ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

'ಮೇಕ್ ಇನ್ ಇಂಡಿಯಾ'ಕ್ಕೆ ಇಸ್ರೇಲ್ ನೀಡಿತು ಆನೆಬಲ

ಮೇಕ್ ಇಂಡಿಯಾಕ್ಕೆ ಬಂತು ಆನೆ ಬಲ; ಕ್ಷಿಪಣಿ ಸರಬರಾಜಿನೊಂದಿಗೆ, ಕ್ಷಿಪಣಿ ನಿರೋಧಕ ತಂತ್ರಜ್ಞಾನವನ್ನೂ ತಯಾರಿಸಿ ಕೊಡಬೇಕಿದೆ ಭಾರತ ಸರ್ಕಾರ.

|
Google Oneindia Kannada News

ಜೆರುಸಲೇಂ, ಏಪ್ರಿಲ್ 7: ಅಪನಗದೀಕರಣದ ಹಿನ್ನೆಲೆಯಲ್ಲಿ ಕೊಂಚ ಸೊರಗಿದ್ದ ಮೇಕ್ ಇನ್ ಇಂಡಿಯಾಕ್ಕೆ 'ಆನೆ ಬಲ' ಬಂದಂತಾಗಿದೆ. ಇಸ್ರೇಲ್ ದೇಶವು ಭಾರತದಿಂದ 12 ಸಾವಿರ ಕೋಟಿ ರು. ಮೊತ್ತದ ಕ್ಷಿಪಣಿ ತಂತ್ರಜ್ಞಾನವನ್ನು ಪಡೆಯಲು ಮುಂದಾಗಿದ್ದು, ಇದು ಭಾರತದ ರಕ್ಷಣಾ ಸಾಮರ್ಥ್ಯಕ್ಕೆ ವಿಶ್ವಮಟ್ಟದಲ್ಲಿ ಸಂದ ಗೌರವವಾಗಿದೆ.

ಇಸ್ರೇಲ್ ಇತಿಹಾಸದಲ್ಲಿ ವಿದೇಶವೊಂದರಿಂದ ಇಷ್ಟು ಭಾರೀ ಮೊತ್ತದ ಯುದ್ಧ ಶಸ್ತ್ರಾಸ್ತ್ರ ಅಥವಾ ತಂತ್ರಜ್ಞಾನವನ್ನು ಖರೀದಿ ಮಾಡುತ್ತಿರುವುದು ಇದೇ ಮೊದಲು ಎನ್ನಲಾಗಿದೆ.

'Make in India' gets boost, Israel signs USD 2 billion missile deal with India

ಏನಿದೆ ಒಪ್ಪಂದದಲ್ಲಿ?: ಈ ಒಪ್ಪಂದವು, ಭಾರತ ಸರ್ಕಾರ ಹಾಗೂ ಇಸ್ರೇಲ್ ಏರೋಸ್ಪೇಸ್ ಇಂಡಸ್ಟ್ರೀಸ್ (ಐಎಐ) ನಡುವೆ ಏರ್ಪಟ್ಟಿದೆ. ಈ ಒಪ್ಪಂದದ ಪ್ರಕಾರ, ಭಾರತವು ಇಸ್ರೇಲ್ ಗೆ ದೂರ ಗಾಮಿ ಕ್ಷಿಪಣಿಗಳನ್ನು ತಯಾರಿಸಿ ಕೊಡಬೇಕು. ಇದರ ಜತೆಗೆ, ಕ್ಷಿಪಣಿ ನಿರೋಧ ತಂತ್ರಜ್ಞಾನವನ್ನೂ ಅಭಿವೃದ್ಧಿಪಡಿಸಿ ಕೊಡಬೇಕಿದೆ.

ಭಾರತವು ಇತ್ತೀಚಿನ ವರ್ಷಗಳಲ್ಲಿ ಕ್ಷಿಪಣಿ ತಂತ್ರಜ್ಞಾನದಲ್ಲಿ ಹೆಚ್ಚೆಚ್ಚು ಪ್ರಯೋಗಗಳನ್ನು ಮಾಡಿದ್ದು ಅವುಗಳಲ್ಲಿ ಬಹುತೇಕ ಯಶಸ್ಸನ್ನು ಕಂಡಿದೆ. ಇದನ್ನು ಗಮನಿಸಿರುವ ಇಸ್ರೇಲ್ ಈಗ ಭಾರತದಿಂದ ತಂತ್ರಜ್ಞಾನವನ್ನು ಆಮದು ಮಾಡಿಕೊಳ್ಳಲು ಸಿದ್ಧವಾಗಿದೆ.

English summary
Israel has signed a US $2 billion contract with India to supply it with missile defence systems, the state-owned Israel Aerospace Industries said on April 7th, 2017.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X