ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಹಲ್ಲಿನಿಂದ ಕಡಿದು ಐಫೋನ್ ಬ್ಯಾಟರಿ ಚೆಕ್ ಮಾಡಿದ್ದರಿಂದ ಸ್ಫೋಟ

|
Google Oneindia Kannada News

ನಿಮ್ಮ ಫೋನ್ ನಲ್ಲಿನ ಬ್ಯಾಟರಿ ಸಾಚಾ ಹೌದೋ ಅಲ್ಲವೋ ಎಂದು ಪರೀಕ್ಷಿಸುವ ಉದ್ದೇಶ ಇದ್ದರೆ ಅದನ್ನು ಹಲ್ಲಿನಿಂದ ಕಡಿದು ನೋಡಲು ಪ್ರಯತ್ನಿಸಬೇಡಿ. ಹಾಗೊಂದು ವೇಳೆ ಮಾಡಿದರೆ ಅದರ ಫಲಿತಾಂಶ ಭಯಂಕರವಾಗಿರುತ್ತದೆ. ಈ ಪಾಠ ಕಲಿತಿರುವುದು ಚೀನಾದ ವ್ಯಕ್ತಿಯೊಬ್ಬರಿಂದ.

ಆ ಬ್ಯಾಟರಿಯಲ್ಲಿ ಪೂರ್ತಿಯಾಗಿ ಲಿಥಿಯಂ ಅಯಾನ್ ಇರುತ್ತದೆ. ಹಾಗೆ ಕಡಿದಿದ್ದರಿಂದ ಆ ವ್ಯಕ್ತಿಯ ಮುಖದಲ್ಲೇ ಸ್ಫೋಟವಾಗಿದೆ. ಇಡೀ ಘಟನೆ ವಿಡಿಯೋದಲ್ಲಿ ಸೆರೆಯಾಗಿದೆ. ಆ ನಂತರ ಅದು ವೈರಲ್ ಆಗಿದೆ. ಯಾರೆಲ್ಲ ಈಗ ಹಲ್ಲಿನಿಂದ ಬ್ಯಾಟರಿ ಕಡಿದು ಪರೀಕ್ಷೆ ಮಾಡಬೇಕು ಅಂತಿದ್ದೀರೋ ಅಂಥ ಎಲ್ಲರಿಗೂ ಪಾಠವಿದು.

ಬ್ಯಾಂಡ್, ಮೆರವಣಿಗೆಯಲ್ಲಿ ಕುದುರೆ ಮೇಲೆ ಹೋಗಿ ಐಫೋನ್ x ಖರೀದಿಬ್ಯಾಂಡ್, ಮೆರವಣಿಗೆಯಲ್ಲಿ ಕುದುರೆ ಮೇಲೆ ಹೋಗಿ ಐಫೋನ್ x ಖರೀದಿ

ಈ ಘಟನೆ ಎಲ್ಲಿ ನಡೆದಿದ್ದು ಎಂಬ ಮಾಹಿತಿ ವಿಡಿಯೋದಲ್ಲಿ ಲಭ್ಯವಿಲ್ಲ. ಆದರೆ ವಿಡಿಯೋ ವೈರಲ್ ಆದ ನಂತರ ಚೀನಾದ ತಂತ್ರಜ್ಞಾನ ಬ್ಲಾಗ್ ಗಳಲ್ಲಿ ಈ ಬಗ್ಗೆ ಲೇಖನಗಳು ಪ್ರಕಟವಾಗಿವೆ. ಒಂದು ಎಲೆಕ್ಟ್ರಾನಿಕ್ಸ್ ಮಳಿಗೆಗೆ ವ್ಯಕ್ತಿಯೊಬ್ಬರು ನಡೆದು ಬರುತ್ತಾರೆ. ಅದು ತಮ್ಮ ಐಫೋನ್ ಗೆ ಬ್ಯಾಟರಿ ಖರೀದಿಸುವ ಉದ್ದೇಶದಿಂದ.

Man bites mobile battery to check its quality, it explodes

ಬ್ಯಾಟರಿ ಪಡೆದ ನಂತರ ಅದು ಸರಿಯಾಗಿದೆಯೋ ಇಲ್ಲವೋ ಎಂದು ಪರೀಕ್ಷಿಸುವ ದೃಷ್ಟಿಯಿಂದ ಹಲ್ಲಿನಲ್ಲಿ ಕಡಿಯುತ್ತಾರೆ. ಆಗ ಆ ವ್ಯಕ್ತಿಯ ಮುಖದ ಮೇಲೇ ಬ್ಯಾಟರಿ ಸ್ಫೋಟವಾಗುತ್ತದೆ ಮತ್ತು ತಕ್ಷಣವೇ ಆತ ಅದನ್ನು ದೂರಕ್ಕೆ ಎಸೆಯುತ್ತಾರೆ. ಈ ದೃಶ್ಯಾವಳಿಗಳು ವಿಡಿಯೋದಲ್ಲಿ ಸೆರೆಯಾಗಿವೆ.

ಹಲ್ಲಿನಿಂದ ಕಡಿದು ವಸ್ತುಗಳ ಗುಣಮಟ್ಟ ಪರಿಶೀಲಿಸುವುದು ಒಂದು ರೀತಿಯ ಅಭ್ಯಾಸವಾಗಿ ಹೋಗಿದೆ. ಚಿನ್ನದ ನಾಣ್ಯವನ್ನೇ ಹಾಗೆ ಹಲ್ಲಿನಿಂದ ಕಡಿದು ಪರಿಶೀಲಿಸುತ್ತಾರೆ. ಇನ್ನು ಕ್ರೀಡಾಳುಗಳು ತಮಗೆ ಸಿಕ್ಕ ಪದಕವನ್ನು ಹಲ್ಲಿನಿಂದ ಕಡಿದು, ಫೋಟೋಗೆ ಪೋಸ್ ಕೊಡುವುದುಂಟು. ಅದೇನಿದ್ದರೂ ಫೋಟೋಗೆ ಪೋಸ್ ಕೊಡಲು ಮಾತ್ರ.

ಅದೇನೇ ಇರಲಿ, ಈ ರೀತಿ ಹಲ್ಲಿನಿಂದ ಕಡಿದು ಗುಣಮಟ್ಟ ಪರಿಶೀಲಿಸುವ ಅಭ್ಯಾಸ ನಿಮಗಿದ್ದರೆ ಯಾವುದಕ್ಕೂ ಹುಷಾರಾಗಿರಿ.

English summary
If you want to check the authenticity of your phone's battery, don't do it by biting it. The results could be even worse than what you may suffer after biting into the delectable-looking Tide Pods. This is what we learn from the experience of a man in China, who tried to check the authenticity of an iPhone battery by taking a bite out of it.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X