ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಮಲೇಷ್ಯಾ ಪ್ರಧಾನಿ ಮಹತೀರ್ ಮೊಹಮ್ಮದ್ ರಾಜೀನಾಮೆ

|
Google Oneindia Kannada News

ಕೌಲಲಂಪುರ್, ಫೆಬ್ರವರಿ 24: ಮಲೇಷ್ಯಾದ ಪ್ರಧಾನಿ ಮಹತೀರ್ ಮೊಹಮ್ಮದ್ ಅವರು ತಮ್ಮ ಸ್ಥಾನಕ್ಕೆ ರಾಜೀನಾಮೆ ಸಲ್ಲಿಸಿದ್ದಾರೆ. ಆದರೆ, ಪ್ರಧಾನಿ ರಾಜೀನಾಮೆಯಿಂದ ಸರ್ಕಾರ ಪತನದ ಭೀತಿ ಎದುರಿಸುತ್ತಿಲ್ಲ.

ಎರಡು ಸಾಲಿನ ರಾಜೀನಾಮೆ ಪತ್ರವನ್ನು ಮಲೇಷಿಯಾದ ರಾಜನಿಗೆ ಸಲ್ಲಿಸಿದ್ದಾರೆ. ಮಹತೀರ್ ಅವರ ಪಕ್ಷ ಪ್ರಿಬುಮಿ ಬೆರ್ಸಾತು ಜೊತೆಗೆ ಪಕತಾನ್ ಹರಪನ್ ಮೈತ್ರಿ ಹೊಂದಿದೆ.

ಮಹತೀರ್ ಮೊಹಮ್ಮದ್ ಅವರು ತಮ್ಮ ಉತ್ತರಾಧಿಕಾರಿತಾಗಿ ಅನ್ವರ್ ಇಬ್ರಾಹಿಂರನ್ನು ನೇಮಿಸಿ ಹೊಸ ಸರ್ಕಾರ ರಚಿಸಲು ಮುಂದಾಗಿದ್ದರು. ಆದರೆ, ಮೈತ್ರಿಕೂಟ ಇದಕ್ಕೆ ಅಡ್ಡಿಪಡಿಸಿತ್ತು. ಹೀಗಾಗಿ, ತಮ್ಮ ಸ್ಥಾನಕ್ಕೆ ಮಹತೀರ್ ರಾಜೀನಾಮೆ ಸಲ್ಲಿಸಿದ್ದಾರೆ. 222 ಸ್ಥಾನಗಳುಳ್ಳ ಸಂಸತ್ತಿನಲ್ಲಿ ಹೊಸ ಸರ್ಕಾರ ರಚನೆ ಮಾಡಲು ಕನಿಷ್ಠ 112 ಸ್ಥಾನಗಳು ಬೇಕಿವೆ. 1981 ರಿಂದ 2003 ರ ಅವಧಿಯಲ್ಲಿ ಮಹತೀರ್ ಪ್ರಧಾನಿಯಾಗಿದ್ದಾಗ ಅನ್ವರ್ ಅವರು ಉಪ ಪ್ರಧಾನಿಯಾಗಿದ್ದರು. ಆದರೆ, 1998ರಲ್ಲಿ ಅನ್ವರ್ ಅಮಾನತುಗೊಳಿಸಿ, ಜೈಲಿಗೆ ಕಳಿಸಲಾಗಿತ್ತು.

Malaysian PM Mahathir Mohammad resigns

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಮಲೇಷ್ಯಾ ಪ್ರಧಾನಿ ಮಹಾತಿರ್ ಮೊಹಮ್ಮದ್ ವಿಶ್ವಸಂಸ್ಥೆಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಅಕ್ಷೇಪಾರ್ಹ ಹೇಳಿಕೆ ನೀಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Prime Minister of Malaysia, Mahathir Mohammad has announced his resignation. This will not pave the way for the formation of a new government.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X