ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ತಾಳೆ ಎಣ್ಣೆ ಖರೀದಿ ನಿಲ್ಲಿಸಬೇಡಿ: ಭಾರತಕ್ಕೆ ಮಲೇಶಿಯಾ ಮನವಿ

|
Google Oneindia Kannada News

ಕೌಲಾಲಂಪುರ, ಅಕ್ಟೋಬರ್ 24: ತಾಳೆ ಎಣ್ಣೆ ಖರೀದಿ ನಿಲ್ಲಿಸಬೇಡಿ ಎಂದು ಮಲೇಶಿಯಾ ಸರ್ಕಾರವು ಭಾರತ ಸೇರಿದಂತೆ ಇತರೆ ದೇಶಗಳಲ್ಲಿ ಮನವಿ ಮಾಡಿದೆ.

ಜಮ್ಮು ಕಾಶ್ಮೀರದ ವಿಶೇಷ ಸ್ಥಾನಮಾನ ರದ್ದುಗೊಳಿಸಿದ ಬೆನ್ನಲ್ಲೇ ಮಲೇಶಿಯಾ ಪ್ರಧಾನಿ ಮಹಾತಿರ್ ಮೊಹಮ್ಮದ್ ವಿಶ್ವಸಂಸ್ಥೆಯಲ್ಲಿ ಜಮ್ಮು ಕಾಶ್ಮೀರದ ಬಗ್ಗೆ ಅವಹೇಳನಕಾರಿ ಮಾತುಗಳನ್ನು ಆಡಿದ್ದರು.

ಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾಪಾಕ್ ಬೆಂಬಲಕ್ಕೆ ನಿಂತು ಭಾರತದ ಕೆಂಗಣ್ಣಿಗೆ ಗುರಿಯಾದ ಟರ್ಕಿ, ಮಲೇಶಿಯಾ

ನಾವು ತಾಳೆ ಎಣ್ಣೆ ರಫ್ತಿಗೆ ಸಿದ್ಧರಿದ್ದೇವೆ, ಕೇವಲ ಭಾರತದೊಂದಿಗೆ ಮಾತ್ರವಲ್ಲ ಬೇರೆ ದೇಶಗಳಿಗೂ ಎಣ್ಣೆಯನ್ನು ರಫ್ತು ಮಾಡುತ್ತೇವೆ, ಕೊಂಡುಕೊಳ್ಳಿ ಎಂದು ಸಚಿವ ಡೇರೆಲ್ ಹೇಳಿದ್ದಾರೆ.

Malaysian Minister Says Talking To India To Buy Our Palm Oil

ಮುಂಬೈನಲ್ಲಿರುವಂತಹ ವೆಜಿಟೇಬಲ್ ಆಯಿಲ್ ಟ್ರೇಡ್ ಬಾಡಿಯು ಮಲೇಶಿಯಾದ ತಾಳೆ ಎಣ್ಣೆಯನ್ನು ಖರೀದಿಸದಂತೆ ಸೋಮವಾರ ನಿರ್ಧಾರ ಕೈಗೊಂಡಿತ್ತು. ಭಾರತದ ಈ ನಿರ್ಧಾರದಿಂದಾಗಿ ಬೇರೆ ದೇಶಗಳು ಕೂಡ ಮಲೇಶಿಯಾದಿಂದ ತಾಳೆ ಎಣ್ಣೆ ಖರೀದಿಸಲು ಹಿಂದೇಟು ಹಾಕಿದ್ದರು.

ಕೇಂದ್ರ ಸರ್ಕಾರವು ಸಂವಿಧಾನದ ವಿಧಿ 370 ರದ್ದುಪಡಿಸಿದ ಹಿನ್ನೆಲೆಯಲ್ಲಿ ಜಮ್ಮು ಮತ್ತು ಕಾಶ್ಮೀರಕ್ಕೆ ನೀಡಿದ್ದ ವಿಶೇಷ ಸ್ಥಾನವನ್ನು ರದ್ದುಪಡಿಸಲಾಗಿತ್ತು. ಭಯೋತ್ಪಾದನೆಗೆ ಕುಮ್ಮಕ್ಕು ನೀಡುತ್ತಿರುವ ಪಾಕಿಸ್ತಾನದ ಬೆಂಬಲಕ್ಕೆ ನಿಂತಿ ಟರ್ಕಿ ಮತ್ತು ಮಲೇಶಿಯಾಗಳನ್ನು ದೂರಿರುವ ಭಾರತ ಮಲೆಶಿಯಾ ಮತ್ತು ಟರ್ಕಿಗೆ ತಕ್ಕ ಪಾಠ ಕಲಿಸಲು ಮುಂದಾಗಿದೆ.

English summary
Malaysia is in talks with India and other countries to urge them to continue buying Malaysian palm oil, its trade minister said on Thursday, after calls for a boycott of the commodity by Indian traders.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X