ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಭ್ರಷ್ಟಾಚಾರ ಪ್ರಕರಣ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ರಜಾಕ್ ಬಂಧನ

By Sachhidananda Acharya
|
Google Oneindia Kannada News

ಕೌಲಲಂಪುರ್, ಜುಲೈ 3: ಹಗರಣವೊಂದರಲ್ಲಿ ಪಾಲುದಾರರಾದ ಆರೋಪದ ಮೇಲೆ ಮಲೇಷ್ಯಾ ಮಾಜಿ ಪ್ರಧಾನಿ ನಜೀಬ್ ರಜಾಕ್ ರನ್ನು ಬಂಧಿಸಲಾಗಿದೆ.

ಮಲೇಷ್ಯಾದಲ್ಲಿ ಕುಖ್ಯಾತವಾಗಿರುವ '1ಎಂಬಿಡಿ' ಹಗರಣದಲ್ಲಿ ಮಂಗಳವಾರ ಅವರನ್ನು ಭ್ರಷ್ಟಾಚಾರ ನಿಗ್ರಹ ಸಂಸ್ಥೆಯ ಅಧಿಕಾರಿಗಳು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಅಕ್ರಮವಾಗಿ ಹಣ ಕಳ್ಳತನ ಮಾಡಿದ ಮತ್ತು ಹಣ ವರ್ಗಾವಣೆ ಮಾಡಿದ ಆರೋಪವನ್ನು ಅವರು ಹೊತ್ತಿದ್ದಾರೆ.

ಮಂಗಳವಾರ ಬೆಳಿಗ್ಗೆ ನಜೀಬ್ ಅಳಿಯ ರಿಝಾ ಅಜೀಜ್ ರನ್ನು ವಿಚಾರಣೆಗೆ ಒಳಪಡಿಸಲಾಗಿತ್ತು. ಇದಾದ ಬೆನ್ನಿಗೆ ನಜೀಬ್ ರನ್ನು ಬಂಧಿಸಲಾಗಿದೆ.

Malaysian Ex-PM Najib Razak arrested over 1MDB scandal

ಇದೇ ಹಗರಣದಿಂದಾಗಿ ನಜೀಬ್ ರಜಾಕ್ ಮೇ 9ರಂದು ಹೊರಬಿದ್ದ ಮಲೇಷ್ಯಾ ಚುನಾವಣೆ ಫಲಿತಾಂಶದಲ್ಲಿ ಸೋಲು ಕಂಡಿದ್ದರು. ದೇಶದಲ್ಲಿ ಅಧಿಕಾರಕ್ಕೆ ಬಂದಿದ್ದ ಹೊಸ ಸರಕಾರ ಈ ಹಗರಣದ ತನಿಖೆಯನ್ನು ಕೈಗೆತ್ತಿಕೊಂಡಿತ್ತು. ಇದೀಗ ಪ್ರಕರಣ ಮಾಜಿ ಪ್ರಧಾನಿಯವರ ಬಂಧನಕ್ಕೆ ಬಂದು ನಿಂತಿದೆ.

ಅಮೆರಿಕಾದ ತನಿಖಾಧಿಕಾರಿಗಳ ಪ್ರಕಾರ ರಿಜಾ ಒಡೆತನದ 'ರೆಡ್ ಗ್ರಾನೈಟ್ ಪಿಕ್ಚರ್ಸ್' '1ಎಂಡಿಬಿ'ಯಿಂದ ಹಣ ಕಳ್ಳತನ ಮಾಡಿ ಹಾಲಿವುಡ್ ಸಿನಿಮಾಗಳನ್ನು ನಿರ್ಮಾಣ ಮಾಡಲಾಗಿದೆ ಎಂದಿತ್ತು. ಇದರಲ್ಲಿ 'ದಿ ವೂಲ್ಫ್ ಆಫ್ ವಾಲ್ ಸ್ಟ್ರೀಟ್' ಕೂಡ ಸೇರಿದೆ.

ಕಳೆದ ಮಾರ್ಚ್ ನಲ್ಲಿ '1ಎಂಡಿಬಿ'ಯಿಂದ ಲಾಭವಾದ 60 ಮಿಲಿಯನ್ ಅಮೆರಿಕನ್ ಡಾಲರ್ ಹಣವನ್ನು ಅಮೆರಿಕಾ ಸರಕಾರಕ್ಕೆ ದಂಡ ರೂಪದಲ್ಲಿ ಪಾವತಿ ಮಾಡಲು ರೆಡ್ ಗ್ರಾನೈಟ್ ಒಪ್ಪಿಕೊಂಡಿದ್ದನ್ನು ಇಲ್ಲಿ ಸ್ಮರಿಸಬಹುದು.

English summary
Former Malaysian Prime Minister Najib Razak has been arrested in Kuala Lumpur, as part of probe into alleged theft and money-laundering at the 1MDB state investment fund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X