ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಸ್ರೇಲ್ ಬಿಟ್ಟು ತೆರಳದಂತೆ ಆಸ್ಟ್ರೇಲಿಯಾ ವ್ಯಕ್ತಿಗೆ 8000 ವರ್ಷ ನಿರ್ಬಂಧ!

|
Google Oneindia Kannada News

ಆಸ್ಟ್ರೇಲಿಯಾ ವ್ಯಕ್ತಿಗೆ ಇಸ್ರೇಲ್ ಬಿಟ್ಟು ತೆರಳದಂತೆ ಬರೋಬ್ಬರಿ 8 ಸಾವಿರ ವರ್ಷಗಳ ಕಾಲ ನಿರ್ಬಂಧ ವಿಧಿಸಲಾಗಿದೆ. ಇಸ್ರೇಲಿ ಪತ್ನಿ ಆತನ ವಿರುದ್ಧ ವಿಚ್ಛೇದನ ಪ್ರಕರಣ ದಾಖಲಿಸಿರುವುದೇ ಇದಕ್ಕೆ ಕಾರಣವಾಗಿದೆ.

ಸ್ಥಳೀಯ ಕೋರ್ಟ್ ನ ಆದೇಶವನ್ನು ಮಾನವ ಹಕ್ಕುಗಳ ಗುಂಪು ಕಠೋರ ಮತ್ತು ವಿಪರೀತ ಎಂದು ಟೀಕೆ ಮಾಡಿವೆ. 2013 ರಿಂದ ನಾನು ಇಲ್ಲಿಯೇ ಸಿಲುಕಿಕೊಂಡಿದ್ದೇನೆ ಎಂದು ಹಪ್ಪರ್ಟ್ ನ್ಯೂಸ್.ಕಾಂ.ಎಯುಗೆ ಹೇಳಿಕೆ ನೀಡಿದ್ದಾರೆ.

ಸ್ವತಂತ್ರ ಪತ್ರಕರ್ತರೊಬ್ಬರು ಈ ಕಾನೂನಿನ ಬಗ್ಗೆ ಅರಿವು ಮೂಡಿಸುವ ನಿಟ್ಟಿನಲ್ಲಿ ಕೆಲಸ ಮಾಡುತ್ತಿದ್ದಾರೆ. ಆದರೆ ಪತ್ರಕರ್ತರ ಪ್ರಕಾರ ಆಸ್ಟ್ರೇಲಿಯಾದಿಂದ ಬಂದ ನೂರಾರು ನಾಗರಿಕರು ಇಂತಹ ಸ್ಥಿತಿಯನ್ನು ಎದುರಿಸುತ್ತಿದ್ದಾರೆ.

Court

ಇಸ್ರೇಲ್‌ನ ವಿಚ್ಛೇದನ ಕಾನೂನಿನಲ್ಲಿರುವ ತೊಡಕುಗಳೆಡೆಗೆ ದೇಶದಲ್ಲಿ ಹಾಗೂ ಅಂತಾರಾಷ್ಟ್ರೀಯ ಮಟ್ಟದಲ್ಲಿ ಅತ್ಯಂತ ಕಡಿಮೆ ಗಮನ ಹರಿಸಲಾಗಿದೆ. ಇಲ್ಲಿನ ವಿಚ್ಛೇದನ ಕಾನೂನಿನ ಪ್ರಕಾರ ಮಹಿಳೆಯರು ತಮ್ಮ ಪತಿಯ ವಿದೇಶ ಪ್ರಯಾಣದ ಮೇಲೆ ಸುಲಭವಾಗಿ ನಿರ್ಬಂಧ ವಿಧಿಸಬಹುದಾಗಿದ್ದು, ಮಕ್ಕಳ ಇಡೀ ಬಾಲ್ಯದ ಅವಧಿಗೆ ಆರ್ಥಿಕ ಬೆಂಬಲವನ್ನು ಕೇಳಬಹುದಾಗಿದೆ.

ಸ್ಥಳೀಯ ನ್ಯಾಯಾಲಯ ನೋಮ್ ಹಪ್ಪರ್ಟ್ (44) ಎಂಬಾತನಿಗೆ 2013 ರಲ್ಲಿ ಸ್ಟೇ ಆಫ್ ಎಕ್ಸಿಟ್ ನ್ನು ಜಾರಿಗೊಳಿಸಿತ್ತು ಈ ಆದೇಶದ ಪ್ರಕಾರ 3 ಮಿಲಿಯನ್ ಡಲರ್ ಗೂ ಹೆಚ್ಚಿನ ಹಣವನ್ನು ಮಗುವಿನ ಭವಿಷ್ಯದ ಬೆಂಬಲದ ಭಾಗವಾಗಿ ಪಾವತಿ ಮಾಡುವವರೆಗೂ ಇಸ್ರೇಲ್ ನಲ್ಲಿಯೇ ಇರಬೇಕು ಅಥವಾ ಡಿ.31, 9999 ಅಂದರೆ 8,000 ವರ್ಷಗಳ ಕಾಲ ಆತ ಇಸ್ರೇಲ್ ಬಿಟ್ಟು ತೆರಳುವುದಕ್ಕೆ ಸಾಧ್ಯವಿಲ್ಲ.

ಸುದ್ದಿ ವರದಿಗಳ ಪ್ರಕಾರ ಹಪ್ಪರ್ಟ್ ಎಂಬಾತ ಫಾರ್ಮಸಿಟಿಕಲ್ ಕಂಪನಿಯಲ್ಲಿ ವಿಶ್ಲೇಷ ರಸಾಯನಶಾಸ್ತ್ರಜ್ಞರಾಗಿದ್ದು, 2012 ರಲ್ಲಿ ಇಸ್ರೇಲ್ ಗೆ ಬಂದಿದ್ದರು, ಇದಕ್ಕೂ ಒಂದು ವರ್ಷ ಆತನ ಪತ್ನಿ ಇಸ್ರೇಲ್ ಗೆ ಬಂದಿದ್ದರು. ಆತ ಇಸ್ರೇಲ್ ಗೆ ಆಗಮಿಸುತ್ತಿದ್ದಂತೆಯೇ ಆತನ ಪತ್ನಿ ಅಲ್ಲಿನ ನ್ಯಾಯಾಲಯದಲ್ಲಿ ವಿಚ್ಛೇದನಕ್ಕಾಗಿ ಅರ್ಜಿ ಸಲ್ಲಿಸಿದ್ದರು.

ಈ ವಿಚ್ಛೇದನ ಪ್ರಕರಣ ವಿಚಾರಣೆ ನಡೆಸಿರುವ ಕೋರ್ಟ್ ಈಗ ಎರಡು ಆಯ್ಕೆಗಳನ್ನು ನೀಡಿದೆ. ಒಂದು ತನ್ನ ಹೆಂಡತಿ ಮತ್ತು ಇಬ್ಬರು ಮಕ್ಕಳ ಓದು ಸೇರಿದಂತೆ ಸಂಪೂರ್ಣ ಖರ್ಚು ಪರಿಹಾರದ ರೂಪದಲ್ಲಿ ಭರಿಸಬೇಕು. ಇಲ್ಲದೇ ಹೋದಲ್ಲಿ ಸುಮಾರು 8 ಸಾವಿರ ವರ್ಷಗಳವರೆಗೂ ಇಸ್ರೇಲ್‌ನಲ್ಲೇ ಇರಬೇಕು. ಎಲ್ಲಿಗೂ 9999 ಡಿಸೆಂಬರ್ 31ರವರೆಗೆ ಹೋಗುವಂತಿಲ್ಲ ಎಂದು ಆದೇಶಿಸಿದೆ.

English summary
According to reports, an Australian man has been barred from leaving Israel falling victim to a law which has disallowed him from leaving the country until December 31 in the year 9999 effectively for the next 8000 years.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X