ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಮುದ್ರಕ್ಕೆ ಬಿದ್ದ ಮಲೇಷಿಯಾ ವಿಮಾನದಲ್ಲಿ 5 ಭಾರತೀಯರು

By Srinath
|
Google Oneindia Kannada News

ಕೌಲಾಲಂಪುರ,ಮಾರ್ಚ್ 8: ಇಂದು ಬೆಳಗಿನ ಜಾವ 2 ಗಂಟೆಯಲ್ಲಿ 239 ಪ್ರಯಾಣಿಕರಿದ್ದ ಮಲೇಷಿಯಾ ವಿಮಾನ ಕಣ್ಮರೆಯಾಗಿದೆ. ಬೋಯಿಂಗ್ ವಿಮಾನವು ಮಲೇಷಿಯಾದ ಕೌಲಾಲಂಪುರದಿಂದ ಚೀನಾದ ಬೀಜಿಂಗ್ ಗೆ ಹೊರಟಿತ್ತು.

ವಿಮಾನ ಸಂಚಾರ ನಿಯಂತ್ರಣ ಕೇಂದ್ರದ ಸಂಪರ್ಕ ಕಳೆದುಕೊಂಡ ವಿಮಾನದ ಪತ್ತೆಗಾಗಿ ಕಾರ್ಯಾಚರಣೆ ಚುರುಕಿನಿಂದ ನಡೆದಿದೆ. ಆದರೆ ವಿಮಾನ ಅಪಘಾತಕ್ಕೀಡಾಗಿ, ಚೀನಾದ ಸಮುದ್ರದೊಳಕ್ಕೆ ಪತನಗೊಂಡಿರಬಹುದು. ಪ್ರಯಾಣಿಕರೆಲ್ಲಾ ಜಲಸಮಾಧಿಯಾಗಿರಬಹುದು. ಮೃತಪಟ್ಟವರಲ್ಲಿ 5 ಮಂದಿ ಭಾರತೀಯ ಪ್ರಯಾಣಿಕರು ಇದ್ದರು ಎಂದು Malaysia Airlines ಸಂಸ್ಥೆ ತಿಳಿಸಿದೆ.

Malaysia Airlines Boeing plane with 239 passengers might have fell into South China Sea

ಚೀನಾ 2 ರಕ್ಷಣಾ ಹಡಗುಗಳನ್ನು ಕಾರ್ಯಾಚರಣೆಗೆ ಬಿಟ್ಟಿದ್ದು, ಕಣ್ಮರೆಯಾದ ವಿಮಾನದ ಬಗ್ಗೆ ಇದುವರೆಗೂ ಯಾವುದೇ ಸುಳಿವು ಸಿಕ್ಕಿಲ್ಲ. ವಿಯಟ್ನಾಂ ವಾಯುನೆಲೆಯ ರಾಡಾರ್ ನಿಂದ ವಿಮಾನ ಸಂಪರ್ಕ ಕಡಿದುಕೊಂಡಿದೆ.

Boeing B777-200 ವಿಮಾನ ಸಂಸ್ಥೆಯ Flight MH 370 ವಿಮಾನವು ಕೌಲಾಲಂಪುರದಿಂದ ಮಧ್ಯರಾತ್ರಿ 12.21ಕ್ಕೆ ತೆರಳಿತ್ತು. ಬೆಳಗ್ಗೆ 6.30ಕ್ಕೆ ಬೀಜಿಂಗ್ ತಲುಪಬೇಕಿತ್ತು. ಆದರೆ ಪ್ರಯಾಣ ಆರಂಭಿಸಿದ 2 ಗಂಟೆಗಳ ತರುವಾಯ ಬೆಳಗಿನ ಜಾವ 2.40ರಲ್ಲಿ ಸಂಪರ್ಕ ಕಳೆದುಕೊಂಡಿದೆ. 1995ರಿಂದ ವಿಮಾನ ಯಾನ ಆರಂಭಿಸಿದ್ದ ಬೋಯಿಂಗ್ ವಿಮಾನಗಳು ಕಳೆದ ವರ್ಷ ಸಹ ಅಪಘಾತಕ್ಕೀಡಾಗಿದ್ದವು.

English summary
Malaysia Airlines Boeing plane with 239 passengers might have fell into South China Sea. A Malaysia Airlines en route from Kuala Lumpur to Beijing has lost contact with air traffic controllers and there are serious concerns about the safety of 227 passengers and 12 crew members.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X