ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭಾರತಕ್ಕೆ ಮಲ್ಯ ಹಸ್ತಾಂತರ: ಸೆ. 18ಕ್ಕೆ ವಿಚಾರಣೆ ಮುಂದೂಡಿಕೆ

|
Google Oneindia Kannada News

ಲಂಡನ್, ಸೆಪ್ಟೆಂಬರ್ 12: ಭಾರತದ ಬ್ಯಾಂಕುಗಳಿಂದ ಸಾವಿರಾರು ಕೋಟಿ ರೂ. ಸಾಲ ಮಾಡಿ ಲಂಡನ್‌ನಲ್ಲಿ ನೆಲೆಸಿರುವ ಉದ್ಯಮಿ ವಿಜಯ್ ಮಲ್ಯ ಅವರ ಗಡಿಪಾರು ಪ್ರಕರಣದ ವಿಚಾರಣೆಯನ್ನು ಅಲ್ಲಿನ ವೆಸ್ಟ್ ಮಿನಿಸ್ಟರ್ ಮ್ಯಾಜಿಸ್ಟ್ರೇಟ್ ಕೋರ್ಟ್ ಸೆ. 18ಕ್ಕೆ ಮುಂದೂಡಿದೆ.

ಮುಂಬೈ ಜೈಲಲ್ಲಿ ಗಾಳಿ, ಬೆಳಕಿರಲ್ಲ, ಎಂದ ಮಲ್ಯ, ವಿಡಿಯೋ ಕೇಳಿದ ಜಡ್ಜ್!ಮುಂಬೈ ಜೈಲಲ್ಲಿ ಗಾಳಿ, ಬೆಳಕಿರಲ್ಲ, ಎಂದ ಮಲ್ಯ, ವಿಡಿಯೋ ಕೇಳಿದ ಜಡ್ಜ್!

ಮಲ್ಯ ಅವರನ್ನು ವಿಚಾರಣೆಗೆ ಒಳಪಡಿಸಲು ಹಸ್ತಾಂತರ ಮಾಡುವಂತೆ ಜಾರಿ ನಿರ್ದೇಶನಾಲಯ ಮತ್ತು ಸಿಬಿಐ ಲಂಡನ್ ನ್ಯಾಯಾಲಯವನ್ನು ಕೋರಿವೆ. ಆದರೆ, ಭಾರತದ ಜೈಲುಗಳ ಪರಿಸ್ಥಿತಿಯ ಬಗ್ಗೆ ನ್ಯಾಯಾಲಯ ಕಳವಳ ವ್ಯಕ್ತಪಡಿಸಿತ್ತು. ಮುಂಬೈ ಜೈಲಿನಲ್ಲಿ ಗಾಳಿ ಬೆಳಕು ಸರಿಯಾಗಿಲ್ಲ ಎಂದು ಮಲ್ಯ ತಮ್ಮನ್ನು ಭಾರತಕ್ಕೆ ಹಸ್ತಾಂತರ ಮಾಡುವುದರ ವಿರುದ್ಧ ಆಕ್ಷೇಪ ವ್ಯಕ್ತಪಡಿಸಿದ್ದರು.

ಓವಲ್ ನಲ್ಲಿ 'Enough is Engough' ಎಂದ ಉದ್ಯಮಿ ಮಲ್ಯಓವಲ್ ನಲ್ಲಿ 'Enough is Engough' ಎಂದ ಉದ್ಯಮಿ ಮಲ್ಯ

ಮುಂಬೈನಲ್ಲಿರುವ ಆರ್ಥರ್ ರಸ್ತೆಯ ಜೈಲು ಸುಸಜ್ಜಿತವಾಗಿದೆ ಎಂಬುದನ್ನು ತೋರಿಸುವ ವಿಡಿಯೋವನ್ನು ತನಿಖಾ ಸಂಸ್ಥೆಗಳು ನ್ಯಾಯಾಲಯಕ್ಕೆ ನೀಡಿದ್ದವು. ಈ ವಿಡಿಯೋವನ್ನು ಕೋರ್ಟ್ ಪರಾಮರ್ಶಿಸುವ ನಿರೀಕ್ಷೆ ಇತ್ತು.

mallya extradition case hearing adjurned till sep 18

ಲಂಡನ್‌ನಲ್ಲಿ ಜಾಮೀನಿನ ಮೇಲೆ ಬಿಡುಗಡೆ ಹೊಂದಿರುವ ಮಲ್ಯ, ಭಾರತದಲ್ಲಿನ ತಮ್ಮ 14 ಸಾವಿರ ಕೋಟಿ ಮೌಲ್ಯದ ಆಸ್ತಿಗಳನ್ನು ಮಾರಿ ಸಾಲ ತೀರಿಸುವುದಾಗಿ ಹೇಳಿದ್ದಾರೆ.

ಆಸ್ತಿ ಉಳಿಸಿಕೊಳ್ಳಲು ಭಾರತಕ್ಕೆ ಬರಲು ಮುಂದಾದ ಮಲ್ಯ!ಆಸ್ತಿ ಉಳಿಸಿಕೊಳ್ಳಲು ಭಾರತಕ್ಕೆ ಬರಲು ಮುಂದಾದ ಮಲ್ಯ!

ಮಲ್ಯರ ಹಸ್ತಾಂತರ ಪ್ರಕರಣದ ವಿಚಾರಣೆ ಡಿಸೆಂಬರ್ 4ರಿಂದಲೂ ನಡೆಯುತ್ತಿದೆ. ಸಾಲ ತೀರಿಸಲು ತಮ್ಮ ಆಸ್ತಿಗಳನ್ನು ಮಾರುವುದಾಗಿ ಈ ಹಿಂದೆಯೇ ಕರ್ನಾಟಕ ಹೈಕೋರ್ಟ್‌ಗೆ ತಿಳಿಸಿದ್ದಾಗಿ ಮಲ್ಯ ಕೋರ್ಟ್ ವಿಚಾರಣೆಗೂ ಮುನ್ನ ಪುನರುಚ್ಚರಿಸಿದ್ದಾರೆ.

English summary
London Westminister Magistrate Court put the hearing of Vijay Mallya extradition case on September 18.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X