ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ದಂಪತಿಯ 'ಅಮರ' ಪ್ರೀತಿ ಕೊಂದ ಕೊರೊನಾ: ಶಾಪವಿಟ್ಟ ನೆಟ್ಟಿಗರು

|
Google Oneindia Kannada News

ದೆಹಲಿ, ಮಾರ್ಚ್ 17: ಕೊರೊನಾ ವೈರಸ್‌ ಹರಡುವಿಕೆಯಿಂದ ಅನೇಕರು ಪ್ರಾಣವನ್ನು ಕಳೆದುಕೊಳ್ಳುತ್ತಿದ್ದಾರೆ. ಉಳಿದವರು ಪ್ರಾಣವನ್ನು ಉಳಿಸಿಕೊಳ್ಳಲು ಪ್ರೀತಿ, ಪ್ರೇಮ, ಸಂಬಂಧಗಳನ್ನೇ ಮುರಿದುಕೊಳ್ಳುತ್ತಿದ್ದಾರೆ. ಮನೆಯವರು ಸತ್ತರೂ ಅಂತ್ಯಕ್ರಿಯೆಗೆ ಆಗಮಿಸಲು ಸಾಧ್ಯವಾಗದೇ ವಿದೇಶದಲ್ಲಿ ಸಿಲುಕಿಕೊಂಡಿರುವವರ ಸುದ್ದಿ ಕಾಣಬಹುದು.

ಕೇರಳದ ತಿರುವನಂತಪುರಂನಲ್ಲಿ ತಂದೆಯ ಅಂತ್ಯಕ್ರಿಯೆಗೆ ಹೋಗಲಾರದೆ ಐಸೋಲೇಶನ್ ವಾರ್ಡ್‌ನಲ್ಲಿ ಕೂತು ವಿಡಿಯೋ ಕಾಲ್ ಮೂಲಕ ಅಂತಿಮ ಕ್ಷಣ ನೋಡಿದ ಮಗನ ಕರುಣಾಜನಕ ಕಥೆ ಕಣ್ಣ ಮುಂದಿದೆ. ಹೀಗೆ, ಕೊರೊನಾ ವೈರಸ್ ಸೋಂಕು ಹರುಡವಿಕೆಯಿಂದ ಅದೇಷ್ಟೋ ಪ್ರೀತಿ, ಸಂಬಂಧ ದೂರವಾಗಿದೆ.

US ನಿಂದ ಬಂದಿದ್ದ ಟೆಕ್ಕಿ ಬೆಂಗಳೂರಲ್ಲಿ ಎಲ್ಲೆಲ್ಲಿ ಓಡಾಡಿದ್ದ? ಕೊರೊನಾ ಗಂಡಾಂತರ ಯಾರ್ಯಾರಿಗೆ ಕಾದಿದೆ?US ನಿಂದ ಬಂದಿದ್ದ ಟೆಕ್ಕಿ ಬೆಂಗಳೂರಲ್ಲಿ ಎಲ್ಲೆಲ್ಲಿ ಓಡಾಡಿದ್ದ? ಕೊರೊನಾ ಗಂಡಾಂತರ ಯಾರ್ಯಾರಿಗೆ ಕಾದಿದೆ?

ಇದೀಗ, ಇಂತಹದ್ದೇ ಮನಮುಟ್ಟುವ ಪ್ರೇಮಕಥೆಯೊಂದು ಕೆನಡಾದಲ್ಲಿ ವರದಿಯಾಗಿದೆ. ಹಿರಿಯ ವೃದ್ದನೊಬ್ಬ ತನ್ನ ಪತ್ನಿಗೆ ವಿವಾಹ ವಾರ್ಷಿಕೋತ್ಸವದ ಶುಭಾಶಯ ತಿಳಿಸಲು ಸಾಧ್ಯವಾಗದೇ ಒದ್ದಾಡಿದ ಪರಿ ಮನಕುಲುಕುತ್ತಿದೆ. ಏನಾಯ್ತು ಮುಂದೆ ಓದಿ...

ಪತ್ನಿಗಾಗಿ ಕಾದು ಕುಳಿತ ವ್ಯಕ್ತಿ

ಪತ್ನಿಗಾಗಿ ಕಾದು ಕುಳಿತ ವ್ಯಕ್ತಿ

ಕೆನಡಾದ ವರ್ನನ್ ಮೂಲದ ಬಾಬ್ ಶೆಲ್ಲಾರ್ಡ್ ತಮ್ಮ 67ನೇ ವರ್ಷದ ವಿವಾಹ ವಾರ್ಷಿಕೋತ್ಸವವನ್ನು ಇತ್ತೀಚಿಗಷ್ಟೆ ಆಚರಿಸಿಕೊಂಡಿದ್ದಾರೆ. ಆದರೆ, ಈ ಸಂಭ್ರಮ ಅವರ ಪಾಲಿಗೆ ಖುಷಿಗಿಂತ ನೋವು ಹೆಚ್ಚು ಕೊಟ್ಟಿದೆ. ಹೌದು, ಕೊರೊನಾ ವೈರಸ್‌ ಭೀತಿಯಿಂದ ಪತ್ನಿಯನ್ನು ಭೇಟಿ ಮಾಡಲು ಕೂಡ ಸಾಧ್ಯವಾಗಲಿಲ್ಲ ಎಂಬ ಬೇಸರ ವ್ಯಕ್ತಪಡಿಸಿದ್ದಾರೆ.

ನರ್ಸಿಂಗ್ ಹೋಮ್ ಬಳಿ ನಡೆದ ಘಟನೆ

ನರ್ಸಿಂಗ್ ಹೋಮ್ ಬಳಿ ನಡೆದ ಘಟನೆ

ವಿವಾಹ ವಾರ್ಷಿಕೋತ್ಸವ ಪ್ರಯುಕ್ತ, ಪತ್ನಿಯನ್ನು ಭೇಟಿ ಮಾಡಿ, ವಿಶ್ ಮಾಡಲು ಆಕೆ ಆಕೆಯನ್ನು ಇರಿಸಲಾಗಿದ್ದ ನರ್ಸಿಂಗ್ ಹೋಮ್ ಬಳಿ ಬಾಬ್ ಶೆಲ್ಲಾರ್ಡ್ ಹೋಗಿದ್ದಾರೆ. ಆದರೆ, ಕೊರೊನಾ ಭೀತಿಯಲ್ಲಿ ನರ್ಸಿಂಗ್ ಹೋಮ್ ಸಿಬ್ಬಂಧಿ ಬಾಬ್ ಶೆಲ್ಲಾರ್ಡ್ ಪತ್ನಿಯನ್ನು ಹೊರಗೆ ಬಿಡಲಿಲ್ಲವಂತೆ. ಹಾಗಾಗಿ, ನರ್ಸಿಂಗ್ ಹೋಮ್ ಮುಂದೆಯೆ ಕುಳಿತು ವಿಶೇಷವಾಗಿ ಪ್ರೀತಿಯ ಸಂದೇಶ ರವಾನಿಸಿದ್ದಾರೆ.

ಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯಭಾರತದಲ್ಲಿ ವರ್ಕೌಟ್ ಆಗ್ತಿಲ್ಲ 'WORK FROM HOME', ವರದಿಗಳು ಬಿಚ್ಚಿಟ್ಟ ಸತ್ಯ

ಐ ಲವ್ ಯೂ ಹೇಳಿದ ಬಾಬ್

ಐ ಲವ್ ಯೂ ಹೇಳಿದ ಬಾಬ್

ನರ್ಸಿಂಗ್ ಹೋಮ್ ಮುಂದೆ ಕುಳಿತುಕೊಂಡ ಬಾಬ್ ಶೆಲ್ಲಾರ್ಡ್ ''67 ವರ್ಷದಿಂದ ಪ್ರೀತಿಸುತ್ತಿದ್ದೇನೆ, ಈಗಲೂ ಪ್ರೀತಿಸುತ್ತೇನೆ. ವಿವಾಹ ವಾರ್ಷಿಕೋತ್ಸವದ ಶುಭಾಶಯಗಳು (I've loved you 67 years and still do. Happy Anniversary) ಎಂದು ಬರೆದು ಪತ್ನಿಗೆ ತೋರಿಸುವ ಪ್ರಯತ್ನ ಮಾಡಿದ್ದಾರೆ.

ಅಲ್ಲಿಂದಲೇ ಮುತ್ತಿಟ್ಟ ಪತ್ನಿ

ಅಲ್ಲಿಂದಲೇ ಮುತ್ತಿಟ್ಟ ಪತ್ನಿ

ಪತ್ನಿ ನ್ಯಾನ್ಸಿ ತಂಗಿದ್ದ ಕೋಣೆಗೆ ಕಾಣಿಸುವಂತೆ ಫಲಕ ಹಿಡಿದಿದ್ದ ಬಾಬ್ ಶೆಲ್ಲಾರ್ಡ್ ಗೆ ಪತ್ನಿ ಪ್ರತಿಕ್ರಿಯಿಸಿದ್ದಾಳೆ. ಕಿಟಕಿಯಿಂದ ಪತ್ನಿಗೆ ಶುಭಾಶಯ ತಿಳಿಸಿದ ನ್ಯಾನ್ಸಿ, ಅಲ್ಲಿಂದಲೇ ಮುತ್ತು ನೀಡಿ ಭಾವುಕರಾಗಿದ್ದಾರೆ.

ತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕುತಂದೆಯಿಂದಲೇ ಬಂತು 3 ವರ್ಷದ ಕಂದಮ್ಮನಿಗೆ ಕೊರೊನಾ ಸೋಂಕು

ಇದು ನನಗೆ ಕೆಟ್ಟ ಅನುಭವ

ಇದು ನನಗೆ ಕೆಟ್ಟ ಅನುಭವ

ಈ ವಿಚಾರವಾಗಿ ವೆಬ್ ಸೈಟ್ ವೊಂದಕ್ಕೆ ಪ್ರತಿಕ್ರಿಯಿಸಿರುವ ಬಾಬ್ ಶೆಲ್ಲಾರ್ಡ್ ''ಇದು ನನಗೆ ಕೆಟ್ಟ ಅನುಭವ. ಆಕೆ ನನ್ನ ಜೊತೆ ಇರಲು ಬಯಸುತ್ತೇನೆ. ಆದರೆ ಅದು ಸಾಧ್ಯವಾಗಲಿಲ್ಲ. ನನಗೆ ಬೇರೆ ಯಾರು ಬೇಡ. ನನ್ನನ್ನು ಬಿಟ್ಟು ಬೇರೆಯವರನ್ನೂ ಅವಳು ಊಹಿಸುವುದಿಲ್ಲ ಎಂದು ಬೇಸರ ಹಂಚಿಕೊಂಡಿದ್ದಾರೆ. ಇನ್ನು ಆ ದಂಪತಿಯ ಮಗಳು ಹೇಳಿರುವ ಪ್ರಕಾರ, ಇದೇ ಮೊದಲ ಸಲ ಇವರಿಬ್ಬರು ವಾರ್ಷಿಕೋತ್ಸವದ ದಿನ ದೂರವಿದ್ದಾರೆ ಎಂದಿದ್ದಾರೆ.

ಈ ದಂಪತಿ ದೂರ ಮಾಡಿದ ಕೊರೊನಾಗೆ ಶಾಪ

ಈ ದಂಪತಿ ದೂರ ಮಾಡಿದ ಕೊರೊನಾಗೆ ಶಾಪ

ಈ ದಂಪತಿಯ ಈ ವೇದನೆಯ ಕಥೆ ಕೇಳಿದ ನೆಟ್ಟಿಗರು ಭಾವುಕರಾಗಿದ್ದಾರೆ. ಇವರಿಬ್ಬರದ್ದು ಅಮರ ಪ್ರೇಮ, ಪರಿಶುದ್ಧ ಪ್ರೀತಿ, ಆದರೆ ಇಂತಹ ಪ್ರೀತಿ ದೂರ ಆಗುವುದಕ್ಕೆ ಕೊರೊನಾ ಕಾರಣ ಆಯ್ತು ಎಂದು ಶಾಪ ಹಾಕಿದ್ದಾರೆ.

English summary
Coronavirus Effect: Bob Shellard isn't allowed to visit his wife in her Connecticut nursing home. So he stood outside wish to her 'Happy Anniversary'.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X