿಸಿರುವ ರಾಹಿರ್, ಸೋದರಿಗೆ ನೀಡಿದ ಪ್ರತಿಜ್ಞೆಯನ್ನು ಉಳಿಸಿಕೊಂಡಿದ್ದಾರೆ. ತನ್ನ ಎಲ್ಲಾ ದಿನಗಳ ಪ್ರಯಾಣದ ವಿವರಗಳನ್ನು ತನ್ನ ವೆಬ್ ಸೈಟ್ ಮತ್ತು ಬ್ಲಾಗ್‌ನಲ್ಲಿ ಹಾಕಿ ತಾಹಿರ್ ಈ ತಮ್ಮ ಸಾಧನೆಯನ್ನು ಜಗತ್ತಿಗೆ ತಿಳಿಯುವಂತೆ ಮಾಡಿದ್ದಾರೆ. [ಮಾರಣಾಂತಿಕ ಕ್ಯಾನ್ಸರ್ ಮೆಟ್ಟಿನಿಂತ ಹಿರಿಯಜ್ಜನ ಯಶೋಗಾಥೆ]

ತಾಹಿರ್ ಅಬುದ್ ಆಸ್ಟ್ರಿಯಾ (ಗ್ರಾಝ್), ಸ್ಲೊವೇನಿಯಾ, ಕ್ರೊವೇಷಿಯಾ, ಬೋಸ್ನಿಯಾ, ಮೋಂಟೆನೆಗ್ರೋ, ಅಲ್ ಬೇನಿಯಾ, ಮೆಸೆಡೋನಿಯಾ, ಬಲ್ಗೇರಿಯಾ, ಟರ್ಕಿ, ಇರಾನ್, ಒಮನ್ ದೇಶಗಳಲ್ಲಿ ಸಂಚಾರ ನಡೆಸಿದ್ದು, ಸ್ತನ ಕ್ಯಾನ್ಸರ್ ಬಗ್ಗೆ ಜನರಿಗೆ ಜಾಗೃತಿ ಮೂಡಿಸುವ ಕೆಲಸವನ್ನು ಮಾಡಿದ್ದಾರೆ. ತಾಹಿರ್ ಸಾಧನೆಯ ವಿವರಗಳು ಇಲ್ಲಿವೆ ನೋಡಿ....

ತಾಹಿರ್ ಅಬುದ್ ಸಂಕ್ಷಿಪ್ತ ಪರಿಚಯ

ತಾಹಿರ್ ಅಬುದ್ ಸಂಕ್ಷಿಪ್ತ ಪರಿಚಯ

ಹೆಸರು : ತಾಹಿರ್ ಅಬುದ್ (ಅಲಿ) (49) ವರ್ಷ
ರಾಷ್ಟ್ರೀಯತೆ : ಆಸ್ಟ್ರಿಯಾ
ಜನನ ಸ್ಥಳ : ಡೂಯಿಸ್ ಬರ್ಗ್, ಜರ್ಮನಿ
ವಾಸ: 1979 ರಿಂದ ಆಸ್ಟ್ರಿಯಾ
ಉದ್ಯೋಗ : ವಾಟರ್ ಟ್ಯಾಂಕ್ ನಿರ್ಮಾಣ ಸಂಸ್ಥೆಯಲ್ಲಿ ಉನ್ನತ ಹುದ್ದೆ

ಮೆಕ್ಕಾಕ್ಕೆ ಪಾದಯಾತ್ರೆ ಮಾಡುವುದಾಗಿ ಪ್ರತಿಜ್ಞೆ

ಮೆಕ್ಕಾಕ್ಕೆ ಪಾದಯಾತ್ರೆ ಮಾಡುವುದಾಗಿ ಪ್ರತಿಜ್ಞೆ

ಜರ್ಮನಿಯಲ್ಲಿ ವಾಸಿಸುತ್ತಿರುವ ಸೋದರಿ ಝೂಸನ್ ಸ್ತನ ಕ್ಯಾನ್ಸರ್‌ನಿಂದ ಬಳಲುತ್ತಿರುವುದಾಗಿ ತಿಳಿದಾಗ ಬೇಸತ್ತ ತಾಹಿರ್ ಅಬುದ್, ತನ್ನ ಸೋದರಿ ಗುಣಮುಖರಾಗಲು ಕಾಲ್ನಡಿಗೆಯಲ್ಲಿ ಉಮ್ರಾ ಯಾತ್ರೆ (ಮೆಕ್ಕಾ) ಮಾಡುವುದಾಗಿ ದೇವರ ಹೆಸರಲ್ಲಿ ಪ್ರತಿಜ್ಞೆ ಮಾಡಿದ್ದರು. [ತಾಹಿರ್ ವೆಬ್ ಸೈಟ್]

ಪ್ರತಿಜ್ಞೆ ಉಳಿಸಲು ಕೆಲಸ ಬಿಟ್ಟ ತಾಹಿರ್

ಪ್ರತಿಜ್ಞೆ ಉಳಿಸಲು ಕೆಲಸ ಬಿಟ್ಟ ತಾಹಿರ್

ತನ್ನ ಪ್ರತಿಜ್ಞೆಯನ್ನು ಕಾರ್ಯಗತಗೊಳಿಸಲು ನಿರ್ಧಾರ ಕೈಗೊಂಡ ತಾಹಿರ್ ಕೆಲಸಕ್ಕೆ ರಾಜೀನಾಮೆ ನೀಡಿ 2014 ರ ಜೂನ್ 25 ರಂದು ಆಸ್ಟ್ರಿಯಾದ ಗ್ರಾಝ್ ನಿಂದ ಪಾದಯಾತ್ರೆ ಆರಂಭಿಸಿದರು. 2015ರ ಮೇ ತಿಂಗಳಲ್ಲಿ ಯಾತ್ರೆ ಅಂತ್ಯಗೊಂಡಿದೆ.

12 ದೇಶಗಳನ್ನು ದಾಟಿದ ತಾಹಿರ್

12 ದೇಶಗಳನ್ನು ದಾಟಿದ ತಾಹಿರ್

ಮೇ 21 ಕ್ಕೆ ಮದೀನಾ ತಲುಪಿರುವ ತಾಹಿರ್ 12 ದೇಶಗಳಲ್ಲಿ ಸಂಚಾರ ನಡೆಸಿದ್ದಾರೆ. ತಾನು ನಡೆಯುವ ದಾರಿಯ ನಕಾಶೆಯನ್ನು ಹಿಡಿದು, ತನ್ನ ಎಲ್ಲಾ ದಿನಗಳ ಪ್ರಯಾಣದ ವಿವರಗಳನ್ನು ತನ್ನ ವೆಬ್ ಸೈಟ್, ಬ್ಲಾಗ್ ಹಾಗೂ ಫೇಸ್ ಬುಕ್ ಖಾತೆಯಲ್ಲಿ ಹಾಕಿದ್ದಾರೆ. ಲಾಲ ಎಂಬ ಪ್ರದೇಶದಲ್ಲಿ ಸೌದಿ ಸರ್ಕಾರ ಕಾಲ್ನಡಿಗೆ ಯಾತ್ರೆಗೆ ನಿಷೇಧ ಹಾಕಿರುವ ಹಿನ್ನಲೆಯಲ್ಲಿ ಸಾರ್ವಜನಿಕ ಸಾರಿಗೆ ಮೂಲಕ ಸಂಚಾರ ನಡೆಸಿದ್ದಾರೆ.

'ಇರಾನ್ ಬಗೆಗಿನ ತಪ್ಪುಕಲ್ಪನೆ ದೂರವಾಯಿತು'

'ಇರಾನ್ ಬಗೆಗಿನ ತಪ್ಪುಕಲ್ಪನೆ ದೂರವಾಯಿತು'

ಇರಾನ್ ದೇಶದ ಬಗ್ಗೆ ಅಪಾರವಾದ ತಪ್ಪು ಕಲ್ಪನೆಗಳಿತ್ತು. ಆದರೆ, ಅಲ್ಲಿನ ಜನರ ಪ್ರೀತಿ, ವಿಶ್ವಾಸ ಹಾಗೂ ಅಪರಿಚಿತರನ್ನು ಕಂಡಾಗ ಅಲ್ಲಿನ ಜನರು ಸ್ವಾಗತಿಸುವ ಮನೋಭಾವವನ್ನು ಇಷ್ಟವಾಯಿತು. ಇರಾನ್ ಬಗ್ಗೆ ಇದ್ದ ತಪ್ಪು ಕಲ್ಪನೆ ದೂರವಾಯಿತು ಎಂದು ತಾಹಿರ್ ಹೇಳಿಕೊಂಡಿದ್ದಾರೆ.

ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ

ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ

ತನ್ನ ಪ್ರಯಾಣದುದ್ದಕ್ಕೂ ಸ್ತನ ಕ್ಯಾನ್ಸರ್ ಬಗ್ಗೆಯೂ ಹಲವು ಕಡೆ ಜಾಗೃತಿ ಮೂಡಿಸುವ ಕೆಲಸವನ್ನೂ ತಾಹಿರ್ ಮಾಡಿದ್ದಾರೆ. ಒಮನ್ ದೇಶದಲ್ಲಿ ಕಾಲ್ನಡಿಗೆ ಪ್ರಯಾಣದಲ್ಲಿದಾಗ ಒಮನ್ ಸರ್ಕಾರದ ಸಾರ್ವಜನಿಕ ಸಂಪರ್ಕಾಧಿಕಾರಿ ಡಾ. ಅಬ್ದುಲ್ ಮುನಿಮ್ ಬಿನ್ ಮನ್ಸೂರ್ ಅಲ್ ಹಸನಿ, ತಾಹಿರ್ ಉದ್ದೇಶ ಈಡೇರಲಿ ಎಂದು ಹಾರೈಸಿ, ಸನ್ಮಾನಿಸಿದ್ದರು.

ತಾಹಿರ್ ಸಂಚರಿಸಿರುವ ದೇಶಗಳು

ತಾಹಿರ್ ಸಂಚರಿಸಿರುವ ದೇಶಗಳು

ಆಸ್ಟ್ರಿಯಾ (ಗ್ರಾಝ್), ಸ್ಲೊವೇನಿಯಾ, ಕ್ರೊವೇಷಿಯಾ, ಬೋಸ್ನಿಯಾ, ಮೋಂಟೆನೆಗ್ರೋ, ಅಲ್ ಬೇನಿಯಾ, ಮೆಸೆಡೋನಿಯಾ, ಬಲ್ಗೇರಿಯಾ, ಟರ್ಕಿ, ಇರಾನ್, ಒಮನ್. ತನ್ನ ಕಾಲ್ನಡಿಗೆ ಪ್ರಯಾಣದಲ್ಲಿದ್ದ ವೇಳೆ ತಾಹಿರ್, 16 ಕೆ.ಜಿ ತೂಗುತ್ತಿದ್ದ ಅವಶ್ಯಕ ಸಾಮಾಗ್ರಿ ಹಾಗೂ ಸಣ್ಣ ಟೆಂಟ್ ಹಾಕುವ ವಸ್ತುಗಳನ್ನೊಂಡ ಬ್ಯಾಗ್‍ನೊಂದಿಗೆ 6 ಜೋಡಿ ಶೂ ಹಾಗೂ ವಾಕಿಂಗ್ ಸ್ಟಿಕ್‍ಗಳನ್ನು ಕೈಯಲ್ಲಿಡಿದುಕೊಂಡು ಪ್ರಯಾಣಿಸಿದ್ದರು.

English summary
Austrian Thair Abud (49) a man on a mission. A journey that He began on foot has come to end. Thair covered more than 8,000 KM journey on foot to fulfill their promise made to his sister battling breast cancer. Thair begins his journey on foot from his residence in Graz, Austria to Makkah.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X