ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಜಾಕೀರ್ ನಾಯ್ಕ್‌ ಗಡಿಪಾರಿಗೆ ಮಲೇಷ್ಯಾ ನಕಾರ, ಭಾರತಕ್ಕೆ ಹಿನ್ನಡೆ

|
Google Oneindia Kannada News

ಕೌಲಾಲಂಪುರ, ಜೂನ್ 11: ಭಾರತದಲ್ಲಿ ಉಗ್ರ ಚಟುವಟಿಕೆಗಳಿಗೆ ಬೆಂಬಲ, ಧರ್ಮ ಪ್ರಕ್ಷುಬ್ಧತೆ ನಿರ್ಮಾಣ ಮತ್ತಿತರೆ ಪ್ರಕರಣಗಳನ್ನು ಎದುರಿಸುತ್ತಿರುವ ಇಸ್ಲಾಂ ಧರ್ಮ ಪ್ರಚಾರಕ, ಪೀಸ್ ಟಿವಿ ಮುಖ್ಯಸ್ಥ ಜಾಕೀರ್ ನಾಯ್ಕ್‌ ಅನ್ನು ಭಾರತಕ್ಕೆ ಗಡಿ ಪಾರು ಮಾಡುವಂತೆ ಮಾಡಿದ್ದ ಮನವಿಯನ್ನು ಮಲೇಷ್ಯಾ ತಳ್ಳಿ ಹಾಕಿದೆ.

ನರೇಂದ್ರ ಮೋದಿ ಅವರು ಮೊನ್ನೆಯಷ್ಟೆ ಮಲೇಷ್ಯಾಕ್ಕೆ ಭೇಟಿ ನೀಡಿ ಪ್ರಧಾನಿ ಮಹತ್ತಿರ್ ರಹಮಾನ್ ಅವರೊಂದಿಗೆ ಮಾತುಕತೆ ನಡೆಸಿದ್ದರು. ಜಾಕೀರ್ ನಾಯ್ಕ್‌ ಅನ್ನು ಭಾರತಕ್ಕೆ ಹಸ್ತಾಂತರಿಸುವ ಬಗ್ಗೆ ಈ ಸಮಯ ಪ್ರಸ್ತಾಪ ವಾಗಿತ್ತು.

ಮನಿಲಾಂಡ್ರಿಂಗ್ ಕೇಸ್ : ಜಾಕೀರ್ ನಾಯ್ಕ್ ವಿರುದ್ಧ ತನಿಖೆ ತೀವ್ರ ಮನಿಲಾಂಡ್ರಿಂಗ್ ಕೇಸ್ : ಜಾಕೀರ್ ನಾಯ್ಕ್ ವಿರುದ್ಧ ತನಿಖೆ ತೀವ್ರ

ಆದರೆ ಇಂದು ಹೇಳಿಕೆ ನೀಡಿರುವ ಮಲೇಷ್ಯಾ ಪ್ರಧಾನಿ, ಜಾಕೀರ್ ನಾಯ್ಕ್‌ ಅನ್ನು ಭಾರತಕ್ಕೆ ಗಡಿಪಾರು ಮಾಡದೇ ಇರುವ ಹಕ್ಕು ನಮಗೆ ಇದೆ ಎಂದು ಹೇಳಿದ್ದಾರೆ. ಆ ಮೂಲಕ ಝಕೀರ್ ಅನ್ನು ಭಾರತಕ್ಕೆ ಗಡಿ ಮಾಡದಿರುವ ನಿರ್ಣಯವನ್ನು ಮಲೇಷ್ಯಾ ಬದಲಾಯಿಸಿಲ್ಲ.

Malaysia refuses to extrodict Zakir Naik to India

2016 ರಲ್ಲಿ ಜಾಕೀರ್ ನಾಯ್ಕ್‌ ಭಾರತದಿಂದ ಹೊರ ಹೋಗಿದ್ದರು, ಅವರ ಮೇಲೆ ಪ್ರಕರಣ ದಾಖಲಾಗುತ್ತಿದ್ದಂತೆ, ಅವರು ಮತ್ತೆ ಭಾರತದೇ ಇರುವ ಬಗ್ಗೆ ನಿಶ್ಚಯಿಸಿ ಮುಸ್ಲಿಂ ದೇಶವಾದ ಮಲೇಷ್ಯಾಕ್ಕೆ ಹೋದರು, ಸರ್ಕಾರವು ಅವರಿಗೆ ವಾಸ್ತವ್ಯವನ್ನು ನೀಡಿದೆ.

ಜಾಕೀರ್ ನಾಯ್ಕ್‌ ಅನ್ನು ಭಾರತಕ್ಕೆ ಹಸ್ತಾಂತರಿಸಬೇಕು ಎಂದು ಈ ಹಿಂದೆಯೇ ಭಾರತ ಸರ್ಕಾರವು ಮಲೇಷ್ಯಾಕ್ಕೆ ಮನವಿ ಮಾಡಿತ್ತು. ಮೊನ್ನೆಯಷ್ಟೆ ಮೋದಿ ಅವರು ಮಲೇಷ್ಯಾಕ್ಕೆ ಭೇಟಿ ನೀಡಿದ ಸಂದರ್ಭ ಜಾಕೀರ್ ನಾಯ್ಕ್‌ ಭಾರತಕ್ಕೆ ಹಸ್ತಾಂತರ ಆಗಲಿದ್ದಾರೆ ಎಂದೇ ನಂಬಲಾಗಿತ್ತು, ಆದರೆ ಹಾಗೆ ಆಗಿಲ್ಲ. ಇದು ಭಾರತಕ್ಕೆ ಆದ ಸಣ್ಣ ಹಿನ್ನಡೆ ಎಂದೇ ಭಾವಿಸಲಾಗುತ್ತಿದೆ.

English summary
Malaysia prime minister Mahathir Mohammed said we have right not to extradite Zakir Naik to India. Zakir Naik is an Islamic preach, he has been under several charges in India.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X