ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ವಿಶ್ವದಲ್ಲಿ ಸಂಭವಿಸಿದ ಇತರೆ ಪ್ರಮುಖ 10 ವಿಮಾನ ಅಪಘಾತಗಳು

|
Google Oneindia Kannada News

ಕ್ಯಾಲಿಕಟ್, ಆಗಸ್ಟ್ 07: ಕೇರಳದ ಕೊಜಿಕೊಡ್ ನಲ್ಲಿ ಏರ್ ಇಂಡಿಯಾ ವಿಮಾನ ಅವಘಡವೊಂದು ಸಂಭವಿಸಿದೆ. ಲ್ಯಾಂಡಿಂಗ್ ವೇಳೆ ಏರ್ ಇಂಡಿಯಾ ವಿಮಾನವು ಸ್ಕಿಡ್ ಆಗಿರುವ ಬಗ್ಗೆ ಪ್ರಾಥಮಿಕ ವರದಿಗಳಿಂದ ತಿಳಿದು ಬಂದಿದೆ.

Recommended Video

Kerala Flight Crash ನಂತರ ಮತ್ತೆ ನೆನಪಾಯ್ತು Mangalore ದುರಂತ | Oneindia Kannada

ದುಬೈನಿಂದ ಕೇರಳದ ಕೊಜಿಕೊಡ್ ಗೆ ಹೊರಟಿದ್ದ ಏರ್ ಇಂಡಿಯಾದ IX1344 ವಿಮಾನವು ಶುಕ್ರವಾರ ಸಂಜೆ 7.45ರ ವೇಳೆಗೆ ಕೇರಳದ ಕರಿಪುರ್ ವಿಮಾನ ನಿಲ್ದಾಣದಲ್ಲಿ ಲ್ಯಾಂಡಿಂಗ್ ಆಗುತ್ತಿದ್ದ ಸಂದರ್ಭದಲ್ಲಿ ಈ ಅವಘಡ ಸಂಭವಿಸಿದೆ.

ಏರ್ ಇಂಡಿಯಾ ವಿಮಾನ ದುರಂತ: 14 ಸಾವು, 123ಕ್ಕೂ ಹೆಚ್ಚು ಮಂದಿ ಗಾಯಏರ್ ಇಂಡಿಯಾ ವಿಮಾನ ದುರಂತ: 14 ಸಾವು, 123ಕ್ಕೂ ಹೆಚ್ಚು ಮಂದಿ ಗಾಯ

ಇನ್ನು ಏರ್ ಇಂಡಿಯಾದ IX1344 ವಿಮಾನದಲ್ಲಿ ಇಬ್ಬರು ಪೈಲೆಟ್ ಆರು ಮಂದಿ ಸಿಬ್ಬಂದಿ ಸೇರಿದಂತೆ 174 ಮಂದಿ ಪ್ರಯಾಣಿಕರಿದ್ದರು. ವಿಮಾನ ಅವಘಡದಲ್ಲಿ ಮೃತಪಟ್ಟವರ ಸಂಖ್ಯೆ 14 ಎಂದು ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಯನ್ನು ನಿರೀಕ್ಷಿಸಲಾಗುತ್ತಿದೆ. ವಿಶ್ವದ ಪ್ರಮುಖ 10 ವಿಮಾನ ದುರಂತಗಳ ಮಾಹಿತಿ ಇಲ್ಲಿದೆ. ಮುಂದೆ ಓದಿ...

ಮಂಗಳೂರು ವಿಮಾನ ದುರಂತ

ಮಂಗಳೂರು ವಿಮಾನ ದುರಂತ

ದುಬೈನಿಂದ ಮಂಗಳೂರಿಗೆ ಮರಳುತ್ತಿದ್ದ ಏರ್ ಇಂಡಿಯಾ ಎಕ್ಸ್ ಪ್ರೆಸ್ ವಿಮಾನ ಮಂಗಳೂರು ವಿಮಾನ ನಿಲ್ದಾಣದಲ್ಲಿ ರನ್ ಅಪಘಾತಕ್ಕೀಡಾಗಿ 160 ಮಂದಿ ಸಾವಪ್ಪಿದ್ದ ದಾರುಣ ಘಟನೆ ಶನಿವಾರ ಮೇ 22, 2010 ರಂದು 6.30 ರ ಸಮಯದಲ್ಲಿ ನಡೆದಿತ್ತು.

ಪ್ರತ್ಯಕ್ಷದರ್ಶಿಗಳ ಪ್ರಕಾರ, ಬೋಯಿಂಗ್ 737ವಿಮಾನ 4 ಹಸುಗೂಸುಗಳು ಸೇರಿದಂತೆ ಒಟ್ಟು 165 ಮಂದಿ ಪ್ರಯಾಣಿಕರಿದ್ದರು. ಮಂಗಳೂರು ವಿಮಾನ ನಿಲ್ದಾಣದಲ್ಲಿ ವಿಮಾನ ಲ್ಯಾಂಡ್ ಆಗುವ ಸಮಯದಲ್ಲಿ ರನ್ ವೇನಲ್ಲಿ ವಿಮಾನ ಅಪಘಾತಕ್ಕೀಡಾಗಿಯಿತು. ರನ್ ವೇ ದಾಟಿ ನೆಲಕ್ಕೆ ಅಪ್ಪಳಿಸುತ್ತಿದ್ದಂತೆ ಬೆಂಕಿಗೆ ಸಿಕ್ಕ ಪತಂಗದಂತೆ ವಿಮಾನ ಸುಟ್ಟು ಭಸ್ಮವಾಗಿತ್ತು.

ಕಠ್ಮಂಡು ವಿಮಾನ ಅಪಘಾತ

ಕಠ್ಮಂಡು ವಿಮಾನ ಅಪಘಾತ

ಪ್ರವಾಸಿಗರ ಸ್ವರ್ಗ ಎನಿಸಿರುವ ನೇಪಾಳದಲ್ಲಿ ಸೆಪ್ಟೆಂಬರ್ 28, 2012 ರಂದು ವಿಮಾನ ಅಪಘಾತವಾಗಿತ್ತು. 19 ಮಂದಿ ಪ್ರಯಾಣಿಕರಿದ್ದ ಸೀತಾ ಏರ್ ಲೈನ್ಸ್ ಜೆಟ್ ವಿಮಾನವೊಂದು ಬೆಟ್ಟಕ್ಕೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿತ್ತು.

ಕರಿಪುರ್ ವಿಮಾನ ದುರಂತ: ಸಂತ್ರಸ್ತರಿಗೆ ಸಹಾಯವಾಣಿ ಪ್ರಕಟಕರಿಪುರ್ ವಿಮಾನ ದುರಂತ: ಸಂತ್ರಸ್ತರಿಗೆ ಸಹಾಯವಾಣಿ ಪ್ರಕಟ

ವಿಮಾನದಲ್ಲಿದ್ದ ಅಷ್ಟೂ ಮಂದಿ ಸುಟ್ಟು ಕರಕಲಾಗಿದ್ದರು. ಸೀತಾ ಏರ್ ಲೈನ್ಸ್ ಜೆಟ್ ವಿಮಾನವು ಮೌಂಟ್ ಎವರೆಸ್ಟ್ ಪ್ರವಾಸಿ ತಾಣದ ಹೆಬ್ಬಾಗಿಲಾದ ಲುಕ್ಲಾದತ್ತ (Lukla) ಹೊರಟಿದ್ದಾಗ ಮನೋಹರ ನದಿ ಸಮೀಪ ಇಂದು ಮುಂಜಾನೆ 6.30 ರಲ್ಲಿ ಈ ಅಪಘಾತ ಸಂಭವಿಸಿತ್ತು. ಕಠ್ಮಂಡು ವಿಮಾನ ನಿಲ್ದಾಣದಿಂದ ಹೊರಟ ಕೆಲವೇ ಕ್ಷಣಗಳಲ್ಲಿ ಸಮೀಪದಲ್ಲೇ ವಿಮಾನ ಅಪಘಾತಕ್ಕೀಡಾಗಿ ಸಂಪೂರ್ಣ ಭಸ್ಮವಾಗಿದೆ. ಇಟಲಿಯ 16 ಪ್ರವಾಸಿಗರು 3 ಮಂದಿ ಸಿಬ್ಬಂದಿ ವಿಮಾನದಲ್ಲಿ ಪ್ರಯಾಣಿಸುತ್ತಿದ್ದರು.

ಬಾಲಿಯಲ್ಲಿ ಸಮುದ್ರಕ್ಕೆ ಬಿದ್ದ ವಿಮಾನ

ಬಾಲಿಯಲ್ಲಿ ಸಮುದ್ರಕ್ಕೆ ಬಿದ್ದ ವಿಮಾನ

ಸುಮಾರು 100 ಪ್ರಯಾಣಿಕರನ್ನು ಕರೆದೊಯ್ಯುತ್ತಿದ್ದ ಲಯನ್ ಏರ್ ಕ್ರಾಫ್ಟ್ ಬಾಲಿಯಲ್ಲಿರುವ ಸಮುದ್ರಕ್ಕೆ ಎಪ್ರಿಲ್ 13, 2013 ರಂದು ಬಿದ್ದಿತ್ತು. ಅದೃಷ್ಟವಶಾತ್ ಎಲ್ಲ ಪ್ರಯಾಣಿಕರು ಸುರಕ್ಷಿತವಾಗಿದ್ದರು. ಸಮುದ್ರಕ್ಕೆ ಬಿದ್ದ ಕೂಡಲೆ ವಿಮಾನ ಎರಡು ಭಾಗಗಳಾಗಿದೆ ಎಂದು ಹೇಳಲಾಗಿತ್ತು. ನಂತರ ಸಮುದ್ರಕ್ಕೆ ನುಗ್ಗಿದ್ದರೂ ಪ್ರಯಾಣಿಕರಿಗೆ ಯಾವುದೇ ಪ್ರಾಣಾಪಾಯವಾಗಿರಲಿಲ್ಲ. ಪ್ರಯಾಣಿಕರನ್ನು ಹತ್ತಿರದ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಇಂಡೋನೇಷ್ಯಾದ ರೆಸಾರ್ಟ್ ದ್ವೀಪ ಬಾಲಿಯಲ್ಲಿ ರನ್ ವೇ ನಲ್ಲಿ ಇಳಿಯುತ್ತಿದ್ದಾಗ ನಿಯಂತ್ರಣ ತಪ್ಪಿ ವಿಮಾನ ಸಮುದ್ರಕ್ಕೆ ನುಗ್ಗಿದೆ. ವಿಮಾನ ಬಂಡುಂಗ್ ನಿಂದ ಬಂದು ಬಾಲಿಯಲ್ಲಿ ಇಳಿಯುತ್ತಿತ್ತು.

ತೈವಾನ್ ವಿಮಾನ ದುರಂತ

ತೈವಾನ್ ವಿಮಾನ ದುರಂತ

ಮಲೇಷಿಯಾ ವಿಮಾನ ದುರಂತ ಸಂಭವಿಸಿದ ಕೆಲವೇ ದಿನಗಳ ಅಂತರದಲ್ಲಿ ಅಂದರೆ ಜುಲೈ 23, 2014 ರಂದು ಮತ್ತೊಂದು ವಿಮಾನ ದುರಂತ ಸಂಭವಿಸಿತ್ತು. 58 ಪ್ರಯಾಣಿಕರಿದ್ದ ತೈವಾನ್ ವಿಮಾನ ಬುಧವಾರ ಸಂಜೆ ಅಪಘಾತಕ್ಕೀಡಾಗಿದ್ದು, 50ಕ್ಕೂ ಹೆಚ್ಚು ಪ್ರಯಾಣಿಕರು ಸಾವಿಗೀಡಾಗಿದ್ದರು.

ಮಂಗಳೂರಿನ ವಿಮಾನ ದುರಂತ ನೆನಪಿಸಿದ ಕೋಳಿಕ್ಕೋಡ್ ಅವಘಡ: ಏನಿದು ಟೇಬಲ್ ಟಾಪ್ ರನ್ ವೇಮಂಗಳೂರಿನ ವಿಮಾನ ದುರಂತ ನೆನಪಿಸಿದ ಕೋಳಿಕ್ಕೋಡ್ ಅವಘಡ: ಏನಿದು ಟೇಬಲ್ ಟಾಪ್ ರನ್ ವೇ

ತೈವಾನ್‌ನ ಮಗಾಂಗ್ ಏರ್ಪೋರ್ಟ್ ನಲ್ಲಿ ಎರಡನೇ ಬಾರಿ ತುರ್ತಾಗಿ ಇಳಿಯುವಾಗ ಟ್ರಾನ್ಸ್ ಏಷ್ಯಾ ಏರ್‌ಲೈನ್ಸ್ ಗೆ ಸೇರಿದ ವಿಮಾನ ಅಪಘಾತಕ್ಕೀಡಾಗಿತ್ತು. ತೈವಾನ್ ರಾಜಧಾನಿ ತೈಪೆಯಿಂದ ಸಣ್ಣ ದ್ವೀಪವಾದ ಪೆಂಘುಗೆ ಹೊರಟಿತ್ತು. ನಡುಮಧ್ಯದಲ್ಲಿ ಎಮರ್ಜೆನ್ಸಿ ಲ್ಯಾಂಡಿಂಗ್ ಮಾಡುವಾಗ ದುರಂತಕ್ಕೀಡಾಗಿತ್ತು.

ಫ್ರಾನ್ಸ್ ವಿಮಾನ ಅಪಘಾತ

ಫ್ರಾನ್ಸ್ ವಿಮಾನ ಅಪಘಾತ

ದಕ್ಷಿಣ ಫ್ರಾನ್ಸ್ ನಲ್ಲಿ ಮಾರ್ಚ್ 24, 2015 ರಂದು ವಿಮಾನ ದುರಂತ ಸಂಭವಿಸಿದ್ದು, 148 ಜನ ಪ್ರಯಾಣಿಕರು ಸಾವಿಗೀಡಾಗಿದ್ದರು. ಜರ್ಮನ್ ವಿಂಗ್ಸ್ ಗೆ ಸೇರಿದ ವಿಮಾನ ಪತನವಾಗಿದ್ದು, ಪೈಲೆಟ್ ಸೇರಿದಂತೆ ಎಲ್ಲ ಪ್ರಯಾಣಿಕರು ದುರ್ಮರಣಕ್ಕೀಡಾಗಿದ್ದರು. ಬಾರ್ಸಿಲೋನಾದಿಂದ ಡಸ್ಸೆಲ್​ಡೋರ್ಪ್ ಗೆ ಪ್ರಯಾಣ ಬೆಳೆಸುತ್ತಿದ್ದ ವಿಮಾನ ಡಿಗ್ನೆ-ಲೆಸ್-ಬೈನ್ಸ್ ಬಳಿ ಪತನಗೊಂಡಿತ್ತು.

6 ಸಾವಿರ ಅಡಿ ಎತ್ತರದಲ್ಲಿ ವಿಮಾನ ಪತನವಾಗಿತ್ತು ಎಂದು ಹೇಳಲಾಗಿದ್ದು, ರಾಡಾರ್ ವ್ಯಾಪ್ತಿಯಿಂದ ಕಣ್ಮರೆಯಾಗಿತ್ತು. ವಿಮಾನದಲ್ಲಿದ್ದ ಯಾರೋಬ್ಬರೂ ಬದುಕಿ ಉಳಿದಿರುವ ಸಾಧ್ಯತೆಗಳಿಲ್ಲ ಎಂದು ಫ್ರೆಂಚ್ ಅಧ್ಯಕ್ಷ ಫ್ರಾಂಕೋಯಿಸ್ ಹೊಲ್ಲಾಂಡೆ ಸ್ಪಷ್ಟಪಡಿಸಿದ್ದರು.

ಇರಾನ್ ವಿಮಾನ ಪತನ

ಇರಾನ್ ವಿಮಾನ ಪತನ

ಇರಾನ್ನಿನ ವಾಣಿಜ್ಯ ವಿಮಾನವೊಂದು ಫೆಬ್ರವರಿ 18, 2018 ರಂದು ಪತನಗೊಂಡಿತ್ತು. ವಿಮಾನದಲ್ಲಿದ್ದ ಎಲ್ಲಾ 66 ಪ್ರಯಾಣಿಕರು ಹಾಗೂ ಸಿಬ್ಬಂದಿಗಳು ದುರಂತ ಅಂತ್ಯ ಕಂಡಿದ್ದಾರೆ ಎಂದು ಇರಾನ್ ಸರ್ಕಾರ ಪ್ರಕಟಿಸಿತ್ತು. ಪ್ರತಿಕೂಲ ಹವಾಮಾನದಿಂದ ವಿಮಾನವು ನಿಯಂತ್ರಣ ತಪ್ಪಿ ಪರ್ವತವೊಂದಕ್ಕೆ ಡಿಕ್ಕಿ ಹೊಡೆದಿದೆ, ನಂತರ ದಕ್ಷಿಣ ಇರಾನಿನ ಸೆಮಿರಾಮ್ ಪಟ್ಟಣದಲ್ಲಿ ವಿಮಾನದ ಅವಶೇಷಗಳು ಪತ್ತೆಯಾಗಿವೆ ಎಂದು ಐಎಸ್ಎನ್ಎ ಸುದ್ದಿ ಸಂಸ್ಥೆ ವರದಿ ಮಾಡಿತ್ತು. ತೆಹರಾನ್ ನಿಂದ ಇಸ್ ಫಾಹಾನ್ ಪ್ರಾಂತ್ಯದ ಯಸೂಜ್ ಎಂಬ ಪುಟ್ಟ ಪಟ್ಟಣಕ್ಕೆ ವಿಮಾನ ತೆರಳುತ್ತಿತ್ತು.

ಕಜಕಿಸ್ತಾನ ವಿಮಾನ ಅಪಘಾತ

ಕಜಕಿಸ್ತಾನ ವಿಮಾನ ಅಪಘಾತ

ಡಿಸೆಂಬರ್ 27, 2019 ರಂದು ಕಜಕಿಸ್ತಾನದ ಅಲ್ಮಾಟಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಸುಮಾರು 100 ಪ್ರಯಾಣಿಕರಿದ್ದ ಬೇಕ್ ಏರ್‌ಲೈನ್ ಸಂಸ್ಥೆಯ ಪ್ರಯಾಣಿಕ ವಿಮಾನವು ಟೇಕಾಫ್ ಆಗುವ ವೇಳೆ ಅಪಘಾತಕ್ಕೀಡಾಗಿತ್ತು. ಘಟನೆಯಲ್ಲಿ ಅಪಾರ ಸಾವು ನೋವು ಸಂಭವಿಸಿದೆ ಎಂದು ಹೇಳಲಾಗಿದೆ. ಮೃತಪಟ್ಟವರು ಹಾಗೂ ಬದುಕುಳಿದವರ ಬಗ್ಗೆ ಸಂಪೂರ್ಣ ಮಾಹಿತಿ ದೊರಕಿಲ್ಲ. ದುರಂತದಲ್ಲಿ ಕನಿಷ್ಠ 14 ಮಂದಿ ಮೃತಪಟ್ಟಿದ್ದರು. ಬೇಕ್ ಏರ್‌ಲೈನ್ ವಿಮಾನವು ಟೇಕಾಫ್ ಆಗುತ್ತಿದ್ದಂತೆಯೇ ತನ್ನ ನಿಯಂತ್ರಣ ಕಳೆದುಕೊಂಡು ಸಮೀಪದ ಎರಡು ಮಹಡಿ ಕಟ್ಟಡಕ್ಕೆ ಡಿಕ್ಕಿ ಹೊಡೆದಿದೆ ಎಂದು ಸ್ಥಳೀಯ ಅಧಿಕಾರಿಗಳು ತಿಳಿಸಿದ್ದರು. ಘಟನೆಯಲ್ಲಿ ಕೆಲವರು ಬದುಕುಳಿದಿದ್ದರು.

ಅಫ್ಘಾನಿಸ್ತಾನ ವಿಮಾನ ಅವಘಡ

ಅಫ್ಘಾನಿಸ್ತಾನ ವಿಮಾನ ಅವಘಡ

83 ಪ್ರಯಾಣಿಕರನ್ನು ಹೊತ್ತು ಸಾಗುತ್ತಿದ್ದ ಅರಿಯಾನ ಏರ್‌ಲೈನ್ಸ್ ಅಫ್ಘಾನಿಸ್ತಾನದ ಘಜನಿ ಪ್ರಾಂತ್ಯದಲ್ಲಿ ಜನವರಿ 27, 2020 ರಂದು ಪತನವಾಗಿತ್ತು. ಈ ಬಗ್ಗೆ ಘಜನಿ ನಗರದಲ್ಲಿರುವ ಪ್ರಾಂತೀಯ ಗವರ್ನರ್​ ಕಚೇರಿಯ ವಕ್ತಾರ ಆರೀಫ್​ ನೂರಿ ಮಾತನಾಡಿ, ಬೋಯಿಂಗ್​ ವಿಮಾನವು ಅರಿಯಾನ ಆಫ್ಘಾನ್​ ಏರ್​ಲೈನ್​ಗೆ ಸೇರಿದ್ದಾಗಿದೆ. ಸ್ಥಳೀಯ ಕಾಲಮಾನ ಮಧ್ಯಾಹ್ನ 1:10ರ ಸುಮಾರಿಗೆ ಘಜನಿ ಪ್ರಾಂತ್ಯದ ದೇಹ್​ ಏಕ್​ ಜಿಲ್ಲೆಯ ಸಾಡೋ ಖೇಲ್​ ಏರಿಯಾದಲ್ಲಿ ಪತನವಾಗಿದೆ ಎಂದು ಹೇಳಿದ್ದರು.

ವಿಮಾನದಲ್ಲಿ ಒಟ್ಟು 83 ಪ್ರಯಾಣಿಕರಿದ್ದರು ಎಂದು ತಿಳಿದುಬಂದಿದ್ದು, ವಿಮಾನವು ತಾಲಿಬಾನ್​ ಏರಿಯಾದಲ್ಲಿ ಪತನವಾಗಿತ್ತು ಎಂದು ಹೇಳಲಾಗುತ್ತಿದೆ.

ಎವರೆಸ್ಟ್ ಹೆಬ್ಬಾಗಿಲು ಲೂಕ್ಲಾದಲ್ಲಿ ವಿಮಾನ ದುರಂತ

ಎವರೆಸ್ಟ್ ಹೆಬ್ಬಾಗಿಲು ಲೂಕ್ಲಾದಲ್ಲಿ ವಿಮಾನ ದುರಂತ

ಇಲ್ಲಿನ ತೇನ್ಜಿಂಗ್ ಹಿಲ್ಲರಿ ವಿಮಾನ ನಿಲ್ದಾಣದಲ್ಲಿ ಏಪ್ರಿಲ್ 14, 2019 ರಂದು ದುರಂತ ಸಂಭವಿಸಿತ್ತು. ಸಮ್ಮಿಟ್ ಏರ್ ಸಂಸ್ಥೆ(ಗೋಮಾ ಏರ್) ಗೆ ಸೇರಿರುವ ಲಘು ವಿಮಾನವೊಂದು ದುರಂತಕ್ಕೀಡಾಗಿದ್ದು, ಕೋ ಪೈಲಟ್ ಸೇರಿ ಮೂವರು ಮೃತಪಟ್ಟಿದ್ದು, 5ಕ್ಕೂ ಅಧಿಕ ಮಂದಿ ಗಾಯಗೊಂಡಿದ್ದರು. ನೇಪಾಳದ ಸೋಲೋ ಕುಂಬು ಕಣಿವೆ ಪ್ರದೇಶದಲ್ಲಿರುವ ಲೂಕ್ಲಾ ವಿಮಾನ ನಿಲ್ದಾಣವು ಎವರೆಸ್ಟ್ ಬೇಸ್ ಕ್ಯಾಂಪ್ ಟ್ರೆಕ್ ಹೋಗುವವರಿಗೆ ಹೆಬ್ಬಾಗಿಲಾಗಿದೆ. ಕಠ್ಮಂಡು ವಿಮಾನ ನಿಲ್ದಾಣವನ್ನು ಜೂನ್ 31ರ ತನಕ ಮುಚ್ಚಲಾಗಿದ್ದು, ಲೂಕ್ಲಾದಿಂದ ಈ ವಿಮಾನವು ರಾಮೆಚಾಪ್ ಗೆ ತೆರಳುತ್ತಿತ್ತು ಎಂದು ತಿಳಿದು ಬಂದಿದೆ.

ಕಟ್ಟಡವೊಂದಕ್ಕೆ ಡಿಕ್ಕಿದಿದ್ದ ಏರ್ ಇಂಡಿಯಾ ವಿಮಾನ

ಕಟ್ಟಡವೊಂದಕ್ಕೆ ಡಿಕ್ಕಿದಿದ್ದ ಏರ್ ಇಂಡಿಯಾ ವಿಮಾನ

ನವೆಂಬರ್ 29, 2018 ರಂದು ಏರ್ ಇಂಡಿಯಾ ವಿಮಾನ ಕಟ್ಟಡವೊಂದಕ್ಕೆ ಡಿಕ್ಕಿ ಹೊಡೆದಿತ್ತು. ಆಗ ಸಂಭವಿಸಬಹುದಾಗಿದ್ದ ಭಾರಿ ಅನಾಹುತ ಅದೃಷ್ಟವಶಾತ್ ತಪ್ಪಿಹೋಗಿತ್ತು. 179 ಪ್ರಯಾಣಿಕರಿದ್ದ ವಿಮಾನ, ಸ್ವೀಡನ್‌ ರಾಜಧಾನಿ ಸ್ಟಾಕ್‌ಹೋಮ್‌ನ ಅರ್ಲಾಂಡಾ ವಿಮಾನ ನಿಲ್ದಾಣದಲ್ಲಿ ಅವಘಡಕ್ಕೆ ಒಳಗಾಗಿ, ಪ್ರಯಾಣಿಕರಿಗೆ ಯಾವುದೇ ಹಾನಿಯಾಗಿಲ್ಲ ಎಂದು ಪೊಲೀಸರು ತಿಳಿಸಿದ್ದರು. ವಿಮಾನದ ಹೊರಭಾಗದ ರೆಕ್ಕೆ ಗೇಟ್‌ಗೆ ಬಡಿದು ಈ ಅಪಘಾತ ಸಂಭವಿಸಿತ್ತು. ನಿಲ್ದಾಣ ಪ್ರವೇಶಿಸಿದ ಬಳಿಕ ಪ್ರಯಾಣಿಕರನ್ನು ಸಂಚಾರಿ ಮೆಟ್ಟಿಲಿನ ಸಹಾಯದಿಂದ ಸುರಕ್ಷಿತವಾಗಿ ಕೆಳಕ್ಕೆ ಇಳಿಸಲಾಗಿತ್ತು.

English summary
Air India flight crashes in Kozhikode, Kerala. Here is information on the top 10 Air Crashes in the world. Read More..
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X