ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ರೂಪಾಂತರಗೊಂಡಿದೆ ಕೊರೊನಾ ವೈರಸ್: ಆಘಾತಕಾರಿ ಸಂಗತಿ ತಿಳಿಸಿದ ಮಲೇಷ್ಯಾ

|
Google Oneindia Kannada News

ಕೌಲಾಲಂಪುರ, ಆಗಸ್ಟ್ 17: ಕೊರೊನಾ ವೈರಸ್ ಈ ಹಿಂದಿನಿಂದಲೂ ಪ್ರಾಣಿಗಳಲ್ಲಿ ಇತ್ತು. ಅದರ ಹೊಸ ನಮೂನೆಯ ವೈರಸ್ ಚೀನಾದಲ್ಲಿ ಮನುಷ್ಯರಿಗೆ ಹರಡಿ ಈಗ ವಿಶ್ವಕ್ಕೇ ವ್ಯಾಪಿಸಿದೆ. ನಾವೆಲ್ ಕೊರೊನಾ ವೈರಸ್ ಜಗತ್ತಿನಾದ್ಯಂತ ಮೂಡಿಸಿರುವ ಆತಂಕ, ಸಮಸ್ಯೆಗಳ ಮಧ್ಯೆಯೇ ಮತ್ತೊಂದು ಆಘಾತಕಾರಿ ಸಂಗತಿಯೊಂದನ್ನು ಮಲೇಷ್ಯಾ ತಿಳಿಸಿದೆ. ಈಗಿರುವ ಕೊರೊನಾ ವೈರಸ್ ಸೋಂಕಿಗಿಂತಲೂ ಹತ್ತು ಪಟ್ಟು ಹೆಚ್ಚು ಸಾಂಕ್ರಾಮಿಕವಾಗಿರುವ ಹೊಸ ಕೊರೊನಾ ವೈರಸ್ ಪತ್ತೆಯಾಗಿದೆ.

ಡಿ614ಜಿ ಎಂಬ ಹೆಸರಿನ ಈ ರೂಪಾಂತರಗೊಂಡ ಕೊರೊನಾ ವೈರಸ್‌, ಮಲೇಷ್ಯಾದ ಶಿವಗಂಗಾ ಕ್ಲಸ್ಟರ್‌ನಲ್ಲಿ ವರದಿಯಾದ 45 ಪ್ರಕರಣಗಳಲ್ಲಿ ಕನಿಷ್ಠ ಮೂರು ಮಂದಿಯಲ್ಲಿ ಕಂಡುಬಂದಿದೆ. ಇದು ಭಾರತದಿಂದ ಮಲೇಷ್ಯಾಕ್ಕೆ ಹಿಂದಿರುಗಿ, 14 ದಿನಗಳ ಕಡ್ಡಾಯ ಹೋಮ್ ಕ್ವಾರೆಂಟೈನ್ ಅವಧಿಯನ್ನು ಉಲ್ಲಂಘಿಸಿ ಅಡ್ಡಾಡುತ್ತಿದ್ದ ರೆಸ್ಟೋರೆಂಟ್ ಮಾಲೀಕರೊಬ್ಬರಲ್ಲಿ ಕಂಡುಬಂದಿದೆ.

ಕ್ವಾರಂಟೈನ್ ಉಲ್ಲಂಘನೆ: ಮಲೇಶಿಯಾದಲ್ಲಿ ಭಾರತೀಯ ಜೈಲು ಪಾಲು ಕ್ವಾರಂಟೈನ್ ಉಲ್ಲಂಘನೆ: ಮಲೇಶಿಯಾದಲ್ಲಿ ಭಾರತೀಯ ಜೈಲು ಪಾಲು

ಆ ವ್ಯಕ್ತಿಯನ್ನು ಐದು ತಿಂಗಳ ಜೈಲು ಮತ್ತು ದಂಡ ಕಟ್ಟಬೇಕಾದ ಶಿಕ್ಷೆಗೆ ಒಳಪಡಿಸಲಾಗಿದೆ. ಫಿಲಿಪ್ಪೀನ್ಸ್‌ನಿಂದ ಮಲೇಷ್ಯಾಕ್ಕೆ ಮರಳಿರುವ ಜನರು ಇರುವ ಪ್ರದೇಶದಲ್ಲಿಯೂ ಈ ವೈರಸ್‌ನ ತೀವ್ರತೆ ಕಂಡುಬಂದಿದೆ. ಮುಂದೆ ಓದಿ.

ಔಷಧಗಳು ಪರಿಣಾಮ ಬೀರುತ್ತಿಲ್ಲ

ಔಷಧಗಳು ಪರಿಣಾಮ ಬೀರುತ್ತಿಲ್ಲ

ಕೊರೊನಾ ವೈರಸ್‌ನಿಂದ ಗುಣಮುಖರಾಗಲು ಈಗ ನೀಡಲಾಗುತ್ತಿರುವ ಮಾತ್ರೆ ಮತ್ತು ಲಸಿಕೆಗಳು ಹೊಸ ವೈರಸ್ ಅನ್ನು ಮಣಿಸಲು ಪರಿಣಾಮಕಾರಿಯಾಗುತ್ತಿಲ್ಲ. ಅಷ್ಟರಮಟ್ಟಿಗೆ ಹೊಸ ಕೊರೊನಾ ವೈರಸ್ ಪ್ರಬಲವಾಗಿವೆ ಎಂದು ಮಲೇಷ್ಯಾದ ಆರೋಗ್ಯ ಮಹಾ ನಿರ್ದೇಶಕ ನೂರ್ ಹಿಶಾಮ್ ಅಬ್ದುಲ್ಲಾ ತಿಳಿಸಿದ್ದಾರೆ.

ಜನರಲ್ಲಿ ಜಾಗ್ರತೆ ಮುಖ್ಯ

ಜನರಲ್ಲಿ ಜಾಗ್ರತೆ ಮುಖ್ಯ

ಕೊರೊನಾ ವೈರಸ್‌ನ ಹೊಸ ರೂಪಾಂತರಿ ವೈರಸ್ ಮಲೇಷ್ಯಾದಲ್ಲಿ ಪತ್ತೆಯಾಗಿರುವುದರಿಂದ ಜನರು ಹೆಚ್ಚು ಜಾಗರೂಕ ಮತ್ತು ಇನ್ನಷ್ಟು ಹೆಚ್ಚುವರಿ ಸುರಕ್ಷತಾ ಕ್ರಮಗಳನ್ನು ತೆಗೆದುಕೊಳ್ಳಬೇಕಿದೆ. ಯಾವುದೇ ಸ್ವರೂಪದಲ್ಲಿರುವ ಸೋಂಕಿನ ಪ್ರಭಾವವನ್ನು ತಗ್ಗಿಸಲು ಜನರ ಸಹಕಾರ ಅತಿ ಅಗತ್ಯ. ನಾವು ಜತೆಯಾಗಿ ಇದನ್ನು ನಿಯಂತ್ರಿಸಬೇಕಿದೆ ಎಂದು ಅವರು ಹೇಳಿದ್ದಾರೆ.

ನಿಜಾಮುದ್ದೀನ್ ಮರ್ಕಜ್‌ಗೆ ತೆರಳಿದ್ದ ಮಲೇಷ್ಯಾದ 122 ಮಂದಿಗೆ ಜಾಮೀನುನಿಜಾಮುದ್ದೀನ್ ಮರ್ಕಜ್‌ಗೆ ತೆರಳಿದ್ದ ಮಲೇಷ್ಯಾದ 122 ಮಂದಿಗೆ ಜಾಮೀನು

ವುಹಾನ್ ವೈರಸ್‌ಗಿಂತಲೂ ಅಪಾಯಕಾರಿ

ವುಹಾನ್ ವೈರಸ್‌ಗಿಂತಲೂ ಅಪಾಯಕಾರಿ

ಚೀನಾದ ವುಹಾನ್‌ನಲ್ಲಿ ಮೊದಲು ಕಂಡುಬಂದ ವೈರಸ್‌ಗಿಂತಲೂ ಇದು ಹತ್ತುಪಟ್ಟು ಅಪಾಯಕಾರಿಯಾಗಿದೆ. ಉಲು ಟಿರಮ್ ಕ್ಲಸ್ಟರ್‌ನಲ್ಲಿ ಮೂರು ಪ್ರಕರಣಗಳಲ್ಲಿನ ಮಾದರಿಗಳಲ್ಲಿ ಈ ಪ್ರಬಲ ವೈರಸ್ ಕಂಡುಬಂದಿದೆ. ಇತರೆ ವೈರಸ್‌ಗಳಿಗೆ ಹೋಲಿಸಿದರೆ ಡಿ614ಜಿ ವೈರಸ್ ನಮ್ಮ ಉಸಿರಾಟದ ವ್ಯವಸ್ಥೆಯಲ್ಲಿ ಹೆಚ್ಚು ವೈರಾಣುಗಳನ್ನು ಉತ್ಪಾದಿಸುತ್ತದೆ. ಹಾಗೆಯೇ ವ್ಯಕ್ತಿಯಿಂದ ವ್ಯಕ್ತಿಗೆ ಇನ್ನಷ್ಟು ಪ್ರಬಲವಾಗಿ ಹರಡುತ್ತದೆ.

ಎರಡೂ ಕ್ಲಸ್ಟರ್‌ಗಳು ನಿಯಂತ್ರಣದಲ್ಲಿ

ಎರಡೂ ಕ್ಲಸ್ಟರ್‌ಗಳು ನಿಯಂತ್ರಣದಲ್ಲಿ

ಜುಲೈನಲ್ಲಿ ಡಿ614ಜಿ ವೈರಸ್ ರೂಪಾಂತರ ಮೊದಲು ಪತ್ತೆಯಾಗಿದೆ. ಪ್ರಸ್ತುತ ಕೊವಿಡ್ 19 ಚಿಕಿತ್ಸೆಗೆ ಬಳಸಲಾಗುತ್ತಿರುವ ಯಾವ ಲಸಿಕೆಯೂ ಈ ರೂಪಾಂತರಗೊಂಡ ವೈರಸ್ ಇರುವವರಲ್ಲಿ ಕೆಲಸ ಮಾಡುವಷ್ಟು ಸಮರ್ಥವಾಗಿಲ್ಲ. ಎರಡು ಕ್ಲಸ್ಟರ್‌ಗಳಲ್ಲಿ ಕೊರೊನಾ ವೈರಸ್‌ನ ಹೊಸ ರೂಪಾಂತರ ಕಂಡುಬಂದಿದ್ದು, ಅವುಗಳು ಸಾರ್ವಜನಿಕ ಆರೋಗ್ಯ ನಿಯಂತ್ರಣದಲ್ಲಿವೆ ಎಂದು ನೂರ್ ಹಿಶಾಮ್ ಅಬ್ದುಲ್ಲಾ ಅವರು ತಿಳಿಸಿದ್ದಾರೆ.

ಒಂದು ಹೊತ್ತು ಊಟಕ್ಕೂ ಪರದಾಟ; ಮಲೇಷಿಯಾದಲ್ಲಿ ಸಿಲುಕಿಕೊಂಡ ಕೋಲಾರ ವಿದ್ಯಾರ್ಥಿ ಅಳಲುಒಂದು ಹೊತ್ತು ಊಟಕ್ಕೂ ಪರದಾಟ; ಮಲೇಷಿಯಾದಲ್ಲಿ ಸಿಲುಕಿಕೊಂಡ ಕೋಲಾರ ವಿದ್ಯಾರ್ಥಿ ಅಳಲು

English summary
Malaysia detects New Coronavirus strain in two clusters that is 10 times more infectious.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X