• search
  • Live TV
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts

ನೀರು ನೀಡಿದ ಹೋಟೆಲ್ ಸಪ್ಲೈಯರ್ ಗೆ 10 ಸಾವಿರ ಡಾಲರ್ ಭಕ್ಷೀಸು

|

ನೀರು ನೀಡಿದ ಹೋಟೆಲ್ ಸಪ್ಲೈಯರ್ ಗೆ ಯಾರಾದರೂ ಟಿಪ್ಸ್ ಕೊಟ್ಟರೆ ಎಷ್ಟು ಕೊಡಬಹುದು? ಒಂದು ಊಹೆ ಮಾಡಿ. ಸರಿ, ಇನ್ನೊಮ್ಮೆ ಅಂದಾಜು ಮಾಡಿ. ಕಳೆದ ಶನಿವಾರ ಅಮೆರಿಕ ಉತ್ತರ ಕರೋಲಿನಾದ ಸಪ್ಲೈಯರ್ ವೊಬ್ಬರಿಗೆ ಎರಡು ಬಾಟಲೋ ಅಥವಾ ಲೋಟವೋ ನೀರು ನೀಡಿದ್ದಕ್ಕೆ ಪ್ರತಿಯಾಗಿ ಸಿಕ್ಕ ಟಿಪ್ಸ್ 10 ಸಾವಿರ ಅಮೆರಿಕನ್ ಡಾಲರ್ ( ಭಾರತದ ಲೆಕ್ಕಾಚಾರದಲ್ಲಿ 7,30,000 ರುಪಾಯಿ).

ಬಹಳ ರುಚಿಯಾದ ನೀರು ನೀಡಿದ್ದಕ್ಕೆ ಧನ್ಯವಾದ ಎಂದು ತಿಳಿಸಿ, ಆ ಭಕ್ಷೀಸು ನೀಡಿದ ವ್ಯಕ್ತಿ ಅಲ್ಲಿಂದ ನಿರ್ಗಮಿಸಿದ್ದಾರೆ. ಈ ಬಗ್ಗೆ ಫಾಕ್ಸ್ ನ್ಯೂಸ್ ವರದಿ ಮಾಡಿದೆ. ಇಷ್ಟು ದೊಡ್ಡ ಮೊತ್ತದ ಟಿಪ್ಸ್ ಪಡೆದವರು ಅಲೈನಾ ಕಸ್ಟರ್, ಗ್ರಿನ್ ವಿಲ್ಲೆಯಲ್ಲಿರುವ ಸೂಪ್ ಡಾಗ್ಸ್ ರೆಸ್ಟೋರೆಂಟ್ ನ ಉದ್ಯೋಗಿ.

ಕೆಲಸಗಾರರಿಗೆ ಬೋನಸ್ ಆಗಿ ಕೊಟ್ಟಿದ್ದು ಮರ್ಸಿಡಿಸ್ ಕಾರು, ಕೊಟ್ಟವರು ಯಾರು?

"ಇದೇನು ನಿಜವಾದ ನೋಟುಗಳೇನಾ ಎಂದು ಅರೆ ಕ್ಷಣ ಅನುಮಾನ ಪಟ್ಟೆ. ಎಲ್ಲವೂ ನೂರರ ಲೆಕ್ಕದಲ್ಲಿ ಇದ್ದ ಡಾಲರ್ ಗಳು. ನಾನು ನಡುಗುತ್ತಾ ಇದ್ದೆ. ಏನಿದು ಅಂತ ಪದೇಪದೇ ಕೇಳಿಕೊಂಡೆ. ಯಾರೋ ನನ್ನ ಜೊತೆ ತಮಾಷೆ ಮಾಡ್ತಿದ್ದಾರೇನೋ ಅಂದುಕೊಂಡೆ" ಎಂದಿದ್ದಾರೆ ಕಸ್ಟರ್.

ಹೀಗೆ ದೊಡ್ಡ ಮೊಟ್ಟದ ಭಕ್ಷೀಸು ನೀಡಿದ ವ್ಯಕ್ತಿಯು ಯೂಟ್ಯೂಬ್ ನಲ್ಲಿ 'ಮಿಸ್ಟರ್ ಬೀಸ್ಟ್' ಯೂಸರ್ ನೇಮ್ ನಲ್ಲಿ ಹೆಸರುವಾಸಿ. ಅವರಿಗೆ 89 ಲಕ್ಷ ಚಂದಾದಾರರಿದ್ದಾರೆ. ಕಸ್ಟರ್ ಆ ವೇಳೆ ಹೇಗೆ ಪ್ರತಿಕ್ರಿಯಿಸಬಹುದು ಎಂಬುದನ್ನು ಚಿತ್ರೀಕರಿಸುವುದಕ್ಕೆ ಮಿ.ಬೀಸ್ಟ್ ಕಡೆಯ ಇಬ್ಬರು ಅಲ್ಲೇ ಇದ್ದು, ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದಾರೆ. ಅವರೆಲ್ಲರನ್ನೂ ತಬ್ಬಿಕೊಂಡು, ಕಸ್ಟರ್ ತಮ್ಮ ಕೃತಜ್ಞತೆ ತಿಳಿಸಿದ್ದಾರೆ.

ನೌಕರರಿಗೆ ದೀಪಾವಳಿ ಬೋನಸ್ 400 ಫ್ಲ್ಯಾಟ್, 1,260 ಕಾರು

ನಾನು ಬಹಳ ಅದೃಷ್ಟವಂತೆ. ಸೂಪ್ ಡಾಗ್ಸ್ ನಲ್ಲಿ ಕೆಲಸ ಮಾಡುವ ಬಹುತೇಕರು ನಾವು ಕಾಲೇಜಿನ ಫೀ ಮತ್ತಿತರ ಖರ್ಚಿಗಾಗಿ ಶ್ರಮ ಪಡುತ್ತೀವಿ. ಇದನ್ನು ನಾವೆಲ್ಲ ಹಂಚಿಕೊಳ್ತೀವಿ. ಬಹಳ ಸಹಾಯ ಆಗುತ್ತದೆ ಎಂದಿದ್ದಾರೆ ಕಸ್ಟರ್. ರೆಸ್ಟೋರೆಂಟ್ ನ ಫೇಸ್ ಬುಕ್ ಪುಟದಲ್ಲಿ ಆ ಫೋಟೋಗಳನ್ನು ಹಾಕಲಾಗಿದೆ. ಮಿಸ್ಟರ್ ಬೀಸ್ಟ್ ದಾನಕ್ಕೆ ಬಹಳ ಮೆಚ್ಚುಗೆ ವ್ಯಕ್ತವಾಗುತ್ತಿದೆ.

ಅಜ್ಜನ ಸ್ವಾಭಿಮಾನ, ಯುವಕನ ಮಾನವೀಯತೆ, ಕಣ್ಣೀರುಕ್ಕಿಸುವ ವೈರಲ್ ವಿಡಿಯೋ

ಕಸ್ಟರ್ ಆ ಕ್ಷಣಕ್ಕೆ ಹೇಗೆ ಪ್ರತಿಕ್ರಿಯಿಸಿದರು ಎಂಬ ಬಗ್ಗೆ ಮಂಗಳವಾರ ಸಂಜೆಯ ತನಕ ಮಿಸ್ಟರ್ ಬೀಸ್ಟ್ ಯೂಟ್ಯೂಬ್ ಖಾತೆಯಲ್ಲಿ ವಿಡಿಯೋ ಪೋಸ್ಟ್ ಆಗಿರಲಿಲ್ಲ.

English summary
Saturday, a server at a restaurant in North Carolina was given a $10,000 cash tip by a customer who ordered just two waters. "Thanks for the delicious water," read the note that was left along with the generous tip. According to Fox News, Alaina Custer, an employee of Sup Dogs in Greenville, was the lucky recipient of the tip.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X