ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸೆಕ್ಯುರಿಟಿ ಕಣ್ತಪ್ಪಿಸಿ ಐಫೆಲ್ ಟವರ್ ಏರಿದ ಕಿಲಾಡಿ, ಪೊಲೀಸರು ಹೈರಾಣ

|
Google Oneindia Kannada News

ಪ್ಯಾರಿಸ್, ಮೇ 21: ಭದ್ರತಾ ಸಿಬ್ಬಂದಿ ಕಣ್ತಪ್ಪಿಸಿ ಆಗಂತುಕನೊಬ್ಬ ಜಗತ್ ವಿಖ್ಯಾತ ಐಫೆಲ್ ಟವರ್ ಏರಿ ಅವಾಂತರ ಸೃಷ್ಟಿಸಿದ್ದಾನೆ.

ಟವರ್ ಏರಿದ್ದ ವ್ಯಕ್ತಿಯೊಂದಿಗೆ ಪೊಲೀಸರು ಸಂಪರ್ಕಿಸಿದ್ದು ಆತ ಯಾವ ಕಾರಣಕ್ಕೆ ಏರಿದ್ದ ಎಂಬುದು ತಿಳಿದುಬಂದಿಲ್ಲ. 2017ರ ಅಕ್ಟೋಬರ್ ಇದೇ ರೀತಿ ವ್ಯಕ್ತಿಯೊಬ್ಬ ಟವರ್ ಏರಿ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಹೇಳಿ ಆತಂಕ ಸೃಷ್ಟಿ ಮಾಡಿದ್ದ, ಆತನನ್ನು ಮನವೊಲಿಸಲು ಪೊಲೀಸರು ಯಶಸ್ವಿಯಾಗಿದ್ದರು. ಆಗಲೂ ಪ್ರವಾಸಿಗರನ್ನು ಬೇರೆಡೆಗೆ ಕಳುಹಿಸಲಾಗಿತ್ತು.

Man caught climbing the Eiffel Tower
ಸೋಮವಾರ ಮಧ್ಯಾಹ್ನದಿಂದಲೇ ಐಫೆಲ್ ಟವರ್ ಪ್ರವೇಶವನ್ನು ಪ್ರವಾಸಿಗರಿಗೆ ನಿಷೇಧಿಸಲಾಗಿದೆ. 324 ಮೀಟರ್ ಇರುವ ಟವರ್‌ನ್ನು ಓರ್ವ ವ್ಯಕ್ತಿ ಹತ್ತುತ್ತಿರುವುದು ಕಾಣಿಸಿತ್ತು. ಮಧ್ಯಾಹ್ನ ಸುಮಾರು 2.15ರ ಸುಮಾರಿಗೆ ಘಟನೆ ನಡೆದಿದೆ.

ಐಫೆಲ್ ಟವರ್ ನಿರ್ಮಾಣಕ್ಕೆ ಕಾರ್ಯ 1889ರಲ್ಲಿ ಪೂರ್ಣಗೊಂಡಿತ್ತು. ಕಳೆದ ಒಂದು ವಾರದ ಹಿಂದೆ 130 ವರ್ಷದ ವಾರ್ಷಿಕೋತ್ಸವವನ್ನು ಪೂರ್ಣಗೊಳಿಸಿತ್ತು. ಗುಸ್ತಾವೆ ಐಫೆಲ್ ಎಂಬುವವರು ಈ ಟವರ್ ನಿರ್ಮಾಣ ಮಾಡಿದ್ದರು. 2015ರಲ್ಲಿ ಮೂರು ಮಂದಿ ಐಫೆಲ್ ಟವರ್ ಏರುತ್ತಿರುವುದು ಗೋಚರವಾಗಿತ್ತು.

English summary
Officers have caught the man who climbed up the side of the Eiffel Tower on Monday afternoon, triggering an evacuation of the famous structure. He is now under police control, a Paris police spokesperson told CNN. His motivation for scaling the Paris landmark remains unclear.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X