ಆರು ವರ್ಷದ ನಂತರ ಸ್ವದೇಶ ಪಾಕಿಸ್ತಾನಕ್ಕೆ ಬಂದ ನೊಬೆಲ್ ಪುರಸ್ಕೃತೆ ಮಲಾಲ

Posted By:
Subscribe to Oneindia Kannada

ಇಸ್ಲಾಮಾಬಾದ್, ಮಾರ್ಚ್ 29: ಅತೀ ಕಿರಿಯ ವಯಸ್ಸಿನಲ್ಲಿ ನೊಬೆಲ್ ಶಾಂತಿ ಪ್ರಶಸ್ತಿ ಪಡೆದ ಹೆಗ್ಗಳಿಕೆಗೆ ಪಾತ್ರರಾದ ಪಾಕಿಸ್ತಾನದ ಮಲಾಲ ಯೂಸಫ್ಜಾಯ್ 6 ವರ್ಷದ ಬಳಿಕ ಸ್ವದೇಶಕ್ಕೆ ಭೇಟಿನೀಡಿದ್ದಾರೆ.

ಮುಸ್ಲಿಂ ಮಹಿಳೆಯರ ಶಿಕ್ಷಣದ ಕುರಿತು ಜಾಗೃತಿ ಮೂಡಿಸುತ್ತಿದ್ದ ಮಲಾಲ ಅವರ ಮೇಲೆ 2012 ರಲ್ಲಿ ತಾಲಿಬಾನಿಗಳು ಗುಂಡಿನ ದಾಳಿ ನಡೆಸಿದ್ದರು. ಆದರೆ ತಕ್ಷಣವೇ ಸೂಕ್ತ ಚಿಕಿತ್ಸೆ ದೊರೆತಿದ್ದರಿಂದ ಆಕೆ ಬದುಕುಳಿದಿದ್ದರು. ಈ ಹತ್ಯೆ ಪ್ರಯತ್ನದ ನಂತರ ಹೆಚ್ಚಿನ ಚಿಕಿತ್ಸೆ ಮತ್ತು ಭದ್ರತೆಯ ಕಾರಣದಿಂದ ಆಕೆ ಪಾಕಿಸ್ತಾನವನ್ನು ಬಿಟ್ಟು ಲಂಡನ್ ನಲ್ಲಿ ವಾಸಿಸುತ್ತಿದ್ದರು.

ಮಲಾಲಾಗೆ ನೊಬೆಲ್‌ ಪುರಸ್ಕಾರ ಬಂದಿದ್ದು ಹೇಗೆ?

ಇದೀಗ ಆರು ವರ್ಷದ ನಂತರ ಪಾಕಿಸ್ತಾನಕ್ಕೆ ಆಗಮಿಸಿರುವ ಅವರು ಪಾಕ್ ಪ್ರಧಾನಿ ಶಾಹಿದ ಅಬ್ಬಾಸಿ ಮತ್ತು ಸೇನಾ ಮುಖ್ಯಸ್ಥ ಕಾಮರ್ ಜಾವೇದ್ ಬಜ್ವಾ ಅವರನ್ನು ಭೇಟಿಯಾಗಿ ಮಾತುಕತೆ ನಡೆಸಲಿದ್ದಾರೆ.

Malala arrives in Pak nearly after 6 years

ತಮ್ಮ 17 ನೇ ವಯಸ್ಸಿನಲ್ಲೇ ನೊಬೆಲ್ ಶಾಂತಿ ಪ್ರಶಸ್ತಿ ಪಡೆವ ಮೂಲಕ ಅತೀ ಕಿರಿಯ ವಯಸ್ಸಿನಲ್ಲಿ ಈ ಹೆಗ್ಗಳಿಕೆಗೆ ಪಾತ್ರರಾದವರೆಂಬ ಗೌರವ ಪಡೆದವರು ಮಲಾಲ. I am Malala ಎಂಬ ಅವರ ಆತ್ಮಕಥನದಲ್ಲಿ ಪಾಕಿಸ್ತಾನದೊಂದಿಗೆ ತಮ್ಮ ಬಾಂಧವ್ಯ ಮತ್ತು ಶಾಂತಿಗಾಗಿ ನಡೆಸಿದ ಹೋರಾಟ, ಶಿಕ್ಷಣದ ಹಕ್ಕಿನ ಕುರಿತ ಜಾಗೃತಿ ಮುಂತಾದವುಗಳ ಕುರಿತು ಸವಿವರವಾಗಿ ಬರೆದುಕೊಂಡಿದ್ದಾರೆ.

ಶಾಂತಿ ನೊಬೆಲ್ ಸ್ವೀಕರಿಸಿದ ಸತ್ಯಾರ್ಥಿ, ಮಲಾಲಾ

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
The youngest Nobel laureate, Malala Yousafzaiarrived in Pakistan late Wednesday night, after spending about six years abroad. During her stay in Pakistan, the 20-year-old, is likely to hold meetings with Prime Minister Shahid Khaqan Abbasi, Army Chief General Qamar Javed Bajwa, and other important figures.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ