ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಅಫ್ಘಾನ್ ಸರ್ಕಾರದ ಮುಖ್ಯಸ್ಥ ಹಸನ್ ಅಖುಂದಾ ಬಗ್ಗೆ ತಿಳಿಯಿರಿ

|
Google Oneindia Kannada News

ಕಾಬೂಲ್, ಸಪ್ಟೆಂಬರ್ 7: ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ರಚಿಸಿರುವ ಹೊಸ ಸರ್ಕಾರದ ನಾಯಕತ್ವವನ್ನು ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಗಲಿಗೆ ವಹಿಸಲಾಗಿದೆ. ತಾಲಿಬಾನ್ ಮತ್ತು ಹಕ್ಕಾನಿ ನಡುವಿನ ಭಿನ್ನಾಭಿಪ್ರಾಯಗಳ ನಡುವೆ ಮುಲ್ಲಾ ಹಸನ್ ಅಖುಂದಾರನ್ನು ಆಯ್ಕೆ ಮಾಡಲಾಗಿದೆ.

ತಾಲಿಬಾನ್ ಸಂಘಟನೆ ಸಹ-ಸಂಸ್ಥಾಪಕ ಅಬ್ದುಲ್ ಘನಿ ಬರಾದಾರ್ ಉಪ ಪ್ರಧಾನಿ ಸ್ಥಾನವನ್ನು ನೀಡಲಾಗಿದೆ. ಅಬ್ದುಲ್ ಬರಾದರ್ ಮೊದಲ ಉಪ ಪ್ರಧಾನಿಯಾಗಿದ್ದು, ಮಾವ್ಲವಿ ಹನ್ನಾಫಿ ಎರಡನೇ ಉಪ ಪ್ರಧಾನಮಂತ್ರಿಯಾಗಿದ್ದಾರೆ. ಅಫ್ಘಾನಿಸ್ತಾನದ ನೂತನ ಸರ್ಕಾರದಲ್ಲಿ ಮುಲ್ಲಾ ಯಾಕೂಬ್ ರಕ್ಷಣಾ ಸಚಿವರಾಗಿ ಹಾಗೂ ಸಿರಾಜುದ್ದೀನ್ ಹಕ್ಕಾನಿ ಆಂತರಿಕ ಸಚಿವರಾಗಿ ಕಾರ್ಯ ನಿರ್ವಹಿಸಲಿದ್ದಾರೆ. ತಾಲಿಬಾನ್ ರಚಿಸಿರುವ ಹೊಸ ಸರ್ಕಾರದಲ್ಲಿ 33 ಸಚಿವರಿಗೆ ಸ್ಥಾನ ನೀಡಲಾಗುತ್ತದೆ ಎಂದು ತಿಳಿದು ಬಂದಿದೆ.

Breaking News: ಅಫ್ಘಾನ್ ಸರ್ಕಾರಕ್ಕೆ ಮೊಹಮ್ಮದ್ ಹಸನ್ ನಾಯಕತ್ವ Breaking News: ಅಫ್ಘಾನ್ ಸರ್ಕಾರಕ್ಕೆ ಮೊಹಮ್ಮದ್ ಹಸನ್ ನಾಯಕತ್ವ

ಅಫ್ಘಾನಿಸ್ತಾನ ಹೊಸ ಸರ್ಕಾರದ ಮುಖ್ಯಸ್ಥರಾಗಿ ಆಯ್ಕೆಯಾಗಿರುವ ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಹೆಸರು ವಿಶ್ವಸಂಸ್ಥೆಯ ಭಯೋತ್ಪಾದಕರ ಪಟ್ಟಿಯಲ್ಲಿದೆ. ತಾಲಿಬಾನ್ ಸರ್ಕಾರದ ನಾಯಕತ್ವ ಹೊತ್ತುಕೊಂಡಿರುವ ಅವರ ಬಗ್ಗೆ ತಿಳಿದುಕೊಳ್ಳಬೇಕಾದ ಪ್ರಮುಖ ಅಂಶಗಳನ್ನು ಇಲ್ಲಿ ಪಟ್ಟಿ ಮಾಡಲಾಗಿದೆ.

Major Points On Afghanistan Govt Head Mullah Hassan Akhund

ಮುಲ್ಲಾ ಮೊಹಮ್ಮದ್ ಹಸನ್ ಅಖುಂದಾ ಕುರಿತು ಮಾಹಿತಿ:

* ತಾಲಿಬಾನ್‌ನ ನಾಯಕತ್ವ ಮಂಡಳಿ ಮತ್ತು ನಿರ್ಧಾರ ತೆಗೆದುಕೊಳ್ಳುವ ಸಂಸ್ಥೆಯಾಗಿರುವ "ರೆಹಬರಿ ಶುರಾ" ವನ್ನು 20 ವರ್ಷಗಳ ಕಾಲ ಮುನ್ನಡೆಸಿದ್ದಾರೆ.

* ಅಫ್ಘಾನಿಸ್ತಾನದಲ್ಲಿ 2001ರಲ್ಲಿ ಯುಎಸ್ ಜೊತೆಗಿನ ಯುದ್ಧ ಪ್ರಾರಂಭವಾಗುವ ಮೊದಲು ತಾಲಿಬಾನ್ ಸರ್ಕಾರದಲ್ಲಿ ಮಂತ್ರಿಯಾಗಿದ್ದರು.

* ಮಿಲಿಟರಿ ನಾಯಕನಿಗಿಂತ ಹೆಚ್ಚು ಧಾರ್ಮಿಕ ಆಚರಣೆಗಳ ಮೇಲೆ ಹೆಚ್ಚು ನಂಬಿಕೆಯುಳ್ಳವರು ಎಂದು ತಿಳಿದು ಬಂದಿದೆ.

* ತಾಲಿಬಾನ್ ಆಧ್ಯಾತ್ಮಿಕ ನಾಯಕ ಶೇಖ್ ಹಿಬತುಲ್ಲಾ ಅಖುಂದ್ಜಾಡಾ ಜೊತೆಗೆ ಆಪ್ತರಾಗಿ ಗುರುತಿಸಿಕೊಂಡಿದ್ದರು ಎಂದು ಹೇಳಲಾಗಿದೆ.

* ಈತ ತಾಲಿಬಾನಿಗಳ ಜನ್ಮಸ್ಥಳವಾದ ಕಂದಹಾರ್‌ನವನು ಹಾಗೂ ಸಶಸ್ತ್ರ ಚಳುವಳಿಯ ಸ್ಥಾಪಕರಲ್ಲಿ ಒಬ್ಬರಾಗಿದ್ದರು.

* ಅವರು 2001 ರಲ್ಲಿ ಸಾಂಪ್ರದಾಯಿಕ ಬಾಮಿಯಾನ್ ಬುದ್ಧರ ನಾಶವನ್ನು ಅನುಮೋದಿಸಿದರು, ಇದನ್ನು "ಧಾರ್ಮಿಕ ಕರ್ತವ್ಯ" ಎಂದು ಘೋಷಿಸಿದರು.

English summary
Major Points On Afghanistan Govt Head Mullah Hassan Akhund.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X