ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಇಡೀ ಪ್ಯಾರಿಸ್‌ನ್ನು ಒಮ್ಮೆ ಬೆಚ್ಚಿ ಬೀಳಿಸಿತು ನಿಗೂಢ ಶಬ್ದ

|
Google Oneindia Kannada News

ಪ್ಯಾರಿಸ್, ಸೆಪ್ಟೆಂಬರ್ 30: ನಿಗೂಢ ಭಯಂಕರ ಶಬ್ದ ಇಡೀ ಪ್ಯಾರಿಸನ್ನೇ ಇಂದು ಬೆಚ್ಚಿಬೀಳಿಸಿದೆ. ಕೆಲವರು ಕಟ್ಟಡ ಬಿದ್ದಿರುವುದರಿಂದ ಬಂದಿರುವ ಶಬ್ದ ಅದು ಎಂದು ಹೇಳಿದ್ದರೂ ಕೂಡ ಯಾವುದೇ ಹೊಗೆ, ಬೆಂಕಿ ಏನೂ ಕಾಣಿಸಿಲ್ಲ. ಹಾಗೆಯೇ ಹತ್ತಿರದ ಉಪನಗರಗಳ ಜನರು ಕೂಡ ಶಬ್ದವನ್ನು ಕೇಳಿದ್ದಾರೆ.

ವಿಮಾನವು ಕಟ್ಟಡಕ್ಕೆ ಬಂದು ಅಪ್ಪಳಿಸಿದಾಗ ಆಗುವ ಶಬ್ದದಂತೆ ಅದು ಇತ್ತು ಎಂದು ಕೆಲವರು ವಿವರಿಸಿದ್ದಾರೆ. ಆ ಶಬ್ದ ಬಂದಾಕ್ಷಣ ಕಟ್ಟಡವೇ ಒಮ್ಮೆ ಅಲುಗಾಡಿತ್ತು ಎಂದು ಪ್ರತ್ಯಕ್ಷದರ್ಶಿ ತಿಳಿಸಿದ್ದಾರೆ. ಅದು ಸೋನಿಕ್ ಬೂಮ್ ಆಗಿರಬಹುದು ಎಂದು ಅಂದಾಜಿಸಲಾಗಿದೆ.

ಸೋನಿಕ್ ಬೂಮ್ ಎಂದರೆ ಗಾಳಿಯ ವೇಗಕ್ಕಿಂತಲೂ ಹೊರಡುವ ಯಾವುದೋ ಒಂದು ದ್ವನಿ ಅಥವಾ ಶಬ್ದದ ಕಂಪನ. ಗಾಳಿಯ ವೇಗವನ್ನೂ ಮೀರಿ ಹೊರ ಹೊಮ್ಮುವ ದ್ವನಿ ಕಂಪನಕ್ಕೆ ಸೋನಿಕ್ ಬೂಮ್ ಎನ್ನಲಾಗುತ್ತದೆ.

Major Blast In Paris, Sound Heard All Over City And Nearby Suburbs

ಎಲ್ಲಿ ಬಳಕೆಯಾಗುತ್ತದೆ? ಸೋನಿಕ್ ಬೂಮ್ ಸೂಪರ್ ಸಾನಿಕ್ ವಿಮಾನಗಳು ಅಂದರೆ ಯುದ್ಧ ವಿಮಾನಗಳಲ್ಲಿ ಬಳಕೆಯಾಗುತ್ತದೆ. ಈ ಸೂಪರ್‌ಸಾನಿಕ್ ವಿಮಾನಗಳು ಕೆಲ ಸಂದರ್ಭಗಳಲ್ಲಿ ಹಾರಾಡುವ ವೇಗ ಸೋನಿಕ್ ಬೂಮ್ ಆಗಿ ಹೊರ ಹೊಮ್ಮುತ್ತದೆ. ಈ ದ್ವನಿ ಕಂಪನ ಅಪಾರವಾಗಿರುತ್ತದೆ.

ಒಂದು ರೀತಿ ಭೂಕಂಪನದ ಅನುಭವವನ್ನು ತೆರದಿಡುತ್ತದೆ. ಕೇಳಲು ಅತ್ಯಂತ ಭಯಾನಕವಾಗಿರುತ್ತದೆ.

English summary
A major blast was heard in Paris and adjoining suburbs today. The sound of the explosion could be heard across the city and the suburbs, Reuters reported.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X