ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಾಲ್ಡೀವ್ಸ್ ಅಧ್ಯಕ್ಷೀಯ ಚುನಾವಣೆ, ಇಬ್ರಾಹಿಂಗೆ ಗೆಲುವು, ಭಾರತಕ್ಕೆ ಖುಷಿ

|
Google Oneindia Kannada News

ಮಾಲ್ಡೀವ್ಸ್, ಸೆಪ್ಟೆಂಬರ್ 24: ಮಾಲ್ಡೀವ್ಸ್ ದೇಶದ ಅಧ್ಯಕ್ಷೀಯ ಚುನಾವಣೆಯಲ್ಲಿ ಇಬ್ರಾಹಿಂ ಮೊಹಮ್ಮದ್ ಸೊಲಿಹ್ ಗೆಲುವನ್ನು ಸ್ವಾಗತಿಸಿ, ಭಾರತ ಸರ್ಕಾರವು ಶುಭ ಹಾರೈಸಿದೆ. ಚೀನಾ ಬೆಂಬಲಿತ ಹಾಲಿ ಅಧ್ಯಕ್ಷ ಅಬ್ದುಲ್ಲಾ ಯಮೀನ್ ಅವರಿಗೆ ಸೋಲುಂಟಾಗಿದೆ.

ಸೊಲಿಹ್ ಅವರು 1,34,616 ಮತಗಳನ್ನು ಗಳಿಸಿದರೆ, ಯಮೀನ್ ಅವರು 96,132 ಮತಗಳನ್ನು ಪಡೆದು ಸೋಲು ಕಂಡಿದ್ದಾರೆ. ಚುನಾವಣೆಗೂ ಮುನ್ನ ಮಾಲ್ಡೀವ್ಸ್ ನಲ್ಲಿ ರಾಜಕೀಯ ಅಸ್ಥಿರತೆ ಉಂಟಾಗಿತ್ತು. ಅಧ್ಯಕ್ಷ ಯಮೀನ್ ಅವರು ತಮ್ಮ ವಿರೋಧಿಗಳನ್ನು ಜೈಲಿಗಟ್ಟಿದ್ದರು, ಕೆಲವರನ್ನು ಗಡೀಪಾರು ಮಾಡಿದ್ದರು. ಇದರ ಪರಿಣಾಮವಾಗಿ ಅಮೆರಿಕ ಹಾಗೂ ವೀಶ್ವಸಂಸ್ಥೆಯಿಂದಲೂ ನಿರ್ಬಂಧ ಹೇರಿಕೆಯ ಎಚ್ಚರಿಕೆ ಸಂದೇಶ ಎದುರಿಸಿದ್ದರು.

ಏನಿದು ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟು?ತಿಳಿಯಬೇಕಾದ 10 ಸಂಗತಿಏನಿದು ಮಾಲ್ಡೀವ್ಸ್ ರಾಜಕೀಯ ಬಿಕ್ಕಟ್ಟು?ತಿಳಿಯಬೇಕಾದ 10 ಸಂಗತಿ

ಸೊಲಿಹ್ ಅವರ ಜಯದಿಂದಾಗಿ ಮಾಲ್ಡೀವ್ಸ್ ನಲ್ಲಿ ಮತ್ತೊಮ್ಮೆ ಪ್ರಜಾಪ್ರಭುತ್ವದ ಹಾದಿ ಹಿಡಿದಿದೆ ಎನ್ನಬಹುದು ಎಂದು ಮಾಲ್ಡೀವಿಯನ್ ಡೆಮೋಕ್ರಾಟಿಕ್ ಪಕ್ಷದ ಅಧ್ಯಕ್ಷ ಮೊಹಮ್ಮದ್ ನಶೀದ್ ಹೇಳಿದ್ದಾರೆ.

Maldives elections: Pro China Yameen ousted

ಯಮೀನ್ ಅವರನ್ನು ಪಟ್ಟದಿಂದ ಕೆಳಗಿಳಿಸಲು ಎಲ್ಲಾ ವಿಪಕ್ಷಗಳಾದ ಜಮ್ಹೂರಿ, ಅದಾಲತ್ ಪಕ್ಷಗಳು ಒಗ್ಗೂಡಿ ಇಬ್ರಾಹಿಂಗೆ ಬೆಂಬಲ ವ್ಯಕ್ತಪಡಿಸಿದ್ದವು.

ಪ್ರವಾಸೋದ್ಯಮವೇ ಬಂಡವಾಳವಾಗಿರುವ ಸುಮಾರು 4 ಲಕ್ಷ ಜನರನ್ನುಳ್ಳ ಈ ಪುಟ್ಟ ದ್ವೀಪ ರಾಷ್ಟ್ರದ ಚುನಾವಣೆ ಫಲಿತಾಂಶದ ಮೇಲೆ ಭಾರತ ಹಾಗೂ ಚೀನಾ ಕಣ್ಣಿಟ್ಟಿತ್ತು. ಮಾಲ್ಡೀವ್ಸ್ ಮೇಲೆ ಮಿತ್ರತ್ವ ಹೊಂದಿರುವ ದೇಶಕ್ಕೆ ಹಿಂದೂ ಮಹಾ ಸಾಗರದಲ್ಲಿ ಸಂಚಾರ ಸುಗಮವಾಗಲಿದೆ. ಹೀಗಾಗಿ ಇದು ಪ್ರಮುಖ ದೇಶಗಳ ಉದ್ಯಮಿಗಳು ಇಲ್ಲಿ ಬಂಡವಾಳ ಹೂಡಿಕೆ ಮಾಡಿದ್ದಾರೆ. ಚೀನಾದ ಪ್ರಾಬಲ್ಯ ಮುರಿಯಲು ಯಮೀನ್ ಅವರು ಅಧಿಕಾರ ಕಳೆದುಕೊಳ್ಳುವುದು ಭಾರತಕ್ಕೆ ಅನಿವಾರ್ಯವಾಗಿತ್ತು.

English summary
Ibrahim Mohammad Solih has declared victory in the Maldives presidential elections. The victory comes in the wake of allegations that the elections would be rigged in favour of President Abdulla Yameen.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X