ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲಿಯಲ್ಲಿ ಉಗ್ರರ ಅಟ್ಟಹಾಸ: 20 ಭಾರತೀಯರು ಸೆರೆಯಾಳು

|
Google Oneindia Kannada News

ಬಮಾಕೋ, ನವೆಂಬರ್. 20: ಮತ್ತೆ ಉಗ್ರರು ಅಟ್ಟಹಾಸ ಮೆರೆದಿದ್ದಾರೆ. ಪಶ್ಚಿಮ ಆಫ್ರಿಕಾದ ಮಾಲಿ ದೇಶದ ರಾಜಧಾನಿ ಬಮಾಕೋದ ಐಶಾರಾಮಿ ರಾಡಿಸನ್ ಬ್ಲೂ ಹೋಟೆಲ್ ಮೇಲೆ ಇಬ್ಬರು ಬಂದೂಕುಧಾರಿ ಉಗ್ರರು ಶುಕ್ರವಾರ ಸಂಜೆ ದಾಳಿ ನಡೆಸಿದ್ದಾರೆ. 20 ಮಂದಿ ಭಾರತೀಯರು ಸೇರಿದಂತೆ 170 ಜನರನ್ನು ಒತ್ತೆಯಾಳನ್ನಾಗಿ ಇರಿಸಿಕೊಂಡಿದ್ದಾರೆ.

ಉಗ್ರರ ದಾಳಿಯಲ್ಲಿ ಮೂರು ಜನ ಮಂದಿ ಸಾವನ್ನಪ್ಪಿದ್ದು, 80 ಮಂದಿಯನ್ನು ಬಿಡುಗಡೆಗೊಳಿಸಲಾಗಿದೆ ಎಂದು ಅಲ್ಲಿನ ಮಾಧ್ಯಗಳು ವರದಿ ಮಾಡಿವೆ. ಬಮಾಕೋದ ರಾಡಿಸನ್ ಹೋಟೆಲ್ ಮೇಲೆ ಉಗ್ರರು ಏಕಾಏಕಿ ದಾಳಿ ನಡೆಸಿದ್ದಾರೆ. ಹೋಟೆಲ್ ನ 7ನೇ ಅಂತಸ್ತಿನಲ್ಲಿ ಈ ಘಟನೆ ನಡೆದಿದೆ.[ಫ್ರಾನ್ಸ್ ಮೇಲೆ ಉಗ್ರರಿಂದ ಜೈವಿಕ ಅಸ್ತ್ರ ಬಳಕೆ?]

terrorist

ಜಿಹಾದಿಗಳು ಕಾರಿಡಾರ್ ಮೇಲೆ ಗುಂಡಿನ ದಾಳಿ ನಡೆಸಿರುವುದಾಗಿ ಭದ್ರತಾ ಸಿಬ್ಬಂದಿ ತಿಳಿಸಿದ್ದಾರೆ. ಒತ್ತೆಯಾಳುಗಳಿಗೆ ಕುರಾನ್ ಪಠಿಸುವಂತೆ ಉಗ್ರರು ಬೆದರಿಕೆ ಒಡ್ಡಿದ್ದರು. ಆಗ 15 ಮಂದಿ ಕುರಾನ್ ಪಠಿಸಿದ್ದರು, ಬಳಿಕ ಕುರಾನ್ ಪಠಿಸಿದ್ದ 15 ಮಂದಿ ಸೇರಿದಂತೆ 80 ಜನರನ್ನು ಬಿಡುಗಡೆಗೊಡೆ ಮಾಡಲಾಯಿತು. 20 ಮಂದಿ ಭಾರತೀಯರು ಸೇರಿ ಉಳಿದವರನ್ನು ಒತ್ತೆ ಇರಿಸಿಕೊಳ್ಳಲಾಗಿದೆ ಎಂದು ಪ್ರಾಥಮಿಕ ಮಾಹಿತಿ ತಿಳಿದುಬಂದಿದೆ.

ಹೋಟೆಲ್ ಆವರಣ ಪ್ರವೇಶ ಮಾಡಿದ ಇಬ್ಬರು ಬಂದೂಕುಧಾರಿ ಉಗ್ರರು ಉಗ್ರರು ಸುಮಾರು 140 ಜನರು ಮತ್ತು ಹೋಟೆಲ್ ನ 30 ಸಿಬ್ಬಂದಿಗಳನ್ನು ಒತ್ತೆಯಾಳನ್ನಾಗಿ ಇಟ್ಟುಕೊಂಡಿದ್ದಾರೆ. ಪೊಲೀಸರು ಕಾರ್ಯಾಚರಣೆ ಮುಂದುವರಿಸಿದ್ದಾರೆ.[ಫ್ರಾನ್ಸ್ ದಾಳಿ ನಂತರ ಏನೇನಾಯ್ತು?]

ಮಾಲಿ ಎಲ್ಲಿದೆ ?
ಮಾಲಿ ಪಶ್ಚಿಮ ಆಫ್ರಿಕಾದ ದೇಶ. ಆಫ್ರಿಕಾದ 8ನೇ ಅತಿದೊಡ್ಡ ರಾಷ್ಟ್ರ ಎಂಬ ಹೆಗ್ಗಳಿಕೆ ಮಾಲಿಗೆ ಸೇರಿದ್ದು. ಏಷ್ಯಾ, ಯುರೋಪ್ ಖಂಡ ಅಂತಿದ್ದ ಉಗ್ರರು ಇದೀಗ ಆಫ್ರಿಕಾ ಖಂಡಕ್ಕೂ ಲಗ್ಗೆ ಇಟ್ಟು ದಾಳಿ ಮಾಡಿದ್ದಾರೆ.

English summary
Jihadists launched a shooting rampage in the Radisson Blu hotel in the centre of the Malian capital Bamako on Friday, Nov 20, security sources and an journalist said. Automatic weapons fire could be heard from outside the 190-room hotel, where security forces have set up a security cordon. Here are the Updates.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X